ರಾಮಮಂದಿರಕ್ಕಾಗಿ ಹೋರಾಡುವ ಬಿಲ್ಲವರು ಗರೋಡಿ ಬೇಕೆಂದು ಯಾಕೆ ಹೋರಾಡುತ್ತಿಲ್ಲ: ಜಾನಪದ ವಿದ್ವಾಂಸ ಬಾಬುಶಿವ ಪೂಜಾರಿ ಪ್ರಶ್ನೆ

ಉಡುಪಿ: ರಾಮಮಂದಿರಕ್ಕಾಗಿ ಹೋರಾಟ ಮಾಡುವ, ಶ್ರೀರಾಮ ನಮ್ಮ ದೇವರು ಎಂದು ಪೂಜಿಸುವ ಬಿಲ್ಲವ ಜನಾಂಗ. ಕೋಟಿ ಚೆನ್ನಯ್ಯರು ನಮ್ಮವರು, ನಮ್ಮ ಗರೋಡಿಗಳು ನಮಗೆ ಬೇಕೆಂದು ಯಾಕೆ ಹೋರಾಟ ಮಾಡುತ್ತಿಲ್ಲ. ಯಾಕೆ ಇದರಲ್ಲಿ ನಮಗೆ ಸ್ವಾಧೀನತೆ ಇಲ್ಲವೇ ಎಂದು ಹಿರಿಯ ಜಾನಪದ ವಿದ್ವಾಂಸ ಬಾಬುಶಿವ ಪೂಜಾರಿ ಪ್ರಶ್ನಿಸಿದರು. ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಆದಿಉಡುಪಿಯ ಬೈದಶ್ರೀ ಕಾರ್ಯಾಲಯದಲ್ಲಿ ಬುಧವಾರ ನಡೆದ ಬೈದಶ್ರೀ ಸಾಹಿತ್ಯ ಪ್ರಶಸ್ತಿ ಹಾಗೂ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು […]

ಗರೋಡಿಗಳ ಯಜಮಾನಿಕೆಯನ್ನು ಬೇರೆ ಜನಾಂಗದವರಿಗೆ ಕೊಡುವುದು ಸರಿಯಲ್ಲ

ಉಡುಪಿ: ಗರೋಡಿಗಳಲ್ಲಿ ಬೇರೆ ಜನಾಂಗದವರಿಗೆ ಗೌರವ ಕೊಡಿ. ಆದರೆ ಅವರಿಗೆ ಯಜಮಾನಿಕೆ ಸ್ಥಾನವನ್ನು ಕೊಡುವುದು ಸರಿಯಲ್ಲ ಎಂದು ಹಿರಿಯ ಜಾನಪದ ವಿದ್ವಾಂಸ ಬಾಬುಶಿವ ಪೂಜಾರಿ ಹೇಳಿದರು. ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ವತಿಯಿಂದ ಆದಿಉಡುಪಿಯ ಬೈದಶ್ರೀ ಕಾರ್ಯಾಲಯದಲ್ಲಿ ಬುಧವಾರ ನಡೆದ ಬೈದಶ್ರೀ ಸಾಹಿತ್ಯ ಪ್ರಶಸ್ತಿ ಹಾಗೂ ವಾರ್ಷಿಕ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ತುಳು ಜನಾಂಗ, ತುಳು ಆರಾಧನ ಪದ್ಧತಿಗಳನ್ನು ತಮ್ಮದಲ್ಲವೆಂದು ಹೇಳುತ್ತಿದ್ದ ಮೇಲ್ವಗರ್ದವರು, ಇಂದು ಅವುಗಳು ತಮ್ಮದೆಂದು ವಾದಿಸುತ್ತಿದ್ದಾರೆ. ಅವರಿಗೆ […]

ಡಿ. 28: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹಕ ಉಡುಗೊರೆ ವಿತರಣಾ ಸಮಾರಂಭ 

