ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭ: ಕಲಾವಿದ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಅವರಿಗೆ ಪ್ರಶಸ್ತಿ

ಕಾರ್ಕಳ: ಕಾರ್ಕಳ ಹಿರ್ಗಾನ ಶ್ರೀ ಕುಂದೇಶ್ವರ ದೇವಸ್ಥಾನ ದಿಂದ ಕೊಡಮಾಡುವ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಯನ್ನು ಜಾತ್ರೆಯ ಸಂದರ್ಭ ಕಲಾವಿದ ಕದ್ರಿ ರಾಮಚಂದ್ರ ಭಟ್ ಎಲ್ಲೂರು ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಮೇರು ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ದಿನಕ್ಕೆ ನಾಲ್ಕು ಯಕ್ಷಗಾನ ಪ್ರದರ್ಶನ ಕ್ಕೆ ಹೋಗುತ್ತೇವೆ. ಆದರೆ ಬಾಲ- ಯುವ ಪ್ರತಿಭೆಗಳು ವೃತ್ತಿಪರ ಕಲಾವಿದರಂತೆ, ಅವರನ್ನು ಮೀರಿಸಿ ಪ್ರದರ್ಶನ ನೀಡಿದಾಗ ನಮಗೆ ಆತ್ಮತೃಪ್ತಿ ಯಾಗುತ್ತದೆ. ಅಂಥ ಕಾರ್ಯಕ್ರಮಗಳಲ್ಲಿ ಇದೂ ಒಂದು ಎಂದರು. […]
ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಆಯ್ಕೆ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರಾಗಿ ಕುಯಿಲಾಡಿ ಸುರೇಶ್ ನಾಯಕ್ ಅವರು ಆಯ್ಕೆಯಾಗಿದ್ದಾರೆ. ಇವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಕುಯಿಲಾಡಿ ಅವರು ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿವರ್ಹಿಸಿದ್ದಾರೆ. ಪ್ರಸ್ತುತ ಉಡುಪಿ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷರೂ ಆಗಿದ್ದಾರೆ. ಉಡುಪಿ ಹಾಗೂ ಕಾಪು ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉದಯ ಅವರಿಗೆ ಡಾಕ್ಟರೇಟ್

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಉದಯ ಅವರು ‘ಡೆವಲಪ್ಮೆಂಟ್ ಆಂಡ್ ಕ್ಯಾರೆಕ್ಟರೈಸೇಶನ್ ಆಫ್ ಸಿಎನ್‌ಟಿ ಆಂಡ್ ಫ್ಲೈ ಆಶ್ ರಿಇನ್ಫೋರ್ಸ್ಡ್ ಅಲ್ಯೂಮಿನಿಯಂ ಮ್ಯಾಟ್ರಿಕ್ಸ್ ಕಾಂಪೊಸಿಟ್ಸ್’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಇತ್ತೀಚೆಗೆ ಡಾಕ್ಟರೇಟ್ ಪದವಿ ಘೋಷಿಸಿದೆ. ಇವರು ಮೂಡಬಿದ್ರೆಯ ಆಳ್ವಾಸ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು. ಇವರು ಪದ್ಮನಾಭ ದೇವಾಡಿಗ ಹಾಗೂ ವನಜಾ […]
ಕುಂದಾಪುರ: ದೇವದಾರು ಮರಕ್ಕೆ ಕೊಡಲಿ ಏಟು: ಉಡುಪಿ XPRESS ವರದಿಗೆ ಎಸಿ ಸ್ಪಂದನೆ

-ಶ್ರೀಕಾಂತ ಹೆಮ್ಮಾಡಿ ಕುಂದಾಪುರ ಕುಂದಾಪುರ: ಅಭಿವೃದ್ದಿಯ ಹೆಸರಿನಲ್ಲಿ ಇಲ್ಲಿನ ಕೋರ್ಟ್ ಆವರಣದ ಎದುರಿರುವ ಬೃಹದಾಕಾರದ ದೇವದಾರು ಮರಗಳ ಬೇರುಗಳನ್ನು ತುಂಡರಿಸಿದ ಬಗ್ಗೆ ಉಡುಪಿ XPRESS ಪ್ರಕಟಿಸಿದ ವಿಶೇಷ ವರದಿಗೆ ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಸ್ಪಂದಿಸಿದ್ದಾರೆ. “ನೆರಳು ಕೊಡೋ ಮರದ ಕೊರಳು ಕತ್ತರಿಸಿದ ಕುಂದಾಪುರ ಪುರಸಭೆ” ಎಂಬ ಶೀರ್ಷಿಕೆಯಡಿಯಲ್ಲಿ ಉಡುಪಿ XPRESS ಸೋಮವಾರ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. UDUPI XPRESS ವರದಿಗೆ ಸ್ಪಂದಿಸಿರುವ ಎಸಿ ಕೆ. ರಾಜು ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ […]
ಪೊದಾರ್ ಶಾಲೆಯಲ್ಲಿ ಗಣರಾಜೋತ್ಸವ ಆಚರಣೆ

ಉಡುಪಿ:ಪೊದಾರ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಗಣರಾಜೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಪ್ರಗತಿಪರ ಕೃಷಿಕರು, ಜನನಿ ಫಾರ್ಮ್‌ನ ಸ್ಥಾಪಕರಾದ ನಾಗರಾಜ್ ಧ್ವಜಾರೋಹಣ ಮಾಡಿದರು. ಮಕ್ಕಳಿಂದ ದೇಶಭಕ್ತಿ ಗೀತೆ ಗಾಯನ ನಡೆಯಿತು. ಶಿಕ್ಷಕಿ ವೇದಾವತಿ ಪುರೋಹಿತ ಮಕ್ಕಳಿಗೆ ನಮ್ಮ ದೇಶದ ಸಂವಿಧಾನದ ಪ್ರಸ್ತಾವನೆಯ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳಾದ ಅದಿತ್ ಮತ್ತು ರಶಾದ್ ಗಣರಾಜೋತ್ಸವ ದಿನದ ಮಹತ್ವ ಬಗ್ಗೆ ಭಾಷಣ ಮಾಡಿದರು. ಶಾಲಾ ಪ್ರಾಂಶುಪಾಲರಾದ ಎಮ್.ಎಸ್.ಹಿರೇಮಠ ಮಾತನಾಡಿ, ನಾವು ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಸುಮಾರು ಇನ್ನೂರು ವರ್ಷಗಳ ಕಾಲ ನಮ್ಮ ಹಿರಿಯರ ತ್ಯಾಗ […]