ಮುಸ್ಲಿಂ ಬಿಲ್ಲವ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ: ಸಚಿವ ಕೋಟ ಸ್ಪಷ್ಟನೆ

ಉಡುಪಿ: ಜ.11ರಂದು ಉಡುಪಿಯಲ್ಲಿ ನಡೆಯಲಿರುವ ಮುಸ್ಲಿಂ ಬಿಲ್ಲವ ಸ್ನೇಹ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಅಂದು ಶಿವಮೊಗ್ಗದಲ್ಲಿ ಪ್ರಗತಿ ಪರಿಶೀಲನಾ ಸಭೆ, ಅರ್ಚಕರ ಸಮಾವೇಶ, ಧಾರ್ಮಿಕ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ, ಮುಸ್ಲಿಂ ಸ್ನೇಹ ಸಮಾವೇಶವನ್ನು ಉದ್ಘಾಟಿಸುವುದಾಗಿ ಸುದ್ದಿ ಹರಿಬಿಡಲಾಗಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದರು. ಈ ಮಧ್ಯೆ ಸಮಾವೇಶ ಆಯೋಜನೆ ವಿಚಾರವಾಗಿ ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ ಕಡ್ತಲ ಅವರು ಚಿಂತಕ ದಿನೇಶ್ […]

ಇತರರ ನೋವಿಗೆ ಸ್ಪಂದಿಸುವುದು ದೇವರು ಮೆಚ್ಚುವ ಕೆಲಸ: ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಕೇವಲ ತಮ್ಮ ಸ್ವಾರ್ಥವನ್ನು ಕಾಣದೆ ಇತರರ ನೋವಿಗೆ ಸ್ಪಂದಿಸುವುದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅವರು ಭಾನುವಾರ  ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಡುಪಿ ವಲಯ ಸಮಿತಿಯ ವತಿಯಿಂದ ಉಡುಪಿಯ ಸೈಂಟ್ ಸಿಸಿಲಿಸ್ ಶಾಲಾ ಮೈದಾನಲ್ಲಿ ಆಯೋಜಿಸಿದ್ದ ಪ್ರಖ್ಯಾತ ಕೊಂಕಣಿ ಗಾಯಕರಾದ ಮೆಲ್ವಿನ್ ಪೆರಿಸ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿ ಮಾತನಾಡಿದರು. ಕೆಥೊಲಿಕ್ ಜಗದ್ಗುರು […]

40ನೇ ರಾಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ

ಉಡುಪಿ: ಭಾಷೆ ಎನ್ನುವುದು ಭಾವನೆ ವ್ಯಕ್ತಪಡಿಸುವ ಪದಗಳು. ಆದರೆ ಕೇವಲ ಪದಗಳಿಂದ ಭಾವನೆ ವ್ಯಕ್ತಪಡಿಸಲು ಸಾಧ್ಯವಿಲ್ಲ. ಹಾಗಾಗಿ ಭಾಷೆಯ ಜತೆ ಅಭಿನಯವನ್ನು ಸೇರಿಸಿಕೊಳ್ಳಲಾಯಿತು. ಇದು ಕ್ರಮೇಣ ರೂಪಾಂತರಗೊಂಡು ನಾಟಕ ಹುಟ್ಟಿಕೊಂಡಿತು ಎಂದು ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ. ವಿಜಯ ಹೇಳಿದರು. ರಂಗಭೂಮಿ ಉಡುಪಿ ಸಂಸ್ಥೆಯ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಭಾನುವಾರ ನಡೆದ 40ನೇ ರಾಜ್ಯಮಟ್ಟದ ನಾಟಕೋತ್ಸವ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾಂಜಲಿ ಸ್ಮರಣಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ರಂಗಭೂಮಿ ಅಧ್ಯಕ್ಷ […]

ಚಂದ್ರಿಕಾ ನಾಗರಾಜ್ ಅವರ ‘ಪಂಜುರ್ಲಿ ಇದ್ದಾನೆ’ ಕೃತಿ ಬಿಡುಗಡೆ: ಬದುಕಿನ ಒತ್ತಡದಿಂದ ಹೊರಬರಲು ಸಾಹಿತ್ಯದ ಓದು ಅವಶ್ಯಕ: ಜ್ಯೋತಿ ಮಹಾದೇವ್

ಉಡುಪಿ: ಸಾಹಿತ್ಯಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಲ್ಲಿ ಒತ್ತಡದ ಬದುಕಿನಿಂದ ಹೊರಬರಲು ಸಾಧ್ಯವಿದೆ ಎಂದು ಲೇಖಕಿ, ಹಿಪ್ನೋ ಥೆರಪಿಸ್ಟ್ ಜ್ಯೋತಿ ಮಹಾದೇವ್  ಹೇಳಿದರು. ಅವರು ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ನಡೆದ ಚಂದ್ರಿಕಾ ನಾಗರಾಜ್ ಅವರ ‘ಪಂಜುರ್ಲಿ ಇದ್ದಾನೆ’ ಹಾಗೂ ‘ದೂರಾಗೊ ಮುನ್ನ’ ಕಥಾ ಸಂಕಲನಗಳನ್ನು ಅನಾವರಣಗೊಳಿಸಿ ಮಾತನಾಡಿದರು. ತಾನು ಕಂಡುಕೊಂಡ ವಿಚಾರಗಳನ್ನು ಇತರರಿಗೆ ಹೇಳಬೇಕು ಎನ್ನುವ ತುಡಿತ ಮಾತು ಹುಟ್ಟುವ ಮೊದಲೇ ಮಾನವನಲ್ಲಿ ಇತ್ತು, ಬರವಣಿಗೆ ಬೆಳೆದಂತೆ ಸಾಹಿತ್ಯ ಮುದ್ರಿತ ರೂಪವನ್ನು ಪಡೆದುಕೊಂಡಿತು. 21 ನೇ […]

ಕೆಳಹಂತದ ಮೂಲಕ ಬದಲಾವಣೆ ಸಾಧ್ಯವಾದಾಗ ದೇಶದ ಅಭಿವೃದ್ಧಿ: ಸಿಂಧೂ ರೂಪೇಶ್

ಉಡುಪಿ: ಕೆಳ ಹಂತಗಳಲ್ಲಿ ಬದಲಾವಣೆಗಳು ಆಗಬೇಕು. ಒಂದೊಂದು ಗ್ರಾಮಗಳು ಅಭಿವೃದ್ಧಿಗೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ  ಸಹಯೋಗದಲ್ಲಿ ದ.ಕ.ಜಿಲ್ಲಾ ಆಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಸುಳ್ಯ ತಾಲೂಕು ಪಂಚಾಯತ್ ಹಾಗೂ ಮಡಪ್ಪಾಡಿ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ನಡೆದ ಪತ್ರಕರ್ತರ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಸಾಮಾನ್ಯರು ಪತ್ರಕರ್ತರಲ್ಲಿ ಎಲ್ಲ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಹೀಗಾಗಿ ಅವರ […]