ಕಾಪು: ಮಕ್ಕಳಿಗೆ ಕುಟುಂಬ ವ್ಯವಸ್ಥೆ ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮ

ಉಡುಪಿ: ಅವಿಭಕ್ತ ಕುಟುಂಬಗಳು ಕಡಿಮೆಯಾಗಿ ಸಂಬಂಧಗಳು ಮರೆಯಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ  ಪುಟಾಣಿ ಮಕ್ಕಳಿಗೆ ಕುಟುಂಬ ವ್ಯವಸ್ಥೆಯನ್ನು ಪರಿಚಯಿಸುವ ವಿಶಿಷ್ಟ ಕಾರ್ಯಕ್ರಮವನ್ನು ಮಂಗಳವಾರ ಕಾಪು ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ವತಿಯಿಂದ ಹಮ್ಮಿಕೊಳ್ಳಲಾಯಿತು. ಯುಕೆಜಿ ವಿದ್ಯಾರ್ಥಿ ಮುಹಮ್ಮದ್ ನೆಹಾನ್ ಅವರ ಕಾಪು ಪೊಲಿಪುನಲ್ಲಿರುವ ಮನೆಗೆ ಅದೇ ತರಗತಿಯ ಸುಮಾರು 60 ಪುಟಾಣಿ ಮಕ್ಕಳನ್ನು ಶಿಕ್ಷಕಿಯರು ಕರೆದೊಯ್ದು ಕುಟುಂಬ ವ್ಯವಸ್ಥೆಯ ಕುರಿತು ಪಾಠ ಮಾಡಿದರು. ವಿದ್ಯಾರ್ಥಿಯ ತಂದೆ ತಾಯಿ ಹಾಗೂ ಅಜ್ಜ ಅಜ್ಜಿಯಂದಿರ ಪರಿಚಯದ ಮೂಲಕ ಸಂಬಂಧಗಳ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಲಾಯಿತು.   ಅಜ್ಜ ಅಜ್ಜಂದಿರ ಮಹತ್ವಗಳ ಬಗ್ಗೆ ತಿಳಿ ಹೇಳಲಾಯಿತು. ಬಳಿಕ ವಿದ್ಯಾರ್ಥಿಗಳು ಹೆತ್ತವರ ಪ್ರಾಮುಖ್ಯತೆಗಳನ್ನು ಬಿಂಬಿಸುವ ಹಾಡನ್ನು ಹಾಡಿದರು.  ಕೆಲ ವಿದ್ಯಾರ್ಥಿಗಳು ನೀತಿ ಕಥೆಗಳನ್ನು ಹೇಳಿದರು. ಹೀಗೆ ಸಂಬಂಧಗಳ ಪ್ರಾಮುಖ್ಯತೆ ತಿಳಿಸುವ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಓಫಿಲಿಯಾ ಕುಟಿನ್ಹಾ,  ಶಿಕ್ಷಕಿಯರಾದ ಆಶಾ ಅಂಚನ್, ವನಿತಾ ಕೋಟ್ಯಾನ್  ಉಪಸ್ಥಿತರಿದರು.

