ಹಿಂಸಾಚಾರದ ಹಿಂದೆ ಭಯೋತ್ಪಾದಕರ ಕೈವಾಡ: ಶರಣ್ ಪಂಪ್ವೆಲ್

ಮಂಗಳೂರು: ಹಿಂಸಾಚಾರದ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಗಂಭಿರವಾಗಿ ಆರೋಪಿಸಿದ್ದಾರೆ. ಕಾಶ್ಮೀರದಲ್ಲಿ ಆಗಿರುವ ಸ್ಥಿತಿ ಮಂಗಳೂರಲ್ಲಿ ನಡೆದಿದೆ. ಈ ಹಿಂಸಾಚಾರದ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎಂದೆನಿಸುತ್ತದೆ. ಹೀಗಾಗಿ ಮಂಗಳೂರು ಗಲಭೆ ಕುರಿತು ಎನ್ ಐಎ ತನಿಖೆ ನಡೆಸಲು ವಿಹಿಂಪ ಆಗ್ರಹಿಸುತ್ತದೆ. ಮಾತ್ರವಲ್ಲ, ಎನ್ ಐಎ ತನಿಖೆಗೆ ಕೇಂದ್ರ ಸರ್ಕಾರವೂ ಮುಂದಾಗಬೇಕು ಎಂದು ಒತ್ತಾಯಿಸಿದರು. ಮಂಗಳೂರಲ್ಲಿ ನಡೆದ ಗಲಭೆ ಅತ್ಯಂತ ಗಂಭೀರ ಮತ್ತು ಆತಂಕಕಾರಿ. ನಗರದಲ್ಲಿ ನಡೆದಿರುವ […]

ಆಳ್ವಾಸ್‌ನ ಅಸೀಮಾ ದೋಲಾ ರಾಷ್ಟ್ರೀಯ ಯುವ ಸಮ್ಮೇಳನಕ್ಕೆ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಸೀಮಾ ದೋಲಾ, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‌ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾಗಿರುವ ನ್ಯಾಷನಲ್ ಯುತ್ ಕಾನ್ಫರೆನ್ಸ್‌ನಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ. ಜನವರಿ ೧೦ರಂದು ಮಂಗಳೂರಿನ ಲೋಯಲಾ ಹಾಲ್‌ನಲ್ಲಿ ಜರುಗಲಿರುವ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ”ಸ್ಕಿಲಿಂಗ್ ದಿ ಯಂಗ್ ಇಂಡಿಯಾ” ಎಂಬ ವಸ್ತು ವಿಷಯದೊಂದಿಗೆ ಸದೃಢ ದೇಶ ನಿರ್ಮಾಣದಲ್ಲಿ ಯುವಜನತೆಯ ಯೋಚನೆ ಹಾಗೂ ಯೋಜನೆಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದೆ. ಆನ್‌ಲೈನ್ ಹಾಗೂ ದೂರವಾಣಿ ಸಂದರ್ಶನದ ಮೂಲಕ ಇವರ ವಿಷಯ ಮಂಡನೆ, ವಾಕ್ಚಾತುರ್‍ಯ […]

ಉಡುಪಿ: ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್ಮಸ್ ಆಚರಣೆ

ಉಡುಪಿ: ಏಸುಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿ ಭಕ್ತಿ, ಶೃದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು. ಮಂಗಳವಾರ ರಾತ್ರಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ತಮ್ಮ ಅಧಿಕೃತ ಚರ್ಚು ಮಿಲಾಗ್ರಿಸ್ ಕೆಥೆಡ್ರಲ್ ಕಲ್ಯಾಣಪುರದಲ್ಲಿ ಅರ್ಪಿಸಿ ಹಬ್ಬದ ಸಂದೇಶ ನೀಡಿದರು. ಮಿಲಾಗ್ರಿಸ್ ಕ್ಯಾಥೆಡ್ರಲ್ ಇದರ ಪ್ರಧಾನ ಧರ್ಮಗುರು […]

ಹರೀಶ್ ಬಂಗೇರ ಬಿಡುಗಡೆಗೆ ಉಡುಪಿ ಮಾನವ ಹಕ್ಕು ಪ್ರತಿಷ್ಠಾನದಿಂದ ನಡೆದಿದೆ ಸರ್ವ ಪ್ರಯತ್ನ: ಸೌದಿ ಸರಕಾರಕ್ಕೆ ದಾಖಲೆ ಕೊಡಲು ಸಿದ್ಧತೆ

ಕುಂದಾಪುರ:  ಸೌದಿ ದೊರೆ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ ಸೌದಿ ಪೊಲೀಸರಿಂದ ಬಂಧಿಯಾದ ಹರೀಶ್ ಬಂಗೇರ ಬಿಡುಗಡೆ ಪ್ರಯತ್ನ ನಡೆದಿದೆ. ಹರೀಶ್ ಪತ್ನಿ ಸುಮನಾ ಹಾಗೂ ಕುಟುಂಬದವರು ಮಂಗಳವಾರ ಉಡುಪಿ ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ರವೀಂದ್ರನಾಥ್ ಶ್ಯಾನುಭಾಗ್ ಭೇಟಿ ಮಾಡಿ ಹರೀಶ್ ಫೇಸ್ಬುಕ್ ಅಕೌಂಟ್ ಫೇಕ್ ಎಂದು ನಿರೂಪಿಸಲಾಗುವ ಎಲ್ಲಾ ದಾಖಲಗೆಗಳ ಕಲೆ ಹಾಕಿದ್ದು, ಉಡುಪಿ ಪೊಲೀಸ್ ಇಲಾಖೆ ಎಲ್ಲಾ ಮಾಹಿತಿ ಸ್ಟೇಟ್ ಇಂಟಿಲಿಜೆನ್ಸ್ ಕಚೇರಿಗೆ ರವಾನಿಸಿದೆ. ಹರೀಶ್ ನಿರಪರಾದಿ ಎಂದು […]

ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ:ದತ್ತಿನಿಧಿ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಕುಂದಾಪುರ : ಹೆತ್ತವರು ಧನ್ಯತಾ ಭಾವವನ್ನು ಕಾಣುವಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಪರಿವರ್ತನೆಯ ಪ್ರವರ್ಧಮಾನ ಕಾಲದಲ್ಲಿ ಮನುಷ್ಯ ತನ್ನ ತನವನ್ನು ಕಳೆದುಕೊಳ್ಳುವ ಸ್ಥಿತಿಯತ್ತ ಹೆಚ್ಚು ವಾಲುತ್ತಿದ್ದಾನೆ. ಜೀವನದ ಪ್ರಾರಂಭದಿಂದ ಕೊನೆಯ ಕ್ಷಣದವರೆಗೂ ವಿದ್ಯಾರ್ಥಿಯಾಗಿರುವವರು ಮಾತ್ರ ಸಾಧನೆ ಉತ್ತುಂಗ ತಲುಪುತ್ತಾರೆ. ಜೀವನದಲ್ಲಿ ಏರಿಳಿತಗಳು ಇದ್ದಾಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ. ಜೀವನದಲ್ಲಿ ಕಾಣುವ ಪ್ರತಿಯೊಂದು ಏರಿಳಿತಗಳನ್ನು ಸಂಯಮ ಹಾಗೂ ಸಮಚಿತ್ತದಿಂದ ಸ್ವೀಕಾರ ಮಾಡಬೇಕು ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಹೇಳಿದರು. ಇಲ್ಲಿನ ಬಸ್ರೂರಿನ ಶ್ರೀ ಶಾರದಾ […]