ಕರಾವಳಿಯಲ್ಲಿ ಭಾರೀ ಮಳೆ ನಿರೀಕ್ಷೆ : ರೆಡ್ ಅಲರ್ಟ್ ಘೋಷಣೆ
ಉಡುಪಿ : ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಅಕ್ಟೋಬರ್ 24 ರಿಂದ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚಿಸಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗೃತ ಕ್ರಮ ವಹಿಸುವ ಸಲುವಾಗಿ ಈ ಕೆಳಗಿನಂತೆ ಸೂಚನೆಗಳನ್ನು ನೀಡಿರುತ್ತದೆ. ಸಾರ್ವಜನಿಕರು/ ಮೀನುಗಾರರು / ನದಿ ತೀರ / ಸಮುದ್ರಕ್ಕೆ ಇಳಿಯದಂತೆ ಎಚ್ಚರ ವಹಿಸಬೇಕು. ಜಿಲ್ಲಾ/ […]
ಕಾರ್ಕಳ ತಾ.ಪಂ. ಅಧ್ಯಕ್ಷರ ರಾಜೀನಾಮೆ ಅಂಗೀಕಾರ
ಉಡುಪಿ : ಕಾರ್ಕಳ ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಇವರು ಸ್ವಪ್ರೇರಣೆಯಿಂದ ಅಕ್ಟೋಬರ್ 1 ರಂದು ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸಹಕಾರಿ ಸಂಘದಲ್ಲಿ ಅಡಮಾನ ಇಟ್ಟ ಚಿನ್ನಾಭರಣ ಋಣಮುಕ್ತ” ಗಾಳಿಸುದ್ದಿ ನಂಬಿ ಮೋಸ ಹೋದ್ರು ಜನ
ಕುಂದಾಪುರ: ಸಾಮಾಜಿಕ ಜಾಲತಾಣ ಮುಗ್ದ ಜನರನ್ನು ಎಷ್ಟು ದಾರಿತಪ್ಪಿಸುತ್ತೆ ಅನ್ನೋದಕ್ಕೆ ಕಿಡಿಗೇಡಿಗಳು ಬರೆದ ಸಂದೇಶ ನಂಬಿ ಕುಂದಾಪುರ ಮಿನಿವಿಧಾನಸೌಧಕ್ಕೆ ಬಂದ ಜನರೇ ಸಾಕ್ಷಿ. ಋಣಮುಕ್ತ ಕಾಯ್ದೆಗೆ ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾದ ಹಿನ್ನೆಲೆ ಸೋಮವಾರದಂದು ಕುಂದಾಪುರದ ಮಿನಿವಿಧಾನಸೌದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಅರ್ಜಿ ಸಲ್ಲಿಸಿದ ದೃಶ್ಯ ಕಂಡುಬಂದಿತು. ಆದರೆ ಬಂದವರ ಪೈಕಿ ಬಹುತೇಕರು ಸೊಸೈಟಿ (ಸಹಕಾರಿ ಸಂಘ), ಮಾನ್ಯತೆಯಿರುವ ಹಾಗೂ ಆರ್.ಬಿ.ಐ. ಮತ್ತು ಸಹಕಾರಿ ನಿಯಮ ನಿಬಂಧನೆಗೊಳಪಟ್ಟ ಸಂಸ್ಥೆಗಳಲ್ಲಿ ಪಡೆದ ಸಾಲ ಮನ್ನಾ ಆಗುವ ನಂಬಿಕೆಯಲ್ಲಿ […]
ಪತ್ರಕರ್ತರಿಗೆ ನಿವೇಶನ ನೀಡಲು ತಕ್ಷಣ ಕ್ರಮ: ಸಚಿವ ಆರ್.ಅಶೋಕ್ ಭರವಸೆ
ಮಂಗಳೂರು: ಪತ್ರಕರ್ತರಿಗೆ ನಿವೇಶನ ನೀಡಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದ್ದಾರೆ. ಪತ್ರಕರ್ತರಿಗೆ ನಿವೇಶನ ಒಸಗಿಸುವುದಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮನವಿ ಸಲ್ಲಿಸಿದ್ದು, ಮನವಿ ಸ್ವೀಕರಿಸಿದ ಸಚಿವರು ಪತ್ರಕರ್ತರಿಗೆ ನಿವೇಶನ ನೀಡುವ ಕುರಿತು ಬೆಂಗಳೂರಿನಿಂದಲೂ ಮನವಿ ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಸಂಜೀವ […]
ಪೆರ್ಡೂರು ಜೋಗಿಬೆಟ್ಟು: ಇಂಚರ ಗೆಳೆಯರ ಬಳಗದಿಂದ ಪ್ಲಾಸ್ಟಿಕ್ ಮುಕ್ತ ಸ್ವಚ್ಚತಾ ಆಂದೋಲನ
ಉಡುಪಿ: ಇಂಚರ ಗೆಳೆಯರ ಬಳಗ ಜೋಗಿಬೆಟ್ಟು ಪೆರ್ಡೂರು ಇದರ ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ 3ನೇ ಕಾರ್ಯಕ್ರಮ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಆಂದೋಲನ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಭಾನುವಾರ ನಡೆಯಿತು. ಬೆಳಿಗ್ಗೆ 8 ರಿಂದ ಜೋಗಿಬೆಟ್ಟಿನಿಂದ ಪ್ರಾರಂಭಿಸಿ ಹತ್ರಬೈಲು ಭಜನಾ ಮಂದಿರದವರೆಗೆ, ಪಾಡಿಗಾರ ಕೈಕಂಬ ರಸ್ತೆಯಿಂದ ಪೆರ್ಡೂರು ಹೈಸ್ಕೂಲ್ ನ ವರೆಗೆ ಸ್ವಚ್ಛತೆ ಮಾಡಲಾಯಿತು. ಈ ಸಂದರ್ಭ ದಿವಾಕರ್ ಶೆಟ್ಟಿ, ಹೊಸನಗರದ ಪಿ.ಡಿ.ಓ ಅಧಿಕಾರಿ ವಿಶ್ವನಾಥ್, ಉದ್ಯಮಿ ಪ್ರವೀಣ್ ಸೇರ್ವೇಗಾರ್ ಹತ್ರಬೈಲು, ಶ್ರೀ ರಾಮ ಭಜನಾ ಮಂಡಳಿ […]