ನಟ ಕಿಚ್ಚ ಸುದೀಪ್ ಅಭಿಮಾನಿ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳು ಅರೆಸ್ಟ್
ಕುಂದಾಪುರ: ನಟ ಕಿಚ್ಚ ಸುದೀಪ್ ಅಭಿಮಾನಿಯೋರ್ವನ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಕಡ ಗೆಳೆಯರ ಬಳಗ ಕಾರಂತ ಪುರಸ್ಕಾರ
ಕೋಟ: ರವೀಂದ್ರನಾಥ ಠಾಗೂರರ ಅನಂತರ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ ಭಾರತೀಯನಿದ್ದರೆ ಅದು ಶಿವರಾಮ ಕಾರಂತರು ಎಂದು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಭಿಪ್ರಾಯಪಟ್ಟರು. ಅವರು ಸಾಲಿಗ್ರಾಮ-ಕಾರ್ಕಡ ಗೆಳೆಯರ ಬಳಗದ ಆಶ್ರಯದಲ್ಲಿ ಅ.೧೩ರಂದು ಕಾರ್ಕಡ ಹಿ.ಪ್ರಾ.ಶಾಲೆಯಲ್ಲಿ ನಡೆದ ಡಾ.ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ, ಕಾರಂತ ಸಂಸ್ಮರಣೆ ಮತ್ತು ಗೆಳೆಯರ ಕಾರಂತ ಪುರಸ್ಕಾರ ಸಮಾರಂಭದಲ್ಲಿ ಗೆಳೆಯರ ಬಳಗ ಕಾರಂತ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು. ಕರ್ಣಾಟಕ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಬಂಧಕ ಬಿ.ಗೋಪಾಲಕೃಷ್ಣ ಸಾಮಗ ಕಾರ್ಯಕ್ರಮಕ್ಕೆ ಚಾಲನೆ […]
ಮಂಗಳೂರು: 41 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ
ಮಂಗಳೂರು : ಶಕ್ತಿನಗರದ ರಾಜೀವನಗರದಲ್ಲಿ 41 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀವನಗರವು ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶವಾಗಿದೆ. ಆ ನೆಲೆಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಗಮನ ಹರಿಸಲಾಗಿದೆ ಎಂದರು. ರಸ್ತೆ, ಒಳ ಚರಂಡಿ ಮುಂತಾದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸ್ಥಳೀಯ ನಿವಾಸಿಗಳು, ನನ್ನನ್ನು ಭೇಟಿ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿಕೊಡುವಂತೆ ಮನವಿ ಸಲ್ಲಿಸಿದ್ದರು. ಈಗಾಗಲೇ 1 ಕೋಟಿಗೂ ಅಧಿಕ ವೆಚ್ಚದ ಕಾಂಕ್ರೀಟ್ ರಸ್ತೆಯ […]
ಮೂಡಬಿದ್ರೆ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ದಾಳಿ, ಪರಿಶೀಲನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕು ಕಚೇರಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ನಾಗಕರಿರೊಬ್ಬರ ದೂರಿನ ಮೇರೆಗೆ ಕಾರವಾರ, ಉಡುಪಿ, ಚಿಕ್ಕಮಗಳೂರು ವಿಭಾಗಗಳ ಎಸ್‍ಪಿ, ಐದು ಮಂದಿ ನಿರೀಕ್ಷಕರು, ಏಳು ಮಂದಿ ಹೆಡ್ ಕಾಸ್ಟೇಬಲ್, ನಾಲ್ಕು ಮಂದಿ ಕಾಸ್ಟೇಬಲ್‍ಗಳು ದಾಳಿ ನಡೆಸಿ ಕಚೇರಿಯ ಅಟಲ್‍ಜೀ, ಜನಸ್ನೇಹಿ ವಿಭಾಗ, ಸರ್ವೆ ವಿಭಾಗ ಹಾಗೂ ಉಪ ತಹಶೀಲ್ದಾರ್ ಕಚೇರಿ ಪರಿಶೀಲನೆ ನಡೆಸಿದರು. ಈ ವೇಳೆ ತಾಲೂಕು ಕಚೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಎಂಟು […]
ಈ ದಿನ ನಿಮ್ಮ ರಾಶಿ ಭವಿಷ್ಯದಲ್ಲಿ ವಿಶೇಷವೇನಿದೆ ಗೊತ್ತಾ? ಪಂಡಿತ್ ವಾದಿರಾಜ್ ಭಟ್ ಹೇಳ್ತಾರೆ
ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯಂ ಪಂಡಿತ್ ವಾದಿರಾಜ್ ಭಟ್ 9743666601 ಮೇಷ: ಈ ದಿನ ಅಪರೂಪದ ವ್ಯಕ್ತಿಯ ಪರಿಚಯದಿಂದಾಗಿ ನಿಮ್ಮ ಜೀವನದಲ್ಲಿ ಭಾರಿ ಬದಲಾವಣೆ ಕಂಡು ಬರುವುದು. ಹಿರಿಯರು ಮಾಡಿದ ಚರ, ಸ್ಥಿರ ಆಸ್ತಿಗಳ ವಿಷಯದಲ್ಲಿ ದಾಯಾದಿಗಳೊಂದಿಗೆ ತೀವ್ರ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಮಿತ್ರರು ಕೊಡುವ ಸಲಹೆಗಳನ್ನು ಸ್ವೀಕರಿಸುವುದರಿಂದ ಆಸ್ತಿ ವಿಚಾರಗಳಲ್ಲಿ ಸ್ವಲ್ಪ ಅನುಕೂಲವಾಗುವುದು. ಆರ್ಥಿಕ ಸ್ಥಿತಿಗತಿಯಲ್ಲಿ ಅಲ್ಪ ಹಿನ್ನಡೆ ಕಂಡು ಬರುವುದು. ವ್ಯಾಪಾರಿಗಳಿಗೆ ಈ ವಾರ ಹೆಚ್ಚಿನ ಅನುಕೂಲ ಕಂಡುಬರುವುದು. ಕೆಲವು ವಿಷಯಗಳಲ್ಲಿ ರಾಜಿ […]