ಗಂಗೊಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅನಂತ ಚತುರ್ದಶಿಯ ಗೌಜಿ
ಗಂಗೊಳ್ಳಿ : ಪುರಾಣ ಪ್ರಸಿದ್ಧ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬಂದಿರುವ ಅನಂತ ಚತುರ್ದಶಿ ವೃತವನ್ನು ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಎಸ್.ವೆಂಕಟರಮಣ ಆಚಾರ್ಯ ನೇತೃತ್ವದಲ್ಲಿ ಅನಂತ ಚತುರ್ದಶಿ ವೃತದ ವಿವಿಧ ಧಾರ್ಮಿಕ ಅನುಷ್ಠಾನಗಳು ಶಾಸ್ತ್ರೋಕ್ತವಾಗಿ ಜರಗಿತು. ಅನಂತ ಚತುರ್ದಶಿ ಪ್ರಯುಕ್ತ ಶ್ರೀ ದೇವರಿಗೆ ವಿಶೇಷ ಪೂಜೆ, ಪುನಸ್ಕಾರಗಳು, ನಮಸ್ಕಾರ ಸೇವೆ ಸಹಿತ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಸಂಪನ್ನಗೊಂಡಿತು. ಅರ್ಚಕ ವೃಂದದವರು, ದೇವಳದ ಆಡಳಿತ ಮಂಡಳಿ ಸದಸ್ಯರು, […]
ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ 51.48 ಲಕ್ಷ ರೂ. ಲಾಭ, ಶೇ. 9.50 ಡಿವಿಡೆಂಡ್
ಮಂಗಳೂರು:ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ 11ನೇ ವಾರ್ಷಿಕ ಸಾಮಾನ್ಯ ಸಭೆ ಶನಿವಾರ ಎಸ್ಸಿಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ್ದ ಭಾಸ್ಕರ್ ಎಸ್ ಕೋಟ್ಯಾನ್ ಮಾತನಾಡಿ, ನಮ್ಮ ಸಂಸ್ಥೆಯು ಸರ್ವ ಸದಸ್ಯರ ಮತ್ತು ಠೇವಣಿದಾರರ ಸಹಕಾರದಿಂದ ಉತ್ತಮ ಅಭಿವೃದ್ಧಿ ಸಾಧಿಸಿದೆ. 11,684 ಸದಸ್ಯರನ್ನು ಹೊಂದಿದ್ದು, ಪಾಲು ಬಂಡವಾಳ 1.42 ಕೋಟಿ ರೂ. ಇರುತ್ತದೆ. 45.54 ಕೋಟಿ ರೂ. ಠೇವಣಿ ಹೊಂದಿದ್ದು ಪ್ರಸಕ್ತ ಸಾಲಿನಲ್ಲಿ 46.05 ಕೋಟಿ ರೂ.ಸಾಲ ನೀಡಲಾಗಿದೆ ಎಂದರು. ಸಂಸ್ಥೆಯು 51.48 ಲಕ್ಷ ರೂ. ಲಾಭ […]
ಮಂಗಳೂರು ವಿವಿ ಮಾಜಿ ಕುಲಪತಿ ಬೈರಪ್ಪ ಆಹ್ವಾನ ಖಂಡಿಸಿ ಎಬಿವಿಪಿ ಪ್ರತಿಭಟನೆ
ಮಂಗಳೂರು: ಮಂಗಳೂರು ವಿವಿಯ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಹಿಂದಿನ ಕುಲಪತಿ ಕೆ. ಬೈರಪ್ಪ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ, ಎಬಿವಿಪಿ ವಿಧ್ಯಾರ್ಥಿಗಳಿಂದ ಗುರುವಾರ ಪ್ರತಿಭಟನೆ ನಡೆಯಿತು. ಮಂಗಳ ಅಡಿಟೋರಿಯಂ ಬಳಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹಗರಣ ಮಾಡಿದ ಬೈರಪ್ಪ ಅವರಿಗೆ ಹೇಗೆ ಆಹ್ವಾನ ನೀಡಿದ್ದೀರಾ ಎಂದು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಎಬಿವಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಬೈರಪ್ಪ ಕಾರ್ಯಕ್ರಮಕ್ಕೆ ಬಂದಲ್ಲಿ ಘೇರಾವ್ ಹಾಕುತ್ತೇವೆ ಎಂದು ಎಬಿವಿಪಿಯ […]
‘ಗಿರ್ಗಿಟ್’ ತುಳು ಚಲನಚಿತ್ರಕ್ಕೆ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ
ಮಂಗಳೂರು: ಎರಡು ವಾರಗಳ ಹಿಂದೆ ಬಿಡುಗಡೆಗೊಂಡು ಭರ್ಜರಿ ಯಶಸ್ಸಿನೊಂದಿಗೆ ಪ್ರದರ್ಶನ ಕಾಣುತ್ತಿರುವ ‘ಗಿರ್ಗಿಟ್’ ತುಳು ಚಲನಚಿತ್ರದ ಪ್ರದರ್ಶನಕ್ಕೆ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಚಿತ್ರದಲ್ಲಿ ವಕೀಲರ ಸಮುದಾಯವನ್ನು ಅವಹೇಳನ ಮಾಡಲಾಗಿದೆ. ಜೊತೆಗೆ ನ್ಯಾಯಾಲಯವನ್ನು ನಿಂದನೆ ಮಾಡಲಾಗಿದೆ ಎಂದು ವಕೀಲರ ಸಂಘ ನ್ಯಾಯಾಲಯಕ್ಕೆ ದೂರು ನೀಡಿತ್ತು. ಸಿನಿಮಾದಲ್ಲಿ ನ್ಯಾಯಾಲಯ ಮತ್ತು ವಕೀಲರನ್ನು ತುಚ್ಛವಾಗಿ ಬಿಂಬಿಸಲಾಗಿದ್ದು, ಇದರಿಂದ ನ್ಯಾಯಾಂಗ ಮತ್ತು ವಕೀಲರ ಗೌರವಕ್ಕೆ ಧಕ್ಕೆಯಾಗಿದೆ ಎಂದು ಬಾರ್ ಅಸೋಸಿಯೇಷನ್ ಹೇಳಿದೆ. ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿ, […]
ಶ್ರೀ ಗುರು ರಾಘವೇಂದ್ರ ಸ್ವಾಮಿಯ ಈ ದಿನದಂದು ನಿಮ್ಮ ರಾಶಿ ಭವಿಷ್ಯವೇನು?:ಜೋತಿಷಿ ರಾಮಚಂದ್ರ ರಾವ್ ಹೇಳಿದ್ದಾರೆ
ಶ್ರೀ ಗುರು ರಾಘವೇಂದ್ರ ಸ್ವಾಮಿ ನೆನೆದು ಗುರುವಾರದ ನಿಮ್ಮ ಅದೃಷ್ಟದ ರಾಶಿ ಫಲವನ್ನು ನೋಡೋಣ. ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯ ಪ್ರವೀಣ್:: ರಾಮಚಂದ್ರ ರಾವ್-9845307809 ಮಹೋನ್ನತ ಬಲಿಷ್ಠ ಪೂಜ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ವಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ, ಹಣಕಾಸು, ಪ್ರೇಮ ವಿಚಾರ, ಇನ್ನೂ ಗುಪ್ತಾ ಕಠಿಣವಾಗಿರಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು -9845307809 -ಮೇಷ ರಾಶಿ ವಿಶ್ರಮ ರಹಿತವಾದ […]