ಮಂಗಳೂರು: ಲೋಕಾಯುಕ್ತರಿಂದ ಹಾಸ್ಟೆಲ್ ಗಳಿಗೆ ಭೇಟಿ; ಪರಿಶೀಲನೆ

ಮಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಶನಿವಾರ ಮಂಗಳೂರು ತಾಲೂಕಿನ ವಿವಿಧ ಹಾಸ್ಟೆಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ  ಭೇಟಿ ನೀಡಿ ಪರಿಶೀಲನೆ  ನಡೆಸಿದರು. ಡಿ. ದೇವರಾಜು ಅರಸ್ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ  ಪುರುಷರ ವಿದ್ಯಾರ್ಥಿ ನಿಲಯ ಉಳ್ಳಾಲ,  ದೇರಳಕಟ್ಟೆ ಇಲ್ಲಿಗೆ ಭೇಟಿ ನೀಡಿದ ಅವರು ಸಮಗ್ರವಾಗಿ ವೀಕ್ಷಿಸಿದರು. ಅಡುಗೆಕೋಣೆ, ಸ್ನಾನಗೃಹ, ವಾಚನಾಲಯ, ಕೊಠಡಿಗಳನ್ನು ಪರಿಶೀಲಿಸಿದ ಲೋಕಾಯುಕ್ತರು, ವಿದ್ಯಾರ್ಥಿಗಳ ಅಹವಾಲು ಆಲಿಸಿದರು.  ಹಾಸ್ಟೆಲ್ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ […]

ರಂಗಸ್ಥಳದಲ್ಲೇ ಅವಮಾನ ಕಲಾವಿದನ ಸಾವಿಗೆ ಸಮ; ಪಟ್ಲ ನೋವಿನ ಮಾತು

ಮಂಗಳೂರು: ಕಟೀಲು ಮೇಳದಿಂದ ಖ್ಯಾತ ಭಾಗವತ ಸತೀಶ್ ಶೆಟ್ಟಿ ಅವರನ್ನು ಏಕಾಏಕಿ ಮೇಳದಿಂದ ಕೈ ಬಿಟ್ಟು, ರಂಗಸ್ಥಳದಲ್ಲೇ ಅವಮಾನ ಮಾಡಿದ ವಿಚಾರಕ್ಕೆ ಸತೀಶ್ ಶೆಟ್ಟಿ ಪ್ರತಿಕ್ರಿಯೆ ನೀಡಿ ಇದು ಕಲಾವಿದನ ಸಾವು ಅಂತ ನೋವಿನಿಂದ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೌನವಾಗಿದ್ದ ಅವರು ಅನಂತರ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿ, ಜೀವನದುದ್ದಕ್ಕೂ ಕಟೀಲು ತಾಯಿಯ ಸೇವೆ ಮಾಡಬೇಕೆಂದು ಇಚ್ಚೆ ಹೊಂದಿದವನು. ಯಾವುದೇ ವಿಚಾರದಲ್ಲಿ ಬೇಡಿಕೆ ಇಟ್ಟವನಲ್ಲ. ಆದರೆ ನನಗೆ ಆದ ಅವಮಾನದಂತೆ ಇತರ ಯಾವ ರಂಗದ ಕಲಾವಿದನಿಗೂ ಆಗಬಾರದು. […]

ಎಲ್ ಸಿ ಆರ್ ವಿದ್ಯಾಸಂಸ್ಥೆ ಕಕ್ಯಪದವು: ವಾರ್ಷಿಕ ಕ್ರೀಡಾಕೂಟ

ಬಂಟ್ವಾಳ:  ಎಲ್ ಸಿ ಆರ್ ವಿದ್ಯಾಸಂಸ್ಥೆ ಕಕ್ಯಪದವು ಇಲ್ಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು  ಸೇವಾ ಸಹಕಾರಿ ಬ್ಯಾಂಕ್, ಕಕ್ಯಪದವು ಇಲ್ಲಿನ   ಪ್ರಬಂಧಕ  ನಾರಾಯಣ  ಇವರು ನೆರವೇರಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕ  ರೋಹಿನಾಥ ಪಾದೆ  ಮಾತನಾಡಿ,  ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಅತ್ಯುತ್ತಮ ಕ್ರೀಡಾಪಟುಗಳಾಗಿ ಬೆಳೆಯಬೇಕೆಂದು ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಮೈರಾ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಪ್ರತೀಕವಾದ ಕ್ರೀಡೆಯಲ್ಲಿ ಎಲ್ಲರೂ  ಏಕಮನಸ್ಕರಾಗಿ ಪಾಲ್ಗೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ […]

ಕಾರ್ಟೂನಿಸ್ಟರ ಇಡೀ ಬಳಗವೇ ಕುಂದಾಪುರದಲ್ ಇತ್ತ್ ಅಂದೆಳಿ ಹೇಳುಕ್ ನಂಗಂತೂ ಹೆಮ್ಮೆ:ರಿಷಬ್ ಶೆಟ್ಟಿ

ಕುಂದಾಪುರ: ನಾವೆಲ್ಲಾ ಸ್ವಲ್ಪ ಹಡಿ ಪಳ್ದಿ ಮಾಡುವರ್. ಯಾರ್‍ಯಾರೋ ಕಾಲೆಳುದ್ ಜಾಸ್ತಿ. ಹಾಂಗೈ ನಮ್ಮೂರಗ್ ಹೆಚ್ಚಿನ್ ಜನ ಕಾರ್ಟೂನಿಸ್ಟ್ ಆಪುಕ್ ಸಾಧ್ಯ ಐತ್. ಕಾರ್ಟೂನ್ ಕ್ಷೇತ್ರಕ್ಕೆ ನಮ್ಮೂರಿನ ಕೊಡುಗೆ ಅಪಾರ. ಕಾರ್ಟೂನಿಸ್ಟರ ಇಡೀ ಬಳಗವೇ ಕುಂದಾಪುರದಲ್ ಇತ್ತ್ ಅಂದೆಳಿ ಹೇಳುಕ್ ನಂಗಂತೂ ಹೆಮ್ಮೆ ಅನ್ನಿಸ್ತಿದೆ.. ಕುಂದಾಪುರ ಕಾರ್ಟೂನ್ ಬಳಗ ಆಶ್ರಯದಲ್ಲಿ ಇಲ್ಲಿನ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಶನಿವಾರ ನಡೆದ ಕಾರ್ಟೂನ್ ಹಬ್ಬ ಉದ್ಘಾಟಿಸಿ ಖ್ಯಾತ ನಿದೇರ್ಶಕ ಹಾಗೂ ನಟ ರಿಷಬ್ ಶೆಟ್ಟಿ ಕುಂದಾಪುರ […]

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕೈಬಿಟ್ಟ ಕಟೀಲು ಮೇಳ; ಭಾಗವತಿಕೆಗೆ ಕುಳಿತಾಗಲೇ ಏಕಾಏಕಿ ಹೊರಕಳಿಸಿದ ವ್ಯವಸ್ಥಾಪಕರು

  ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರನ್ನು ಕಟೀಲು ಮೇಳದಿಂದ ಏಕಾಏಕಿ ಕೈ ಬಿಡಲಾಗಿದೆ. ಶುಕ್ರವಾರ ಕಟೀಲು ದೇವಸ್ಥಾನದ ಯಕ್ಷಗಾನದ ಮೇಳದ ಆರು ಮೇಳದ ಮೊದಲ ಸೇವೆ ಆಟ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದಿತ್ತು. ‌ ಈ ವೇಳೆ ಭಾಗವತಿಕೆಗೆ ಬಂದ ಕುಳಿತ ಪಟ್ಲ ಸತೀಶ್ ಶೆಟ್ಟಿ ಅವರನ್ನು ಮೇಳದ ವ್ಯವಸ್ಥಾಪಕರು ಏಕಾಏಕಿ ಬಂದು ಭಾಗವತಿಕೆಯಿಂದ ಎಬ್ಬಿಸಿದ್ದಾರೆ. ಕಟೀಲು ಮೇಳದ ಯಜಮಾನಿಕೆ ವಿಚಾರವಾಗಿ ಏಲಂ ಪ್ರಕ್ರಿಯೆ ನಡೆಸಬೇಕು ಅಂತ […]