ವೇಷ ಹಾಕಿ ರಂಜಿಸ್ತಾರೆ, ಮಾನವೀಯತೆಗೆ ಮಿಡಿತಾರೆ : ರವಿ ಕಟಪಾಡಿಯ ಮಾನವೀಯ ಮುಖ

(ಉಡುಪಿ XPRESS-ನಮ್ಮೂರ ಸ್ಪೆಷಲ್ ವ್ಯಕ್ತಿ) ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಸುಮಾರು ಮಂದಿ ವೇಷ ಧರಿಸಿ ಜನರನ್ನು ರಂಜಿಸುವುದು ಸರ್ವೇ ಸಾಮಾನ್ಯ. ಆದರೆ  ಇದು ಕೇವಲ ಸಂಭ್ರಮಕ್ಕೆ ಸೀಮಿತವಾಗದೇ ಮಾನವೀಯ ನೆಲೆಯಲ್ಲೂ ಆಚರಿಸಬಹುದು  ಎಂದು ತೋರಿಸಿಕೊಟ್ಟವರು ಮಾತ್ರ   ರವಿ ಕಟಪಾಡಿ ಅನ್ನೋ ಹೆಮ್ಮೆಯ ಕಲಾವಿದ.  ರವಿ ಕಟಪಾಡಿ ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯವರು. ಕಟ್ಟಡ ಕಾರ್ಮಿಕರಾಗಿರುವ ಇವರು, ಬಡ ಕುಟುಂಬದಲ್ಲೇ ಬೆಳೆದರು. ಮಾನವೀಯತೆಗೆ ಮಿಡಿಯುವ ಈ ಕಲಾವಿದನ ಇನ್ನೊಂದು ಮುಖದ ಪರಿಚಯ ಇಲ್ಲಿದೆ. […]

ಕುಂದಾಪುರ: ಚೌತಿಯ ಸಡಗರ,ಆನೆಗುಡ್ಡೆಯಲ್ಲಿ ಭಕ್ತರ ದಂಡು                 

ಕುಂದಾಪುರ: ತಾಲೂಕಿನೆಲ್ಲೆಡೆಯಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಸೋಮವಾರದಂದು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆನಿಂದಲೇ ಮಳೆಯಿಲ್ಲದ ಕಾರಣ ಪ್ರಮುಖ ಗಣಪತಿ ದೇವಾಲಯಗಳಲ್ಲಿ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ತೆರಳಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಆನೆಗುಡ್ಡೆಯಲ್ಲಿ ಭಕ್ತರ ದಂಡು                  ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಬೆಳಿಗ್ಗೆನಿಂದಲೇ ವಿಶೇಷ ಪೂಜಾ-ಕೈಂಕರ್ಯಗಳು, ಗಣಹೋಮ, ಮಹಾಪ್ರಸಾದ ಮೊದಲಾದ ಧಾರ್ಮಿಕ ಕಾರ್ಯಗಳು ನಡೆದವು. ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಅನಿವಾಸಿ […]

ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಬಂಟ್ವಾಳ ಬಂಟರ ಸಂಘದಿಂದ ಸಮ್ಮಾನ

ಬಂಟ್ವಾಳ: ಬಂಟ್ವಾಳ ಬಂಟರ ಸಂಘದ ವತಿಯಿಂದ ಇಲ್ಲಿನ‌ ಬಂಟರ ಭವನದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ 40 ಲಕ್ಷ ರೂ. ವಿದ್ಯಾರ್ಥಿವೇತನ, ಪ್ರಾಕೃತಿಕ ವಿಕೋಪದ ಸಂತ್ರಸ್ತರ ನೆರವಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೆ 2,00,000 ರೂ. ಗಳ ಚೆಕ್ ಹಸ್ತಾಂತರ ಮತ್ತು ನೂತನ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು, […]

ವ್ಯಾಪಾರಾಭಿವೃದ್ಧಿಗಾಗಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಸಹಾಯಧನ‌ ವಿತರಣೆ

ಮಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದ.ಕ 2018-19ನೇ ಸಾಲಿನಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶ್ರಮಶಕ್ತಿ ಮತ್ತು ಸ್ವಯಂ ಉದ್ಯೋಗ ಯೋಜನೆಗಳಲ್ಲಿ ವಿವಿಧ ಚಟುವಟಿಕೆ, ವ್ಯಾಪಾರಾಭಿವೃದ್ಧಿಗಾಗಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಸಹಾಯಧನ ಮೊತ್ತ ಬಿಡುಗಡೆಯಾಗಿದ್ದು, ಇದರ ಚೆಕ್ ಗಳನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು ಮಂಗಳವಾರ ವಿತರಿಸಿದರು. ಶ್ರಮಶಕ್ತಿ ಯೋಜನೆಯಲ್ಲಿ 78 ಮತ್ತು ಸ್ವಯಂ ಉದ್ಯೋಗ ಯೋಜನೆಯಲ್ಲಿ 10 ಫಲಾನುಭವಿಗಳಿದ್ದು, ಒಟ್ಟು 88 ಜನ […]