ಶಿರಿಯಾರ: ಡಾ| ಸುರೇಂದ್ರ ಶೆಟ್ಟರಿಗೆ  ಸಮ್ಮಾನ

ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಶಿರಿಯಾರದಲ್ಲಿ 45 ವರ್ಷಕ್ಕೂ ಹೆಚ್ಚು ಕಾಲ ಜನಪರ ವೈದ್ಯರಾಗಿ ಸೇವೆ ಸಲ್ಲಿಸಿದ ಇಲ್ಲಿನ ಭಾಗೀರಥಿ ಕ್ಲಿನಿಕ್ ಡಾ| ಸುರೇಂದ್ರ ಶೆಟ್ಟರಿಗೆ ಕಲ್ಮರ್ಗಿಯ ಶ್ರೀರಾಮ ಮಂದಿರದ ರಾಮಾಂಜನೇಯ ಸಭಾಮಂದಿರದಲ್ಲಿ ಆ.18 ರಂದು ಅಪರಾಹ್ನ 3 ಗಂಟೆಗೆ ಸಾರ್ವಜನಿಕ ಸನ್ಮಾನ ನಡೆಯಲಿದೆ ಎ0ದು ಪ್ರಕಟಣೆ ತಿಳಿಸಿದೆ.

‘ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100’ ಬಿಡುಗಡೆ: ಈ ಹೊಸ ಬೈಕ್ ಕುರಿತ ವಿವರ ಇಲ್ಲಿದೆ.

ನವದೆಹಲಿ:  ಟಿವಿಎಸ್ ಮೋಟಾರ್  ದೇಶದ ಮೊದಲ ಎಥನಾಲ್ ಆಧಾರಿತ  ‘ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100’  ಮೋಟಾರ್ ಸೈಕಲ್ ಅನ್ನು ಬಿಡುಗಡೆಗೊಳಿಸಿದ್ದು ಇದು ಗ್ರಾಹಕರನ್ನು ಸೆಳೆಯುವಂತಿದೆ. ಟಿವಿಎಸ್ ಮೋಟಾರ್ ಕಂಪನಿ 2018ರಲ್ಲಿ ದೆಹಲಿಯಲ್ಲಿ ನಡೆದ ಆಟೋಮೊಬೈಲ್ ಎಕ್ಸ್ಪೋದಲ್ಲಿ ಮೊದಲ ಟಿವಿಎಸ್ ಅಪಾಚಿ 200 4ವಿ ಎಥನಾಲ್ ವಾಹನವನ್ನು ಪ್ರದರ್ಶಿಸಿತ್ತು. ಟಿವಿಎಸ್ ಅಪಾಚಿ, ಟಿವಿಎಸ್; ಮೋಟಾರ್ ಕಂಪನಿಯ ಭಾಗವಾಗಿದ್ದು, ದೇಶಾದ್ಯಂತ 3.5 ದಶಲಕ್ಷ ಗ್ರಾಹಕರನ್ನು ಒಳಗೊಂಡಿದೆ. ಟಿವಿಎಸ್ ಮೋಟಾರ್ ಕಂಪನಿ, ಗ್ರಾಹಕರಿಗೆ ಎಥನಾಲ್ ಆಧಾರಿತ […]

ಕೆಆರ್‌ಎಸ್ ಜಲಾಶಯದ ಹೊರಹರಿವು ಹೆಚ್ಚಳ:ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ನಿಷೇಧ

ಮಂಡ್ಯ: ಕೆಆರ್‌ಎಸ್ ಜಲಾಶಯದ ಹೊರಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನಪ್ರಿಯ ಪ್ರವಾಸೋದ್ಯಮ ತಾಣ ರಂಗನತಿಟ್ಟು ಪಕ್ಷಿಧಾಮದಲ್ಲಿ ಶನಿವಾರದಿಂದ ಬೋಟಿಂಗ್  ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಇಲ್ಲಿನ ಕಾವೇರಿ ನದಿ ಹರಿವು ಏರಿಕೆಯಾಗಿದ್ದು, ರಂಗನತಿಟ್ಟುಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆಯ ಹಿನ್ನೆಲೆಯಲ್ಲಿ ಬೋಟಿಂಗ್ ಅನ್ನು ನಿಷೇದಿಸಲಾಗಿದೆ. ಆದರೆ ಅಭಯಾರಣ್ಯಕ್ಕೆ ಭೇಟಿ ನೀಡುವವರಿಗೆ ಯಾವುದೇ ನಿರ್ಬಂಧಗಳಿಲ್ಲವಾದರೂ  ನದಿ ಜಾಗದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.  ಪ್ರವಾಸಿಗರ ಪೈಕಿ ಶೇ. ೮೦ಕ್ಕೆ ಹೆಚ್ಚು ಮಂದಿ ದೋಣಿ ವಿಹಾರ ಮಾಡುತ್ತಾರೆಯಾದ್ದರಿಂದ ಅವರ ಸುರಕ್ಷತೆಯ ದೃಷ್ಟಿಯಿಂದ  ಈ ಕ್ರಮ ಕೈಗೊಳ್ಳಲಾಗಿದೆ.

ಉಡುಪಿ ಆಚಾರ್ಯ ಏಸ್ ನಲ್ಲಿ ಅ.18ರಂದು ಉಚಿತ ಮಾದರಿ ಸಂದರ್ಶನ

ಉಡುಪಿ: ಆಚಾರ್ಯಾಸ್‌ ಏಸ್‌ ವತಿಯಿಂದ ಒಂಬತ್ತನೇ ತರಗತಿ, ಎಸೆಸೆಲ್ಸಿ, ಪಿ.ಯು.ಸಿ., ಸಿ.ಇ.ಟಿ., ನೀಟ್, ಜೆ.ಇ.ಇ. ಮೇನ್ಸ್‌, ಕಾಮರ್ಸ್‌ ಹಾಗೂ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿಯನ್ನು ಆ. 18ರಂದು ಮಧ್ಯಾಹ್ನ 1.30ರಿಂದ ಸಂಜೆ 5ರವರೆಗೆ ಉಡುಪಿಯ ಏಸ್‌ ಕಚೇರಿಯಲ್ಲಿ ಆಯೋಜಿಸಲಾಗಿದೆ. ಬ್ಯಾಂಕಿಂಗ್‌, ಐಟಿ, ರೈಲ್ವೇ, ಇನ್ಶೂರೆನ್ಸ್‌ ಹಾಗೂ ಇನ್ನಿತರ ಖಾಸಗಿ ಹಾಗೂ ರಾಷ್ಟ್ರೀಯ ಸಂಸ್ಥೆಗಳು ಆಯೋಜಿಸುವ ಸಂದರ್ಶನದಲ್ಲಿ ವಿದ್ಯಾರ್ಥಿಗಳು ಯಶಸ್ಸು ಗಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 1.30ರಿಂದ ಸಂಜೆ 5ರ ವರೆಗೆ ಸಂದರ್ಶನ ನಡೆಯಲಿದ್ದು, […]