ಉಡುಪಿ: ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ವತಿಯಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಬೋಟ್ ಮಾಲಕರಿಗೆ ಪ್ರೋತ್ಸಾಹಕ ಉಡುಗೊರೆ ವಿತರಣಾ ಸಮಾರಂಭ ಡಿಸೆಂಬರ್ ೨೮ ಶನಿವಾರ ಮಧ್ಯಾಹ್ನ ೩ ಗಂಟೆಗೆ ಮಲ್ಪೆ ಏಳೂರು ಮೊಗವೀರ ಸಭಾಭವನದಲ್ಲಿ  ನಡೆಯಲಿದೆ. ಸಮಾರಂಭದ ಉದ್ಘಾಟನೆಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ನೆರವೇರಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ವಹಿಸಲಿದ್ದಾರೆ. ಮೀನುಗಾರಿಕೆ […]

ಸಂಸ್ಕಾರಯುತ ಶಿಕ್ಷಣ ಮಕ್ಕಳಿಗೆ ಅಗತ್ಯ: ಯಡಿಯೂರಪ್ಪ

ಉಡುಪಿ: ಮಕ್ಕಳು ಸತ್ಪ್ರಜೆಗಳು ಸಂಸ್ಕಾರಯುತ ಶಿಕ್ಷಣವು ಅತೀ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಅವರು ಉಡುಪಿ ಶ್ರೀ ಕೃಷ್ಣ ಮಠ ಆವರಣದಲ್ಲಿ ಚಿಣ್ಣರ ಮಾಸೋತ್ಸವ ಹಾಗೂ ಸ್ವಚ್ಛ ಭಾರತ ಅಭಿಯಾನದಡಿ ಎಂ.ಆರ್.ಪಿ.ಎಲ್. ಸಂಸ್ಥೆಯ  2 ಕೋ.ರೂ. ಅನುದಾನದಿಂದ ನಿರ್ಮಾಣಗೊಂಡಿರುವ ಶೌಚಾಲಯ ಸಮುಚ್ಚಯ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಭತ್ತವನ್ನು ತುಂಬುವ ಚೀಲಗಳಾಗದೆ ಭತ್ತವನ್ನು ಬೆಳೆಯುವ ಗದ್ದೆಗಳಾಗಬೇಕು ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಮಕ್ಕಳು ಶುದ್ಧ ಪರಿಸರದಲ್ಲಿ ಆರೋಗ್ಯಯುತರಾಗಿ ಬಾಳಬೇಕು. ಉಡುಪಿ ಕೃಷ್ಣ ಮಠವು ಮಕ್ಕಳ ಪ್ರತಿಭೆ […]

ಗ್ರಂಥಾಲಯಗಳು ಡಿಜಿಟಲ್ ಗ್ರಂಥಾಲಯಗಳಾಗಿ ಮೇಲ್ದರ್ಜೆಗೆ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಉಡುಪಿ : ರಾಜ್ಯದಲ್ಲಿನ ನಗರ, ಜಿಲ್ಲೆ ಹಾಗೂ ತಾಲೂಖು ಕೇಂದ್ರಗಳಲ್ಲಿರುವ ಗ್ರಂಥಾಲಯಗಳನ್ನು ಮೇಲ್ದರ್ಜೆಗೇರಿಸಿ ಡಿಜಿಟಲ್ ಗ್ರಂಥಾಲಯಗಳನ್ನಾಗಿ  ಪರಿವರ್ತಿಸಲಾಗುತ್ತಿದೆ ಎಂದು ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಅವರು ಬುಧವಾರ, ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಸರಕಾರಿ ವಿದ್ಯಾಸಂಸ್ಥೆಗಳ ಶತ ವಜ್ರ ಸ್ವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮೃದ್ದ ಕರ್ನಾಟಕ ಕನಸನ್ನು ಸಾಕರಗೊಳಿಸುತ್ತಿರುವ ನಮ್ಮ ಸರ್ಕಾರ , ಶಿಕ್ಷಣ ಕ್ಷೇತ್ರವನ್ನು ಕ್ರಿಯಾಶೀಲಗೊಳಿಸಲು ವಿಶೇಷ ಒತ್ತು ನೀಡಲಾಗಿದ್ದು, 10000 ಶಿಕ್ಷಕರ ನೇಮಕತಿ ಪ್ರಕ್ರಿಯೆ ಜರಿಯಲ್ಲಿದ್ದು, ಪ್ರಾಥಮಿಕ ಪ್ರೌಢ […]