ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರ ವಹಿಸಿ: ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಮಳೆಗಾಲ ಈಗಾಗಲೇ ಭಾಗಶಃ ಚುರುಕುಗೊಂಡಿರುವುದರಿಂದ ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ ಮತ್ತು ಮೆದುಳು ಜ್ವರ ಹರಡುವ ಸಾಧ್ಯತೆ ಹೆಚ್ಚಾಗಿದ್ದು, ಜನರು ಜಾಗೃತರಾಗಿರಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದ 7 ವರ್ಷಗಳಿಂದ ಮಲೇರಿಯಾ ಪ್ರಕರಣಗಳಲ್ಲಿ ತೀವ್ರ ಇಳಿಕೆ ದಾಖಲಾಗಿದ್ದು, 2012 ರಲ್ಲಿ 2000 ಕ್ಕೂ ಮಿಕ್ಕಿ ಇದ್ದ ಮಲೇರಿಯಾ ಪ್ರಕರಣಗಳು 2018 ರ ಡಿಸೆಂಬರ್ ವೇಳೆಗೆ 221 ಪ್ರಕರಣಗಳೊಂದಿಗೆ 10 ಪಟ್ಟು ಇಳಿಕೆ ದಾಖಲಾಗಿರುತ್ತದೆ. 2018 […]

ರಾಜ್ಯದ ನೆರೆ ಸಂತ್ರಸ್ತರಿಗೆ ಧರ್ಮಸ್ಥಳದಿಂದ 25 ಕೋ.ರೂ. ಆರ್ಥಿಕ ನೆರವು

ಉಡುಪಿ: ರಾಜ್ಯದ ನೆರೆ ಸಂತ್ರಸ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಕೋ.ರೂ. ನೀಡಲಾಗುವುದು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಘೋಷಣೆ ಮಾಡಿದ್ದಾರೆ. ಇದೇ ಸಂದರ್ಭ ಬೆಳ್ತಂಗಡಿಯ ನೆರೆ ಸಂತ್ರಸ್ತರಿಗೆ 50 ಲಕ್ಷ ರೂ. ಚೆಕ್ ಅನ್ನು ಶಾಸಕ ಹರೀಶ್ ಪೂಂಜಾ ಅವರ ಮೂಲಕ ಹಸ್ತಾಂತರ ಮಾಡಿದರು.

ಆ. 22: ಡಾ. ಮುದ್ದುಮೋಹನ್ ಅವರಿಂದ ಹಿಂದೂಸ್ತಾನಿ ಸಂಗೀತ

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಪರ್ಯಾಯ ಶ್ರೀ ಫಲಿಮಾರು ಮಠ, ಶ್ರೀ ಕೃಷ್ಣ ಮಠ ಉಡುಪಿ ಇವರ ಸಹಯೋಗದಲ್ಲಿ, ಆಗಸ್ಟ್ 22 ರಂದು ರಾತ್ರಿ 7 ಗಂಟೆಗೆ, ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ,  ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ. ಮುದ್ದುಮೋಹನ್ ಅವರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಡಾ. ಮುದ್ದುಮೋಹನ್ ಅವರು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾಗಿ, ವಾರ್ತಾ ಇಲಾಖೆಯ ನಿರ್ದೇಶಕರಾಗಿ ಹಾಗೂ ಉಡುಪಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ […]

ಸಮುದ್ರದಲ್ಲಿ ರೆಡ್ ಅಲರ್ಟ್ ಘೋಷಣೆ: ಅನುಮಾನಸ್ಪದ ಬೋಟ್ ಕಂಡರೆ ಮಾಹಿತಿ ನೀಡಲು ಸೂಚನೆ

ಮಂಗಳೂರು: ಜಿಲ್ಲಾಡಳಿತದ ನಿರ್ದೇಶನ ಪ್ರಕಾರ ಮೀನುಗಾರಿಕಾ ಇಲಾಖೆ ಉಪನಿರ್ದೇಕ ತಿಪ್ಪೇಸ್ವಾಮಿ ಅವರಿಂದ ಮೀನುಗಾರ ಮುಖಂಡರ ಸಭೆ ನಡೆಸಿದ್ದು, ಸಮುದ್ರದಲ್ಲಿ ವಿದೇಶಿ ಬೋಟ್, ಅನುