ಅ.25 ರಂದು ಮಂಗಳೂರು ವಿ.ವಿ ಯಲ್ಲಿ ಶಂಕು ಸ್ಥಾಪನೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಆವರಣದಲ್ಲಿನ ಸಭಾಂಗಣಗಳ ನಾಮಕರಣ ಹಾಗೂ ಹುತಾತ್ಮರ ಚೌಕ (ಶಹೀದ್ ಸ್ಥಳ)ದ  ಶಂಕು ಸ್ಥಾಪನೆ ಕಾರ್ಯಕ್ರಮ ಅಕ್ಟೋಬರ್ 25 ರಂದು ಸಂಜೆ 5 ಗಂಟೆಗೆ, ಮಂಗಳಗಂಗೋತ್ರಿ, ಮಂಗಳ ಸಭಾಂಗಣದಲ್ಲಿ ನಡೆಯಲಿದೆ. ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಸಿ.ಎನ್ ಶಂಕು ಸ್ಥಾಪನೆಯನ್ನು ನೆರವೇರಿಸಲಿದ್ದಾರೆ. ಬಂದರು ಮತ್ತು ಮೀನುಗಾರಿಕಾ ಸಚಿವ ಹಾಗೂ ದ.ಕ  ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ […]

ದುಗ್ಲಿಪದವು ಯುವ ಸೇವಾ ಸಂಘದಿಂದ ಸಹಾಯಧನ ವಿತರಣೆ

ಉಡುಪಿ: ಯುವ ಟೈಗರ್ಸ್‌ ಹಾಗೂ ಯುವ ಸೇವಾ ಸಂಘ ದುಗ್ಲಿಪದವು ಮಂಚಿ ಇದರ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ವೇಷಧರಿಸಿ ಸಂಗ್ರಹಿಸಿದ 2,01,780 ಲಕ್ಷ ರೂ. ಮೊತ್ತವನ್ನು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸೈಬ್ರಕಟ್ಟೆ ನಿವಾಸಿ ಸಿಂಚನ ಅವರ ವೈದ್ಯಕೀಯ ಚಿಕಿತ್ಸೆಗೆ ಭಾನುವಾರ ಸಂಘದ ಆವರಣದಲ್ಲಿ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಸೈನಿಕ ಅಶೋಕ್‌ ಕೋಟ್ಯಾನ್‌ ವಿದ್ಯಾರ್ಥಿ ಸಿಂಚನ ಅವರಿಗೆ ಸಹಾಯಧನದ ಚೆಕ್‌ ವಿತರಿಸಿದರು. ಪೊಲೀಸ್‌ ಕಾನ್‌ಸ್ಟೇಬಲ್‌ ರಾಮಚಂದ್ರ, ನಿವೃತ್ತ ಸೈನಿಕ ಚಂದ್ರಶೇಖರ್‌, ಸ್ಥಳೀಯರಾದ ಸುಮತಿ ಶೇರಿಗಾರ್‌, […]

ನೆರೆ ಸಂತ್ರಸ್ತರಿಗೆ ಮನೆ ಪುನರ್ ನಿರ್ಮಾಣದ ಆದೇಶ ಪ್ರತಿ ಹಾಗೂ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ

ಉಡುಪಿ: ನೆರೆ ಪ್ರವಾಹದಿಂದ‌ ಸಂಪೂರ್ಣವಾಗಿ ಮನೆ ಕಳೆದುಕೊಂಡ ಮತ್ತು ಭಾಗಶಃ ಹಾನಿಗೊಳಗಾದ ಸಂತ್ರಸ್ತರಿಗೆ ಪ್ರಾಕೃತಿಕ ವಿಕೋಪ ನಿಧಿಯಡಿ ಮನೆ ಪುನರ್‌ ನಿರ್ಮಾಣದ ಆದೇಶ ಪ್ರತಿ ಹಾಗೂ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ‌ಅನ್ನು ಶಾಸಕ ಕೆ. ರಘುಪತಿ ಭಟ್‌ ಸೋಮವಾರ ಉಡುಪಿ ತಾ.ಪಂ. ಸಭಾಂಗಣದಲ್ಲಿ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಭಾಗ್ಯಲಕ್ಷ್ಮೀ ಯೋಜನೆಯ ಮೂಲಕ ಹೆಣ್ಣು ಮಗುವಿನ ಹೆಸರಿನಲ್ಲಿ 19,300 ರೂ. ಎಲ್‌ಐಸಿ ಪಾಲಿಸಿ ಮಾಡಿಸುತ್ತಿದ್ದು, ಮಗುವಿಗೆ 18 ವರ್ಷ ತುಂಬಿದ […]

