ಕಾರ್ಮಿಕರ ಸ್ಮಾರ್ಟ್‍ಕಾರ್ಡ್ ವಿತರಣೆ ಕುರಿತು ತನಿಖೆ: ದಿನಕರ ಬಾಬು
ಉಡುಪಿ: ಕಾರ್ಮಿಕರಿಗೆ ನೀಡುವ ಸ್ಮಾರ್ಟ್‍ಕಾರ್ಡ್ ನೊಂದಣಿ ಮಾಡಲು ನಿಯೋಜಿಸಿರುವ ಸಂಸ್ಥೆಯು, ಕಾರ್ಮಿಕರಿಂದ ತಲಾ 75 ರೂ ಪಡೆದಿದ್ದು, ಒಂದು ವರ್ಷ ಆದರೂ ಕಾರ್ಡ್ ವಿತರಣೆ ಆಗದಿರುವ ಕುರಿತು ಸೂಕ್ತ ತನಿಖೆ ನಡೆಸಿ ಕಾರ್ಮಿಕರಿಗೆ ಕಾರ್ಡ್ ವಿತರಿಸುವ ವ್ಯವಸ್ಥೆ ಆಗಬೇಕು ಹಾಗೂ ಹಣ ದುರುಪಯೋಗ ಆಗಿದ್ದಲ್ಲಿ ನೌಕರರ ಹಣ ವಾಪಾಸು ನೀಡುವ ವ್ಯವಸ್ಥೆ ಆಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ತಿಳಿಸಿದರು. ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕಟಪಾಡಿ […]
ಸಕಾಲ ಅರ್ಜಿ ವಿಲೇವಾರಿ ವಿಳಂಬವಾದಲ್ಲಿ ಕ್ರಮ: ಜಿಲ್ಲಾಧಿಕಾರಿ
ಉಡುಪಿ: ರಾಜ್ಯದಲ್ಲೇ ಮಾದರಿ ಜಿಲ್ಲೆ ಎನಿಸಿಕೊಂಡಿರುವ ಉಡುಪಿ ಜಿಲ್ಲೆಯಲ್ಲಿ ಸಕಾಲ ವಿಲೇವಾರಿಯಲ್ಲಿ ವಿಳಂಬ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸಕಾಲ ಅರ್ಜಿ ವಿಲೇವಾರಿಯಲ್ಲಿ ವಿಳಂಬ ತೋರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಅವರು ಬುಧವಾರ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳೊಂದಿಗೆ ಸಕಾಲ ಪ್ರಗತಿ ಪರಿಶೀಲನಾ ಸಭೆ ಮತ್ತು ಆನ್‍ಲೈನ್‍ನಲ್ಲಿ ಸಕಾಲ ಸ್ವಯಂಚಾಲಿತ ಕಾರಣ ಕೇಳುವ ಪ್ರಕ್ರಿಯೆಯ ತರಬೇತಿ ನೀಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಕಾಲ […]
ಕುಂದಾಪುರ: ತಾಲೂಕು ಪಂಚಾಯತ್ ಸಾಮಾನ್ಯ ಸಭೆಗೆ ಬಾರದ ತಹಸೀಲ್ದಾರ್ ವಿರುದ್ದ ಸಿಡಿದೆದ್ದ ಸದಸ್ಯರು
ಕುಂದಾಪುರ: ಪ್ರತೀ ತಾಲೂಕು ಪಂಚಾಯತ್ ಸಭೆಗೂ ತಹಸೀಲ್ದಾರ್ ಗೈರಾಗುತ್ತಿದ್ದಾರೆ. ಈ ದಿನವೂ ಅವರು ಸಭೆಗೆ ಬಂದಿಲ್ಲ. ನಿರಂತರವಾಗಿ ಗೈರಾಗುತ್ತಿದ್ದರೆ ನಮ್ಮ ಪ್ರಶ್ನೆಗಳಿಗೆ ಯಾರ ಬಳಿ ಉತ್ತರ ಪಡೆದುಕೊಳ್ಳುವುದು? ನಿರಂತರವಾಗಿ ಸಭೆಗೆ ಗೈರಾಗುತ್ತಿರುವ ತಹಸೀಲ್ದಾರರ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ತಾಲೂಕು ಪಂಚಾಯತ್ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ ಘಟನೆ ಗುರುವಾರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಬುಧವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯ ಆರಂಭಕ್ಕೂ ಮುನ್ನವೇ ತಹಸೀಲ್ದಾರ್ ಸಭೆಗೆ ಗೈರಾಗುತ್ತಿರುವ ಬಗ್ಗೆ […]
ಆನೆಕೆರೆ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ: ವಿವಿಧ ಸ್ಪರ್ಧೆ ಉದ್ಘಾಟನೆ
ಕಾರ್ಕಳ: ಆನೆಕೆರೆ ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿಯ ಆಶ್ರಯದಲ್ಲಿ ಭಕ್ತಿಗೀತೆ ಹಾಗೂ ಚಿತ್ರ ಬಿಡಿಸುವ ಸ್ಫರ್ದೆ ಆ-25ರಂದು ಆನೆಕೆರೆ ಶ್ರೀ ರಾಮಪ್ಪ ಶಾಲೆಯಲ್ಲಿ ನಡೆಯಿತು. ಹಿರಿಯ ಕಲಾವಿದ, ಹಿನ್ನಲೆ ಗಾಯಕ ಕೆ. ಪಿ. ಶಾಂಭವ ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಚಂದ್ರಶೇಖರ ಶೆಟ್ಟಿ, ಗಣೇಶ್ ದೇವಾಡಿಗ, ಸತ್ಯೇಂದ್ರ ಕಾಮತ್, ಸತೀಶ್ ಸುವರ್ಣ, ಶಿಕ್ಷಕ ಸುಧಾಕರ್ ಶುಭ ಹಾರೈಸಿದರು. ಸಮಿತಿಯ ಅಧ್ಯಕ್ಷರಾದ ಗೋವಿಂದರಾಯ ಪೈ ಸ್ವಾಗತಿಸಿದರು, ಸಾಂಸ್ಕøತಿಕ ಕಾರ್ಯದರ್ಶಿ ವರದರಾಯ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಘವೇಂದ್ರ […]
ನಮ ಬಿರುವೆರ್ ಹಿರಿಯಡಕ: “ತುಳುನಾಡ ಲೇಸ್” ಕಾರ್ಯಕ್ರಮ
ಹಿರಿಯಡಕ: ನಮ ಬಿರುವೆರ್ ಹಿರಿಯಡಕ ಇದರ ವತಿಯಿಂದ “ತುಳುನಾಡ ಲೇಸ್” ಕಾರ್ಯಕ್ರಮ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಅಂಜಾರು, ಹಿರಿಯಡಕ ಇಲ್ಲಿ ಅ. 25 ರಂದು ನಡೆಯಿತು. ತುಳುನಾಡ ಲೇಸ್” ಕಾರ್ಯಕ್ರಮನ್ನು ಗರಡಿ ಅರ್ಚಕರಾದ ಸುಂದರ ಪೂಜಾರಿ ಉದ್ಘಾಟಿಸಿ ಸಮಾಜದ ಯುವಕರೆಲ್ಲ ಸೇರಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಪ್ರವೀಣ್ ಎಮ್ ಪೂಜಾರಿ ಮಾತನಾಡಿ, ಸಮಾಜದ ಮತ್ತು ಇತರ ಬಡ ವರ್ಗದ […]