ಜೋಳಕ್ಕೂ ಬಣ್ಣ ಹಚ್ಚಿದವರು: ಪ್ರತಾಪ್ ಶೆಟ್ಟಿ ಕ್ಲಿಕ್ಕಿಸಿದ ಚಿತ್ರ
ಪ್ರತಾಪ್ ಶೆಟ್ಟಿ ಬೈಲೂರು, ಕಾರ್ಕಳ ಬೈಲೂರಿನ ನೀರೆ ಗ್ರಾಮದವರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕ ಇಲ್ಲಿ ಕಾಲೇಜು ಶಿಕ್ಷಣ ಪೂರೈಸಿದ ಇವರಿಗೆ ನೃತ್ಯ, ನಟನೆ, ಸಂಗೀತ ಅಂದರೆ ಆಸಕ್ತಿ. ಶಾರ್ಟ್ ಮೂವಿಯಲ್ಲಿಯೂ ಅಭಿನಯಿಸಿದ್ದಾರೆ. ಸಮಯಸಿಕ್ಕಾಗ ಕ್ಯಾಮರಾ ಹಿಡಿದು ಫೋಟೋ ಕ್ಲಿಕ್ಕಿಸುತ್ತಾರೆ. ಇವರ ಚಿತ್ರಗಳಲ್ಲಿ ಉಡುಪಿಯ ಸಂಸ್ಕೃತಿ, ಜನ ಜೀವನ, ಸಾಂಪ್ರಾದಾಯಿಕ ಹುಲಿವೇಷಗಳೆಲ್ಲಾ ವಿಶೇಷವಾಗಿ ಕ್ಲಿಕ್ಕಾಗಿವೆ.
ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಾನವಿಕ ಸಂಘ ಉದ್ಘಾಟನೆ
ಕಾರ್ಕಳ : ಮನುಷ್ಯನಾದವನಿಗೆ ಅವನದ್ದೇ ಆದ ಯೋಗ್ಯತೆಗಳಿವೆ, ಅವನಿಗೆ ಅವನದ್ದೇ ಶೈಲಿಯ ಜೀವನ ಪಾಠಗಳಿವೆ. ಸಮಾಜದಲ್ಲಿನ ರೂಪುರೇಷೆಯಲ್ಲೇ ಎಲ್ಲರನ್ನು ಅನುರಿಸಿ ಅವನು ಬೆಳೆದಿರುತ್ತಾನೆ. ಮಾನವ ಸಂಘ ಜೀವಿ ಹಾಗಾಗಿ ಸಹಬಾಳ್ವೆಯ ಜೀವನ ಅವನಿಗೆ ತಿಳಿದಿರಬೇಕು ಆಗ ಮಾತ್ರ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬಾಳಲು ಸಾಧ್ಯ. ಜೀವನ ಪಾಠವನ್ನು ಶಿಕ್ಷಣ ಕಲಿಸುವುದಿಲ್ಲ ನಮ್ಮ ಸುತ್ತಲಿನವರು ಕಲಿಸುತ್ತಾರೆ ಎಂದು ಕಾರ್ಕಳದ ಎಸ್.ವಿ.ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮ್ದಾಸ್ ಪ್ರಭು ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪ್ರಸ್ತುತ […]
ಉಡುಪಿ: ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ವಾರದೊಳೆಗೆ ಕ್ರಮಕೈಗೊಳ್ಳುವ ಭರವಸೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರು ಈ ಬಗ್ಗೆ ಒಂದು ವಾರದೊಳಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್ ಹೇಳಿದರು. ಉಡುಪಿ ತಾ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಅವರು ತಿಳಿಸಿದರು. ಸದಸ್ಯೆ ನಳಿನಿ ಪ್ರದೀಪ್ ರಾವ್ ವಿಷಯ ಪ್ರಸ್ತಾಪಿಸಿ, ರಾಷ್ಟ್ರೀಯ ಹೆದ್ದಾರಿಯ ಸಂತಕಟ್ಟೆಯಿಂದ ಕಲ್ಯಾಣಪುರ ಸೇತುವೆ ವರೆಗಿನ ಭಾಗದಲ್ಲಿ ಅಲ್ಲಲ್ಲಿ ಗುಂಡಿ ಬಿದ್ದು ರಸ್ತೆ ಹಾಳಾಗಿದೆ. ಮಲ್ಲಿಕಾರ್ಜುನ ದೇವಸ್ಥಾನದ ಸಮೀಪ […]
ನೆರೆ ಹಿನ್ನೆಲೆ: ಆಳ್ವಾಸ್ ನುಡಿಸಿರಿ-ವಿರಾಸತ್ ಮುಂದೂಡಿಕೆ
ಮೂಡುಬಿದಿರೆ: ಆಳ್ವಾಸ್ ಶಿಕ್ಣಣ ಪ್ರತಿಷ್ಠಾನದ ವತಿಯಿಂದ ನವೆಂಬರ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ ಆಳ್ವಾಸ್ ನುಡಿಸಿರಿ ಮತ್ತು ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ವಿರಾಸತನ್ನು ರಾಜ್ಯವು ನೆರೆ ಹಾವಳಿಯಿಂದ ತತ್ತರಿಸಿ ಸಂಕಷ್ಟಕ್ಕೆ ಒಳಗಾಗಿರುವುದರಿಂದ ಮುಂದೂಡಲಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಕಾರ್ಯಕ್ರಮದ ರೂವಾರಿ ಡಾ.ಎಂ.ಮೋಹನ ಆಳ್ವ ಬುಧವಾರ ತಿಳಿಸಿದ್ದಾರೆ. ಪ್ರತಿ ವರ್ಷದಂತೆ ಈ ಭಾರಿಯೂ ನುಡಿಸಿರಿ ನಡೆಸಲು ದಿನಾಂಕ ನಿಗದಿ ಪಡಿಸಲಾಗಿತ್ತು. ಜತೆಗೆ ಈ ವರ್ಷ ಆಳ್ವಾಸ್ ವಿರಾಸತ್ ಅನ್ನು ಜಂಟೀಯಾಗಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ನೆರೆ ಸಮಸ್ಯೆ ಹಿನ್ನೆಲೆಯಲ್ಲಿ […]
ಪಡೀಲ್ ರೈಲು ಹಳಿಯ ಮೇಲೆ ಗುಡ್ಡ ಕುಸಿತ; ತೆರವು ಕಾರ್ಯಾಚರಣೆ
ಮಂಗಳೂರು: ಇತ್ತೀಚಿನ ದಿನಗಳಲ್ಲಿ ನಿರಂತರ ಸುರಿದ ಮಳೆ ಹಿನ್ನೆಲೆಯಲ್ಲಿ ಪಡೀಲ್ ರೈಲು ಹಳಿಯ ಮೇಲೆ ಗುಡ್ಡ ಕುಸಿತಗೊಂಡು ಸಮಸ್ಯೆ ಎದುರಾಗಿತ್ತು. ಆದರೆ ಅದರ ತೆರವು ಕಾರ್ಯಾಚರಣೆ ನಡೆಯುತ್ತಿದ್ದ ನಡುವೆಯೇ ಮತ್ತೆ ಬುಧವಾರ ಗುಡ್ಡ ಕುಸಿದಿದ್ದು ಕಾರ್ಯಾಚರಣೆಗೆ ತೊಂದರೆಯಾಗಿದೆ. ಈ ಟ್ರಾಕ್ ನಲ್ಲಿ ಆ. 23ರಿಂದಲೇ ಸಂಚಾರ ನಿರ್ಬಂದಿಸಲಾಗಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ಪಕ್ಕದಲ್ಲೇ 400 ಮೀಟರ್ ಉದ್ದದ ಹೆಚ್ಚುವರಿ ಟ್ರಾಕ್ ನಿರ್ಮಿಸುವ ಯೋಜನೆಯನ್ನೂ ಕೈಗೊಳ್ಳಲಾಗಿದೆ.