ಶ್ರೀಕೃಷ್ಣಮುಖ್ಯಪ್ರಾಣ”ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ,ಸಾ೦ಸ್ಕೃತಿಕ ಸ೦ಘ: ಲಾ೦ಛನ ಅನಾವರಣ

ಉಡುಪಿ: ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕುಣಿಬೆ೦ಚಿ ಗ್ರಾಮದಲ್ಲಿ ಇದೇ ತಿ೦ಗಳ ಅಕ್ಟೋಬರ್ 20ರ೦ದು ಉಡುಪಿಯ ಪೇಜಾವರ ಮಠಾಧೀಶರಿ೦ದ ಉದ್ಘಾಟನೆಗೊಳ್ಳಲಿರುವ “ಶ್ರೀಕೃಷ್ಣಮುಖ್ಯಪ್ರಾಣ”ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ,ಸಾ೦ಸ್ಕೃತಿಕ ಸ೦ಘ(ರಿ)ನ ಲಾ೦ಛನವನ್ನು ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಬುಧವಾರದ೦ದು ಅನಾವರಣಗೊಳಿಸಿದರು. ಸ೦ಘದ ಅಧ್ಯಕ್ಷರಾದ ಶೇಖರ ಮ೦ಗಳಗುಡ್ಡ,ಉಪಾಧ್ಯಕ್ಷರಾದ ಹನುಮ೦ತ ಬೇನಾಳ, ಸದಸ್ಯರಾದ  ಮ೦ಜುನಾಥ ಮ೦ಗಳಗುಡ್ಡ, ಪ್ರದೀಪ್ ಬಿಶೆಟ್ಟಿ, ಹೊನ್ನಪ್ಪಬಿಶೆಟ್ಟಿ, ಮಠದ ಸಾರ್ವಜನಿಕ ಸ೦ಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್, ಮಧುಸೂದನ ಆಚಾರ್ಯ, ಗುರುರಾಜ ಆಚಾರ್ಯ ಹಾಗೂ […]

ಗಾಂಧೀಜಿಯವರ ಚಿಂತನೆಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪ- ಪ್ರೊ.ರಾಮಚಂದ್ರ ಭಟ್

ಮಂಗಳೂರು: ಗಾಂಧೀಜಿಯವರು ತಮ್ಮ ಬದುಕಿನಲ್ಲಿ ಸರಳತೆ ಮತ್ತು ಅಹಿಂಸೆಯ ಚಿಂತನೆಗಳಿಗೆ ಹೆಚ್ಚಿನ ಮಹತ್ವವನ್ನುಕೊಟ್ಟಿದ್ದಾರೆ ಹಾಗಾಗೀ ಇಂದಿನ ಸಮಾಜಕ್ಕೆಇರ್ವರ ವ್ಯಕ್ತಿತ್ವಅತೀ ಅಗತ್ಯ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್ ಹೇಳಿದರು. ಅವರು ಮಂಗಳೂರು ಎಕ್ಸ್‌ಪರ್ಟ್ ಪದವಿ ಪೂರ್ವಕಾಲೇಜಿನ ಸಭಾಂಗಣದಲ್ಲಿ ನಡೆದ ಗಾಂಧಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ಗಾಂಧೀಜಿಯವರು ದೇಶ ವಿದೇಶಗಳಲ್ಲಿ ಹಲವರಿಗೆ ಆದರ್ಶಪ್ರಾಯರಾಗಿದ್ದು ಅವರ ವ್ಯಕ್ತಿತ್ವ ಅನನ್ಯವಾಗಿದೆ. ಅವರ ಚಿಂತನೆಗಳು ಇಂದು ಎಲ್ಲಡೆ ಹರಡಿದೆ.ತಮ್ಮ ಬದುಕಿನಲ್ಲಿ ದೇಶ ಸೇವೆಗಾಗಿ ಸರಳತೆಯ ಬದುಕನ್ನು ಸಮರ್ಪಿಸಿದರು.ಹಾಗೇ ಇಂದಿನ ಯುವ ಜನಾಂಗ ಕೂಡ […]

ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ವಿವಿಧ ಸೌಲಭ್ಯ- ಡಿಸಿ ಜಗದೀಶ್

ಉಡುಪಿ:ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ನೆರವು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ. ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಲಿಂಗತ್ವ ಅಲ್ಪ ಸಂಖ್ಯಾತರ ಅಭಿವೃದ್ದಿ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಉದ್ಯೋಗ ಮತ್ತು ಸ್ವ ಉದ್ಯೋಗ ಮಾಡಲು ಇಚ್ಚಿಸುವವರು ಒಂದು ವಾರದ ಒಳಗೆ ತಮ್ಮ ಪಟ್ಟಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ಉದ್ಯೋಗ […]

ಉಡುಪಿಯಲ್ಲಿ ಉಚಿತ ಕಂಪ್ಯೂಟರ್ ತರಬೇತಿ

ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಉಡುಪಿಯಲ್ಲಿ ಸಾಫ್ಟ್ ಸ್ಕೀಲ್ಸ್ ಮತ್ತು ಬೇಸಿಕ್ ಕಂಪ್ಯೂಟರ್, ಕನ್ನಡನುಡಿ ಟೈಪಿಂಗ್ ತರಬೇತಿಯನ್ನು ಪಡೆಯಲು ಇಚ್ಚಿಸುವ ಆಸಕ್ತ ಯುವಕ- ಯುವತಿಯರು, ವಿದ್ಯಾರ್ಥಿಗಳು ನೋಂದಾವಣಿ ಮಾಡಬಹುದಾಗಿದೆ. ತರಬೇತಿಯು ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ ಕಛೇರಿಯನ್ನು ಅಥವಾ ದೂ.ಸಂಖ್ಯೆ: 0820-2574869, 9480259790 ನ್ನು ಸಂಪರ್ಕಿಸುವಂತೆ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ಅ. 4 ರಂದು: ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ( ಎನ್.ಸಿ.ಡಿ ಕ್ಲಿನಿಕ್ ಎನ್.ಟಿ.ಸಿ.ಪಿ ವಿಭಾಗ), ಜಿಲ್ಲಾ ಸರ್ವೇಕ್ಷಣಾ ಘಟಕ, ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ ಮಣಿಪಾಲ ಮತ್ತು ಹಿರಿಯ ನಾಗರಿಕರ ಸಂಸ್ಥೆ ಉಡುಪಿ ಇವರ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಕ್ಟೋಬರ್ 4 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ರ ವರೆಗೆ ಜಿಲ್ಲಾ […]