ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ಧ್ವಜ ಮರ ಮೆರವಣಿಗೆಯ ಅಬ್ಬರ: ಪುಳಕದಲ್ಲಿ ಮಿಂದೆದ್ದ ಭಕ್ತ ಸಾಗರ

-ಶ್ರೀಕಾಂತ ಹೆಮ್ಮಾಡಿ ಕುಂದಾಪುರ: ಕುಂದಾಪುರ ತಾಲೂಕಿನ ಕೋಟೆಶ್ವರ ಆಸುಪಾಸಿನ ಗ್ರಾಮಗಳಲ್ಲಿ ಸಂಭ್ರಮದ ವಾತಾವರಣ. ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಭಕ್ತವೃಂದ. ಪಂಚ ವಾದ್ಯಗಳ ಜಯಘೋಷ. ತಟ್ಟಿರಾಯಗಳ ಕುಣಿತ…ಈ ಪುರಮೆರವಣಿಗೆಯಲ್ಲಿ ಸಾಗಿಬಂದಿದ್ದು ಧ್ವಜಮರ. ಐತಿಹಾಸಿಕ ಕ್ಷಣವೊಂದಕ್ಕೆ ಈ ಕೋಟಿಲಿಂಗೇಶ್ವರನ ಸನ್ನಿಧಿ ಸಾಕ್ಷಿಯಾಯಿತು. ಒಂದು ಸಾವಿರದ ಇನ್ನೂರು ವರ್ಷಗಳ ಇತಿಹಾಸ ಇರುವ ಧ್ವಜಪುರ ಖ್ಯಾತಿಯ ಕುಂದಾಪುರ ತಾಲೂಕಿನ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರನ ಮಹಿಮೆ ಅಪಾರ. ರಾಜ್ಯದ ಅತಿ ದೊಡ್ಡ ಜಾತ್ರೆಯ ಪೈಕಿ ಈ ಕ್ಷೇತ್ರದಲ್ಲಿ ನಡೆಯುವ ಕೊಡಿ ಹಬ್ಬಕ್ಕೆ ವಿಶಿಷ್ಟ ಮಹತ್ವವಿದೆ. […]

ಮಂಗಳೂರು: 350ಕ್ಕೂ ಅಧಿಕ ರೌಡಿಗಳಿಗೆ ಪೊಲೀಸ್ ಪೆರೇಡ್

ಮಂಗಳೂರು: ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ 350ಕ್ಕೂ ಹೆಚ್ಚು ರೌಡಿಗಳನ್ನು ಮಂಗಳೂರು ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಪರೇಡ್ ನಡೆಸಿ ಎಚ್ಚರಿಕೆ ನೀಡಲಾಯಿತು. ಅಪರಾಧ ಕೃತ್ಯಗಳಲ್ಲಿ ತೊಡಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುವುದನ್ನು ಬಿಟ್ಟು ಸಾಮಾನ್ಯ ನಾಗರಿಕರಂತೆ ಬದುಕಬೇಕು. ಈಗಾಗಲೇ ತೊಡಗಿಸಿಕೊಂಡಿರುವವರು ಅದನ್ನು ಬಿಟ್ಟು ಗೌರವಯುತ ವೃತ್ತಿಗಳಲ್ಲಿ ಮುಂದುವರಿಯಬೇಕು. ಪ್ರತಿಯೊಬ್ಬರ ಚಲನವಲನಗಳನ್ನು ಪೊಲೀಸ್ ಇಲಾಖೆ ಗಮನಿಸುತ್ತಿರುತ್ತದೆ. ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಗೂಂಡಾ ಕಾಯಿದೆಯಂತಹ ಕಠಿಣ ಕಾನೂನು ಜಾರಿಗೊಳಿಸುತ್ತೇವೆ ಎಂದು ಮಂಗಳೂರು ಪೊಲೀಸ್ ಅಯುಕ್ತರು ಎಚ್ಚರಿಕೆ ನೀಡಿದರು.

