ಕೆಲವೇ ದಿನಗಳಲ್ಲಿ ಮೀನುಗಾರರ ಸಾಲ ಮನ್ನಾ ಆದೇಶ ಪತ್ರ : ಬಿ.ಎಸ್.ಯಡಿಯೂರಪ್ಪ

ಕುಂದಾಪುರ : ೬೦ ಕೋಟಿ ರೂಪಾಯಿ ಮೀನುಗಾರರ ಸಾಲ ಮನ್ನಾ ಮಾಡಲಾಗಿದ್ದು, ಸರ್ಕಾರದ ಆದೇಶ ಬರಲಿಲ್ಲ ಎನ್ನುವ ಗೊಂದಲ ಜನರಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ೫೫ ಕೋಟಿ ರೂಪಾಯಿ ೨೦,೧೯೭ ಮೀನುಗಾರರ ಸಾಲಮನ್ನಾ ಆಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಮೀನುಗಾರರ ಸಾಲ ಮನ್ನಾ ಆದೇಶ ಪತ್ರ ಜಿಲ್ಲಾಧಿಕಾರಿಯವರ ಮೂಲಕ ಫಲಾನುಭವಿಗಳ ಮನೆಗೆ ಕಳುಹಿಸುವ ಕೆಲಸ ನಡೆಯಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು. ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನೆಂಪುವಿನಲ್ಲಿ ಶನಿವಾರ ಸಂಜೆ ನಡೆದ ಬೈಂದೂರು ವಿಧಾನ ಸಭಾ […]

ಕೋಟೇಶ್ವರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಸಿಎಂ ಚಾಲನೆ

ಕುಂದಾಪುರ: ಹಿಂದೂ ಧರ್ಮದ ಧಾರ್ಮಿಕ ಪರಿಪಾಲನೆಗೆ ಸಹಕಾರ ನೀಡಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬ್ರಾಹ್ಮಣ ಸಮುದಾಯದಿಂದ ಸಮಾಜಕ್ಕೆ ಸಾಕಷ್ಟು ಕೊಡುಗೆಗಳು ಸಂದಿದೆ. ಸಾಹಿತ್ಯ, ಕಲೆ, ಶಿಕ್ಷಣ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಕೊಡುಗೆಗಳಿವೆ. ಸನಾತನ ಪರಂಪರೆ, ವೇದ, ಉಪನಿಷತ್, ದೇವಾಲಯಗಳ ರಕ್ಷಣೆಯ ಜೊತೆಯಲ್ಲಿ ಹಿಂದೂ ಸಮಾಜದ ಜಾಗೃತಿಗಾಗಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರವಾದುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅವರು ಇಲ್ಲಿನ ಕೋಟೇಶ್ವರದ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿನ ಡಾ.ವಿ.ಎಸ್.ಆಚಾರ್ಯ […]

ಪೇಜಾವರ ಶ್ರೀಗಳ ಆರೋಗ್ಯ ಹಿನ್ನೆಲೆ; ಮುಖ್ಯಮಂತ್ರಿ ಯಡಿಯೂರಪ್ಪ ಇಂದು-ನಾಳೆ ಉಡುಪಿಯಲ್ಲೇ

ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ (ನಾಳೆ) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಡುಪಿಯಲ್ಲೇ ಉಳಿಯಲಿದ್ದಾರೆ. ಶನಿವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದ  ಅವರು, ಆಸ್ಪತ್ರೆ ವೈದ್ಯರೊಂದಿಗೆ ಶ್ರೀಗಳ ಆರೋಗ್ಯದ ಬಗ್ಗೆ ಚರ್ಚಿಸಿದ್ದಾರೆ. ಅನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಶ್ರೀಗಳ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿಲ್ಲ. ಅವರ ಆರೋಗ್ಯ ಸ್ಥಿತಿ ಕ್ಷೀಣವಾಗುತ್ತಿದೆ. ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ಪ್ರಯತ್ನ ಮುಂದುವರೆದಿದೆ. ಇವತ್ತು, ನಾಳೆ ಉಡುಪಿಯಲ್ಲೇ ಇರಲಿದ್ದೇನೆ ಎಂದು ತಿಳಿಸಿದ್ದಾರೆ‌.