ಮಾ.7,8: ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ, ಕೈಪಿಡಿ ಬಿಡುಗಡೆ

ಮಂಗಳೂರು: ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಾ.7 ಮತ್ತು 8ರಂದು ನಡೆಯಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನ ಪೂರ್ವಭಾವಿಯಾಗಿ ‘ಮಾಹಿತಿ ಕೈಪಿಡಿ’ಯನ್ನು ಶಾಸಕ, ಸಮ್ಮೇಳನ ಕಾರ್ಯಾಧ್ಯಕ್ಷ ಡಿ.ವೇದವ್ಯಾಸ ಕಾಮತ್ ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಬಿಡುಗಡೆಗೊಳಿಸಿದರು. ಇಂತಹ ಸಮ್ಮೇಳನದಿಂದ ರಾಜ್ಯಮಟ್ಟದಲ್ಲಿ ಮಂಗಳೂರು ಖ್ಯಾತಿ ಪಡೆಯಲಿದೆ. ಬ್ರಾೃಂಡ್ ಮಂಗಳೂರು ಪರಿಕಲ್ಪನೆ ಸಾಧ್ಯವಾಗುವುದರ ಜತೆಗೆ ಮಂಗಳೂರಿನ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ರಾಜ್ಯಮಟ್ಟದ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದು, ಯಾವುದೇ ಜವಾಬ್ದಾರಿ ನೀಡಿದರೂ ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದರು. […]

ಕಿರಿಮಂಜೇಶ್ವರ: ಹುಡುಗಿ ನೀಡಿದ ದೂರಿನ ವಿಚಾರಣೆಗೆ ಠಾಣೆಗೆ ಹೋಗಿದ್ದ ಯುವಕ ಕೊನೆಗೆ ಸಿಕ್ಕಿದ್ದು ಶವವಾಗಿ !

ಕುಂದಾಪುರ: ಯುವತಿಯೊಬ್ಬಳು ನೀಡಿದ ದೂರು ಅರ್ಜಿಯ ಹಿನ್ನೆಲೆ ಯುವಕನೋರ್ವನನ್ನು ವಿಚಾರಣೆಗೆಂದು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ ಬಳಿಕ ರೈಲ್ವೆ ಹಳಿಯ ಮೇಲೆ ಛಿದ್ರಗೊಂಡ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾದ ಕಳವಳಕಾರಿ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಗೂರಿನಲ್ಲಿ ನಡೆದಿದೆ. ಕಿರಿಮಂಜೇಶ್ವರ ಶಾಲೆಬಾಗಿಲು ನಿವಾಸಿ ರಾಮ ಪೂಜಾರಿ(32) ಸಾವನ್ನಪ್ಪಿದ ದುರ್ದೈವಿ. ಯುವಕನ ಕುಟುಂಬಿಕರು ಆಕ್ರೋಷ ವ್ಯಕ್ತಪಡಿಸಿ ಮಂಗಳವಾರ ಮಧ್ಯಾಹ್ನ ೨ ಗಂಟೆಯವರೆಗೂ ಶವವನ್ನು ರೈಲು ಹಳಿ ಪಕ್ಕವೇ ಇಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. […]

ಜನರ ಬೇಡಿಕೆಗಳನ್ನು ಪೂರೈಸಲು ಪ್ರಯತ್ನಿಸುತ್ತೇನೆ: ಶಾಸಕ ಕಾಮತ್

ಮಂಗಳೂರು: ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಇಂದು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕ ಭೇಟಿ ನಡೆಸಿದರು. ಜನಪ್ರತಿನಿಧಿಯಾಗಿ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಾರ್ವಜನಿಕ ಭೇಟಿ ಕಾರ್ಯಕ್ರಮ ವಾರದ ಒಂದು ದಿನ ನಡೆಸಲಾಗುತ್ತದೆ. ಸಾರ್ವಜನಿಕ ವಲಯದ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಕಾರಿಯಾಗಿದೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ. ಯೋಜನೆ ರೂಪಿಸಿ ಕೈಗೊಳ್ಳುವ ದೊಡ್ಡಮಟ್ಟದ ಕಾಮಗಾರಿಗಳ ಹೊರತಾಗಿ ತಕ್ಷಣ ಪರಿಹರಿಸಬಹುದಾದ ಕೆಲಸಗಳನ್ನು ಮಾಡಿಕೊಡುತ್ತೇನೆ. ಸ್ಥಳೀಯ ಮುಖಂಡರ ಮೂಲಕ […]

ಶ್ರೀ ಕ್ಷೇತ್ರ ಕಟೀಲು ಬ್ರಹ್ಮಕಲಶೋತ್ಸವದ ಸಿದ್ಧತೆ ಭರದಿಂದ ಸಾಗ್ತಿದೆ: ಉಮಾನಾಥ ಕೋಟ್ಯಾನ್

ಮಂಗಳೂರು: ಶ್ರೀಕ್ಷೇತ್ರ ಕಟೀಲು ಬ್ರಹ್ಮಕಲಶೋತ್ಸವದ ಸಿದ್ಧತೆ ವೇಗದಿಂದ ಸಾಗುತ್ತಿದೆ ಈಗಾಗಲೇ ಧಾರ್ಮಿಕ, ಸಾಂಸ್ಕೃತಿಕ, ಭಜನಾ ಮತ್ತು ಸಭಾ ಕಾರ್ಯಕ್ರಮಗಳ ಸಿದ್ಧತೆಯಾಗಿದೆ. ಜ.22ರಿಂದ ಫೆ.3 ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು. ಅವರು ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಜ.24ರಂದು ಸುವರ್ಣ ಧ್ವಜಪ್ರತಿಷ್ಠೆ, 3೦ರಂದು ಬ್ರಹ್ಮಕಲಶ, ಫೆ.೧ರಂದು ನಾಗಮಂಡಲ, ೨ರಂದು ಕೋಟಿಜಪ ಯಜ್ಞ ಹಾಗೂ ೩ರಂದು ಸಹಸ್ರ ಚಂಡಿಕಾಯಾಗ ನಡೆಯಲಿದೆ. ಹದಿಮೂರು ದಿನಗಳ ಕಾಲ ನಡೆಯುವ ಈ ಉತ್ಸವವನ್ನು ಯಶಸ್ವಿಯಾಗಿ […]

ಉಡುಪಿ ಬಿಷಪ್ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ದೂರು ದಾಖಲು

ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರ ವಿರುದ್ದ ಕೆಟ್ಟ ಭಾಷೆಯಲ್ಲಿ ನಿಂದಿಸಿರುವ ವ್ಯಕ್ತಿಯ  ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಮನವಿ ಸಲ್ಲಿಸಲಾಯಿತು. 2020 ರ ಜನವರಿ 19ರಂದು ಭಾನುವಾರ ಉಡುಪಿ ಜಿಲ್ಲೆಯ ಸಂತೆಕಟ್ಟೆ ಮೌಂಟ್ ರೋಸರಿ ಚರ್ಚಿನ ಆವರಣದಲ್ಲಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಕೆಥೊಲಿಕ್ ಕ್ರೈಸ್ತರ ಬೃಹತ್ ಸಮಾವೇಶಜರುಗಿದ್ದು ಇದರ ಉದ್ಘಾಟನೆಯನ್ನು ಉಡುಪಿ ಧರ್ಮಾಧ್ಯಕ್ಷರಾದ […]