ಬೆಳ್ತಂಗಡಿಯ‌ ವಿಜ್ಞಾನಿ ಅಮೇರಿಕಾದಲ್ಲಿ ಪರ್ವತಾರೋಹಣದ ವೇಳೆ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ವಿಜ್ಞಾನಿ ಅಮೇರಿಕಾದಲ್ಲಿ ಪರ್ವತಾರೋಹಣ ವೇಳೆ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಪಂಡಿಜೆ ಮೂಲದ ಪ್ರಸ್ತುತ ಅಮೆರಿಕಾದಲ್ಲಿ ವಾಸ್ತವ್ಯವಿದ್ದ ಚೈತನ್ಯ ಸಾಠೆ ಮೃತ ದುರ್ದೈವಿ. ಇವರು ಆಗಸ್ಟ್ 24ರಂದು ಅಮೆರಿಕಾದ ಮೌಂಟ್ ಹುಡ್ ಲೋವರ್ ಜಾರ್ಜ್‍ನ ಟೆರ್ರಾಬಾನ್ ವ್ಯಾಪ್ತಿಯ ಸ್ಮಿತ್ ರಾಕ್ ಸ್ಟೇಟ್ ಪಾರ್ಕ್ ಎಂಬಲ್ಲಿ 100 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇವರು ಪೋರ್ಟ್‍ಲ್ಯಾಂಡ್ ಮೂಲದ ಮಾಝಾಮಾಸ್ ಎಂಬ ಪರ್ವತಾರೋಹಿ ಸಂಘಟನೆಯಲ್ಲಿದ್ದರು. ‌ಜತೆಗೆ ಅನೇಕ […]

ಶ್ರೀ ಭುವನೇಂದ್ರ ಕಾಲೇಜು: ಯೂತ್ ರೆಡ್ ಕ್ರಾಸ್ ಉದ್ಘಾಟನಾ ಕಾರ್ಯಕ್ರಮ

ಕಾಕ೯ಳ: ದೃಢ ಸಂಕಲ್ಪ ಮತ್ತು ಸೇವಾ ಮನೋಭಾವಯನ್ನು ಯೂತ್ ರೆಡ್ ಕ್ರಾಸ್ ಘಟಕ ವಿದ್ಯಾರ್ಥಿಗಳಿಗೆ ಕಲಿಸುತ್ತದೆ. ಪ್ರತಿಯೊಬ್ಬರೂ ಯಾವುದೇ ಕಷ್ಟದ ಸಂದಭ೯ದಲ್ಲಿಯೂ ಸೇವೆಯನ್ನು ನಿವ೯ಹಿಸುವ ಛಲವನ್ನು ಹೊಂದಿರಬೇಕು. ಯಾರಾದರೂ ತೊಂದರೆಗೆ ಸಿಲುಕಿದ್ದಲ್ಲಿ, ಅಪಘಾತಕ್ಕೊಳಗಾದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡುವ ರೀತಿ ತಿಳಿದಿರಬೇಕು ಎಂದು ಪ್ರಸಿದ್ದ ಆಯುವೇ೯ದ ತಜ್ಞರಾದ ಡಾ. ನಂದಾ ಜಿ ಪೈ ಹೇಳಿದರು . ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪ್ರಸ್ತುತ ವಷ೯ದ ಯೂತ್ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಯೂತ್ ರೆಡ್ ಕ್ರಾಸ್ […]

ಶ್ರೀ ಕೃಷ್ಣ ಮಠ:1500 ಗೋವುಗಳಿಗೆ ದೇಣಿಗೆ ಸಂಗ್ರಹ

ಉಡುಪಿ:  ಶ್ರೀ ಕೃಷ್ಣ  ಮಠದ ರಥಬೀದಿಯಲ್ಲಿ ನಡೆದ  ವಿಟ್ಲಪಿಂಡಿ ಉತ್ಸವದಂದು ಪೇಜಾವರ ಮಠಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರಯುವ ನೀಲಾವರ ಗೋಶಾಲೆಯ ಸುಮಾರು 1500 ಗೋವುಗಳಿಗೆ  ಜಿಲ್ಲಾ ಯುವಬ್ರಾಹ್ಮಣ ಪರಿಷತ್ತಿನ ಸದಸ್ಯರು ಹಾಗೂ ಭಕ್ತಾಧಿಗಳಿಂದ ದೇಣಿಗೆ ಸಂಗ್ರಹವನ್ನು 10 ವರ್ಷಗಳಿಂದ ಮಾಡುತ್ತಿದ್ದು, ಈ ವರ್ಷ ಪರ್ಯಾಯ  ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ದೇಣಿಗೆ ಹಾಕುವ  ಮೂಲಕ ಚಾಲನೆ ನೀಡಿದರು. ಪರಿಷತ್ತಿನ ಅಧ್ಯಕ್ಶರಾದ […]