ಕಾನ್ಸ್ ಟೇಬಲ್ ಹುದ್ದೆ- ಕಾರ್ಯಾಗಾರ

ಉಡುಪಿ: ರಾಜ್ಯದ ಪೋಲಿಸ್ ಇಲಾಖೆಯಲ್ಲಿ 3,000 ನಾಗರೀಕ ಪೋಲಿಸ್ ಮತ್ತು ಸಶಸ್ತ್ರ ಪೋಲಿಸ್ ಕಾನ್ಸ್‍ಟೇಬಲ್ ಹುದ್ದೆಗೆ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಆಹ್ವಾನಿಸಿದ್ದು, ಜಿಲ್ಲೆಯಲ್ಲಿ, ಸುಮಾರು 150 ಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿರುತ್ತದೆ. ಪೋಲಿಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ತಯಾರಿಯ ಬಗ್ಗೆ ಕಾರ್ಯಗಾರವನ್ನು ಅಕ್ಟೋಬರ್ 6 ರಂದು ಬೆಳಗ್ಗೆ 10 ಕ್ಕೆ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿದೆ, ಹೆಚ್ಚಿನ ಮಾಹಿತಿಗಾಗಿ ಹರೀಶ್‍ಕುಮಾರ್ ಶೆಟ್ಟಿ (9980040551), ವಿವೇಕ್ ಅಮೀನ್ (9008649069) ನ್ನು ಸಂಪರ್ಕಿಸುವಂತೆ […]

ಅ.11ರಂದು ದೇವರು ಬೇಕಾಗಿದ್ದಾರೆ ಕನ್ನಡ ಚಲನಚಿತ್ರ ತೆರೆಗೆ 

ಉಡುಪಿ: ಹೊರಿಝೇನ್‌ ಮೂವೀಸ್‌ ಬ್ಯಾನರ್‌ನಡಿ ನಿರ್ಮಿಸಲಾದ ‘ದೇವರು ಬೇಕಾಗಿದ್ದಾರೆ’ ಕನ್ನಡ ಚಲನಚಿತ್ರ ಅ. 11ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಕೇಂಜ ಚೇತನ್‌ ಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚಿತ್ರವನ್ನು ಸುಮಾರು 60 ಲಕ್ಷ ರೂ.‌ ವೆಚ್ಚದಲ್ಲಿ ನಿರ್ಮಿಸಿದ್ದು, ಇದಕ್ಕೆ 16 ಮಂದಿ ಬಂಡವಾಳ ಹೂಡಿದ್ದಾರೆ. ಬೆಂಗಳೂರು, ಕೋಲಾರ ಗುಡಿಬಂಡೆ, ಕೈವಾರ ವ್ಯಾಪ್ತಿಯಲ್ಲಿ 30 ದಿನಗಳ ಕಾಲ‌ ಚಿತ್ರೀಕರಣ ಮಾಡಲಾಗಿದೆ. ರಸ್ತೆ ಅಪಘಾತದಲ್ಲಿ ತನ್ನ ಕುಟುಂಬದವರನ್ನು ಕಳೆದುಕೊಂಡ ಆರು ತಿಂಗಳ ಮಗು, ತನಗೆ ಬುದ್ಧಿ ಬಂದ […]

ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ ಶೀಘ್ರವೇ ಸರಿಪಡಿಸಲಾಗುವುದು: ಶಾಸಕ ಕಾಮತ್