ಮಹಾಲಕ್ಷ್ಮೀ ಕೋ. ಅಪರೇಟಿವ್ ಬ್ಯಾಂಕ್: ಮಹಿಳಾ ಸ್ವಸಹಾಯ ಗುಂಪುಗಳಿಗೆ ೧.೫ ಕೋ. ರೂ. ಶೂನ್ಯ ಬಡ್ಡಿ ಸಾಲ ವಿತರಣೆ

ಉಡುಪಿ: ಮಹಿಳಾ ಸ್ವ ಸಹಾಯ ಸಂಘಗಳಿಗೆ ಮಹಾಲಕ್ಷ್ಮಿ ಬ್ಯಾಂಕ್ ಮುಖಾಂತರ ಮಂಜೂರುಗೊಂಡು ಶೂನ್ಯ ಬಡ್ಡಿದರದಲ್ಲಿ ಸಾಲ ಯೋಜನೆಯ ಚೆಕ್ ವಿತರಣಾ ಕಾರ್ಯಕ್ರಮ ಸೋಮವಾರ ಬ್ಯಾಂಕ್ ನ ಮಲ್ಪೆ ಶಾಖೆಯಲ್ಲಿ ನಡೆಯಿತು. ಶಾಸಕ ಕೆ. ರಘುಪತಿ ಭಟ್ ಸಾಲದ ಚೆಕ್‌ನ್ನು ವಿತರಿಸಿ ಶುಭ ಹಾರೈಸಿದರು. ಮಲ್ಪೆ ಶಾಖೆಯಿಂದ ೧೯೪ ಮಹಿಳಾ ಸದಸ್ಯರ ಸುಮಾರು ೩೧ ಸ್ವಸಹಾಯ ಗುಂಪುಗಳಿಗೆ ೧.೫ ಕೋ.ರೂ. ಸಾಲವನ್ನು ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ಅವರು, ಬ್ಯಾಂಕ್ […]

ಬೆಳ್ತಂಗಡಿ: ಜಲಪ್ರಳಯಕ್ಕೆ ಕೊಚ್ಚಿಹೋದ ಭೂಮಿಯಲ್ಲೀಗ ಸಮೃದ್ಧ ಕೃಷಿ

ಮಂಗಳೂರು: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಪರ್ವತಶ್ರೇಣಿಗಳ ತಪ್ಪಲಿನಲ್ಲಿ ಅಂದು ಜಲಪ್ರಳಯಕ್ಕೆ ಕೊಚ್ಚಿಹೋಗಿದ್ದ ಹತ್ತಾರು ಗ್ರಾಮಗಳು ಮತ್ತೆ ಸುಂದರವಾಗಿ ಎದ್ದು ನಿಂತಿವೆ. ದಾನಿಗಳ ಸಹಾಯದಿಂದ ಜನರು ಮತ್ತೆ ಬದುಕು ಕಟ್ಟಿಕೊಟ್ಟಿದ್ದಾರೆ. ಮೃತ್ಯುಂಜಯ ಹೊಳೆಯಿಂದ ಕೃಷಿ ಭೂಮಿಗೆ ಬಿದ್ದ 4 ಅಡಿ ಮರಗಳನ್ನು ಹೊರ ತೆಗೆದು ಸುಮಾರು 70 ಎಕರೆ ಭೂ ಪ್ರದೇಶದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಉಜಿರೆಯ ಉದ್ಯಮಿಗಳಾದ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ ಇವರು ಸ್ವಾತಂತ್ರ್ಯೋತ್ಸವದಂದು ಸುಮಾರು 500ಕ್ಕೂ ಹೆಚ್ಚು ಯುವಕರ ತಂಡ ಕಟ್ಟಿಕೊಂಡು ಅ.15ರಂದು ಪುನರ್‌ನಿರ್ಮಾಣಕ್ಕೆ […]