ವಿಶ್ವ ಹೃದಯ ದಿನದ ಅಂಗವಾಗಿ ಆರೋಗ್ಯದೆಡೆ ನಮ್ಮ ನಡಿಗೆ ಜನಜಾಗೃತಿ ಜಾಥ
ಉಡುಪಿ: ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗ, ಕಡೆಕಾರು ಗ್ರಾಮೀಣ ಹೆರಿಗೆ ಮತ್ತು ಶಿಶು ಕಲ್ಯಾಣ ಕೇಂದ್ರ, ಅಂಬಲಪಾಡಿ ಮತ್ತು ಕಡೆಕಾರು ಗ್ರಾಮ ಪಂಚಾಯ್ತಿ, ಸಾಫಲ್ಯ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ‘ಆರೋಗ್ಯದೆಡೆ ನಮ್ಮ ನಡಿಗೆ’ ಎಂಬ ಧ್ಯೇಯ ವಾಕ್ಯದಡಿ ಜನಜಾಗೃತಿ ಜಾಥಾ ಭಾನುವಾರ ನಡೆಯಿತು. ಅಂಬಲಪಾಡಿ ಗ್ರಾಮ ಪಂಚಾಯ್ತಿನಿಂದ ಕಡೆಕಾರಿನ ಗ್ರಾಮೀಣ ಹೆರಿಗೆ ಮತ್ತು ಶಿಶು ಕಲ್ಯಾಣ ಕೇಂದ್ರದವರೆಗೆ ನಡೆದ ಜನಜಾಗೃತಿ ಜಾಥಾಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡೀನ್ ಡಾ. […]
ಅಗಲಿದ ಕಲಾವಿದ ವಿನಯ ಆಚಾರ್ಯ ಕುಟುಂಬಕ್ಕೆ ಸಹಾಯಧನ ವಿತರಣೆ
ಮಂಗಳೂರು: ಇತ್ತೀಚೆಗೆ ನಿಧನರಾದ ಯುವ ಯಕ್ಷಗಾನ ಕಲಾವಿದ ಕಡಬ ವಿನಯ ಆಚಾರ್ಯ ಅವರ ಮಾತೃಶ್ರೀಯವರಾದ ಸುಲೋಚನಾ ಆಚಾರ್ಯ ಅವರಿಗೆ ಉಡುಪಿ ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ 50 ಸಾವಿರ ರೂಪಾಯಿಯ ಚೆಕ್ನ್ನು ವಿತರಿಸಲಾಯಿತು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಅವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡವು ವಾಮದಪದವಿನ ಕಡಬ ವಿನಯ ಆಚಾರ್ಯ ಅವರ ಮನೆಗೆ ಭೇಟಿ ನೀಡಿ ಪ್ರತಿಭಾವಂತ ಯುವ ಕಲಾವಿದನ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿತು. […]
ಮುಜರಾಯಿ ಇಲಾಖೆ ದೇವಸ್ಥಾನದಲ್ಲೇ ಬಡವರು ಮದುವೆಯಾಗಬಹುದು: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಬೇಕಾದಷ್ಟು ಹಣವಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಬಡವರು ದೇವಸ್ಥಾನಗಳಲ್ಲಿಯೇ ಮದುವೆ ಮಾಡಿಕೊಳ್ಳಬೇಕು. ದೇವಸ್ಥಾನಗಳಲ್ಲಿಯೇ ಸಾಮೂಹಿಕ ವಿವಾಹಗಳನ್ನು ಆಯೋಜಿಸಿ ಬಡ ಜೋಡಿಗಳಿಗೆ ಮದುವೆ ಮಾಡಿಸುವಂತೆ ಕರ್ನಾಟಕ ರಾಜ್ಯದಲ್ಲಿರುವ ಶ್ರೀಮಂತ ದೇಗುಲಗಳ ಮುಖಂಡರು ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬ್ರಹ್ಮಶ್ರೀ ನಾರಾಯಣಗುರುಗಳ 165ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಬನ್ನಂಜೆ ಶ್ರೀ […]
ಮತಾಂತರದ ಮೂಲಕ ಹಿಂದೂ ಧರ್ಮಕ್ಕೆ ಮೋಸ ಮಾಡಬೇಡಿ: ಬೆಳ್ಮಣ್ ಚಲೋ ಸಭೆಯಲ್ಲಿ ಡಾ. ಪ್ರಭಾಕರ ಭಟ್
ಕಾರ್ಕಳ: ಹಿಂದೂ ಸಮಾಜಕ್ಕೆ ಮತಾಂತರದ ಮೂಲಕ ಮೋಸ ಮಾಡುವ ಕೆಲಸ ಯಾರೂ ಮಾಡಬೇಡಿ. ಹಿಂದೂ ಧರ್ಮ ಇಡೀ ಜಗತ್ತಲ್ಲಿ ಸರ್ವ ಶ್ರೇಷ್ಠವಾದ ಧರ್ಮವಾಗಿದೆ. ಹೀಗಾಗಿ ಬಂದರೂ ಈ ಹಿಂದೂ ದೇಶವನ್ನು ಮತಾಂತರ ಮಾಡಲು ಸಾಧ್ಯವಿಲ್ಲ. ಪದೇ ಪದೇ ಧರ್ಮವನ್ನು ಕೆಣಕುವ ಪ್ರಯತ್ನಕ್ಕೆ ಕೈ ಹಾಕಬೇಡಿ. ಕೆಣಕಿದರೆ ಹಿಂದೂಗಳು ಸುಮ್ಮನಿರುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು. ವಿಶ್ವ ಹಿಂದೂ ಪರಿಷದ್ ಭಜರಂಗದಳ ಕಾರ್ಕಳ […]
ಉಡುಪಿ: ವಜ್ರಾಭರಣಗಳ ಪ್ರದರ್ಶನ ವಿಶ್ವವಜ್ರ ಉದ್ಘಾಟನೆ
ಉಡುಪಿ: ಉಡುಪಿಯ ವಿಎಸ್ಟಿ ರಸ್ತೆಯ ಗೀತಾಂಜಲಿ ಸಿಲ್ಕ್ಸ್ ಸಮೀಪದ ವೆಸ್ಟ್ಕೋಸ್ಟ್ ಬಿಲ್ಡಿಂಗ್ನಲ್ಲಿರುವ ಸುಲ್ತಾನ್ ಡೈಮಂಡ್ಸ್ ಅಂಡ್ ಗೋಲ್ಡ್ನ ಉಡುಪಿ ಶೋರೂಂನಲ್ಲಿ 15 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಕ್ಷಿಣ ಭಾರತದ ಅತೀ ದೊಡ್ಡ ವಜ್ರಾಭರಣಗಳ ಪ್ರದರ್ಶನ ‘ವಿಶ್ವವಜ್ರ’ವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಜಿ. ಶಂಕರ್ ಭಾನುವಾರ ಉದ್ಘಾಟಿಸಿದರು. ಜಿಪಂ. ಸದಸ್ಯೆ ಗೀತಾಂಜಲಿ ಸುವರ್ಣ,ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೀಣಾ ಎಸ್ ಶೆಟ್ಟಿ , ಶಾಸ್ತ್ರ ಶೆಟ್ಟಿ , ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ, […]