ಎಸ್ಪಿ ನಿಶಾ ಜೇಮ್ಸ್ ವರ್ಗಾವಣೆ ಸಹಜ ಪ್ರಕ್ರಿಯೆ, ನಮ್ಮ ಹಸ್ತಕ್ಷೇಪವಿಲ್ಲ: ರಘುಪತಿ ಭಟ್
ಉಡುಪಿ: ಜಿಲ್ಲೆಯ ಎಸ್ಪಿಯಾಗಿದ್ದ ನಿಶಾ ಜೇಮ್ಸ್ ಅವರ ವರ್ಗಾವಣೆ ಸರ್ಕಾರದ ಸಹಜ ಪ್ರಕ್ರಿಯೆ. ಇದು ಮುಖ್ಯಮಂತ್ರಿ ನಿರ್ಧಾರದಂತೆ ನಡೆದಿರುವ ವರ್ಗಾವಣೆ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಉಡುಪಿ ಶಾಸಕ ಕೆ. ರಘಪತಿ ಭಟ್ ಸ್ಪಷ್ಟಪಡಿಸಿದರು. ಎಸ್ಪಿ ನಿಶಾ ಜೇಮ್ಸ್ ವರ್ಗಾವಣೆಯಲ್ಲಿ ಉಡುಪಿ ಶಾಸಕರ ಕೈವಾಡವಿದೆ ಎಂಬ ಆರೋಪಗಳು ಕೇಳಿಬರುತ್ತಿದೆ ಎನ್ನುವ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು. ಉಡುಪಿಯಲ್ಲಿ ಪರ್ಯಾಯ ಕೂಡ ಸಮೀಪಿಸುತ್ತಿದೆ. ಈ ಹಂತದಲ್ಲಿ ಜಿಲ್ಲೆಯ ಬಗ್ಗೆ ತಿಳಿದುಕೊಂಡಿರುವ ಅಧಿಕಾರಿ ಬಂದರೆ ಕಾನೂನು ಸುವ್ಯವಸ್ಥೆಯನ್ನು […]
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಯ ಜವಾಬ್ದಾರಿ ದೊಡ್ಡದು: ಡಾ.ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಯ ಜವಾಬ್ದಾರಿ ದೊಡ್ಡದು. ಸ್ಪರ್ಧಾತ್ಮಕ ಯುಗದಲ್ಲಿ ಪತ್ರಿಕೆ ಇರುವುದು ಉತ್ತಮ ವಿಚಾರ. ಇಂದು ಪತ್ರಿಕೆಗಳಲ್ಲಿ ಭಾಷಣದ ವಿಷಯವನ್ನು ಕುತೂಹಲ ಆಸಕ್ತಿಯಿಂದ ಓದುವಂತಹ ವಿಷಯಗಳು ಪ್ರಕಟವಾಗುತ್ತದೆ. ಪತ್ರಕರ್ತರು ಓದುಗರಿಗೆ ಮನದಟ್ಟು ಮಾಡುವಂತಹ ವರದಿಗಳನ್ನು ನೀಡುತ್ತಿದ್ದಾರೆ. ವಾಸ್ತವಿಕ ವಿಚಾರ ಮತ್ತು ಓದುಗರಲ್ಲಿ ಆಸಕ್ತಿ ಮೂಡಿಸುವ ಬರಹವಿದ್ದಾಗ ಓದುಗರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಧರ್ಮಸ್ಥಳದ ವಸಂತ ಮಹಲ್ನಲ್ಲಿ ಫೆಬ್ರವರಿಯಲ್ಲಿ ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ […]
ಕೃಷಿಕರ ಸಮಸ್ಯೆ ಬಗ್ಗೆ ಸರಕಾರ ನಿರ್ಲಕ್ಷ್ಯ; ಜಿಲ್ಲಾ ಕೃಷಿಕ ಸಂಘದಿಂದ ಪ್ರತಿಭಟನೆ
ಉಡುಪಿ: ಜಿಲ್ಲೆಯ ಕೃಷಿಕರು ಎದುರಿಸುತ್ತಿರುವ ಸಂಕಷ್ಟ, ಸಮಸ್ಯೆಗಳ ಬಗ್ಗೆ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆಯ ವಿರುದ್ಧ ಉಡುಪಿ ಜಿಲ್ಲಾ ಕೃಷಿಕ ಸಂಘದ ನೇತೃತ್ವದಲ್ಲಿ ರೈತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ದಿಕ್ಕಾರ ಕೂಗಿದರು. ಕೃಷಿ ಉತ್ಪನ್ನಗಳ ಮುಕ್ತ ಆಮದು ನೀತಿ ಯೋಜನೆಗಳನ್ನು ಶಾಶ್ವತವಾಗಿ ಕೈಬಿಡಬೇಕು. ಕೃಷಿ ಯಂತ್ರೋಪಕರಣಗಳ ಖರೀದಿಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಕೃಷಿ ಪಿಂಚಣಿ ಯೋಜನೆಯನ್ನು […]
ಜ.8: ಅದಮಾರು ಶ್ರೀಗಳ ಪುರಪ್ರವೇಶ-ಪೌರ ಸಮ್ಮಾನ ಸಮಾರಂಭ
ಉಡುಪಿ: ಅದಮಾರು ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಸಾಂಪ್ರದಾಯಿಕ ಪರ್ಯಾಯ ಸಂಚಾರ ಪೂರೈಸಿರುವ ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ಅವರ ಪುರಪ್ರವೇಶ ಹಾಗೂ ಪೌರಸನ್ಮಾನ ಸಮಾರಂಭ ಜ. 8ರಂದು ಉಡುಪಿ ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ನಡೆಯಲಿದೆ ಎಂದು ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಮಧ್ಯಾಹ್ನ 2.30ಕ್ಕೆ ನಗರದ ಜೋಡುಕಟ್ಟೆಗೆ ಆಗಮಿಸಲಿರುವ ಶ್ರೀಗಳಿಗೆ ಭವ್ಯ ಸ್ವಾಗತ ಕೋರಲಾಗುವುದು. ಬಳಿಕ ಅಲ್ಲಿಂದ ಮಠದವರೆಗೆ ಶ್ರೀಗಳ ಪುರಪ್ರವೇಶ ಮೆರವಣಿಗೆ ಹೊರಡಲಿದ್ದು, […]