ಮಂಗಳೂರು: ಪ್ರಾಪರ್ಟಿ ಕಾರ್ಡಿನಿಂದ ಉಂಟಾದ ಅವ್ಯವಸ್ಥೆಯನ್ನು ಶೀಘ್ರವೇ ಸರಿಪಡಿಸಲಾಗುವುದೆಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಪ್ರಾಪರ್ಟಿ ಕಾರ್ಡನ್ನು ಜಾರಿಗೆ ತರುವಾಗ ಸಮರ್ಪಕವಾದ ನಿಯಮಗಳನ್ನು ತರದ ಕಾರಣ ಹಾಗೂ ತಾಂತ್ರಿಕ ದೋಷಗಳಿಂದಾಗಿ ಸದ್ಯ ಪ್ರಾಪರ್ಟಿ ಕಾರ್ಡ್ ಎನ್ನುವುದು ಗೊಂದಲದ ಗೂಡಾಗಿದೆ.  ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರೊಂದಿಗೆ, ನಗರಾಭಿವೃದ್ಧಿ ಹಾಗೂ ಕಂದಾಯ ಸಚಿವರಾದ ಆರ್.ಅಶೋಕ್ ಅವರಲ್ಲಿ ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ […]

ಟೆಸ್ಟ್ ಕ್ರಿಕೆಟ್ ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ: ದಿಗ್ಗಜರಿಂದ ಭಾರೀ ಪ್ರಶಂಸೆ

ವಿಶಾಖಪಟ್ಟಣಂ: ಸೌತ್ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರ ಕನ್ನಡಿಗ ಮಯಾಂಕ್ ಅಗರ್ವಾಲ್ ಚೊಚ್ಚಲ ದ್ವಿಶಕ ಸಿಡಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಈ ಹಿಂದೆ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ದ ಸಿಡಿಸಿದ 77 ರನ್ ಸಿಡಿಸಿದ್ದು, ಮಯಾಂಕ್ ಅವರ ಬೆಸ್ಟ್ ಸ್ಕೋರ್ ಆಗಿತ್ತು. ಇದೀಗ 215 ಸಿಡಿಸುವ ಮೂಲಕ‌ ಭಾರತ ತಂಡದ ಆರಂಭಿಕ ಸಮಸ್ಯೆಗೆ ಮುಕ್ತಿ ಹಾಡಿದ್ದಾರೆ. ಅಲ್ಲದೇ ಇವರ ಈ ಸಾಧನೆಗೆ ಕ್ರಿಕೆಟ್ ದಿಗ್ಗಜರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪ್ರೊ ಕಬಡ್ಡಿ: ಪವನ್ ದಾಖಲೆ ರೈಡ್; ಬೆಂಗಳೂರು ಬುಲ್ಸ್‌ಗೆ ಜಯ

ಪಂಚಕುಲಾ: ಪವನ್ ಕುಮಾರ್ ಶೆಹ್ರಾವತ್ ಫುಲ್ ಚಾರ್ಚ್ ಆಟದಿಂದಾಗಿ ಬೆಂಗಳೂರು ಬುಲ್ಸ್‌ ತಂಡವು ಬುಧವಾರ ಹರಿಯಾಣ ಸ್ಟೀಲರ್ಸ್‌ ವಿರುದ್ಧ ಗೆಲುವು ದಾಖಲಿಸಿದೆ. ಇದರಿಂದಾಗಿ ಬೆಂಗಳೂರು ಬುಲ್ಸ್ ತಂಡದ ಪ್ಲೇ ಆಫ್‌ ಆಸೆ ಜೀವಂತವಾಗುಳಿದಿದೆ. ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ 59–36ರಿಂದ ಹರಿಯಾಣ ಸ್ಟೀಲರ್ಸ್‌ ತಂಡವನ್ನು ಹಣಿಯಿತು. ಪವನ್ ಕುಮಾರ್ ಶೆಹ್ರಾವತ್ ಆಟದಲ್ಲಿ 39 ಪಾಯಿಂಟ್ಸ್‌ ಕಲೆ ಹಾಕಿದರು. ಇದರಲ್ಲಿ 34 ರೈಡಿಂಗ್, 5 ಬೋಸನ್ ಪಾಯಿಂಟ್‌ಗಳು ಸೇರಿವೆ. ಈ ಮೂಲಕ ಪವನ್ ದಾಖಲೆ ಮಾಡಿ ಗಮನ ಸೆಳೆದರು.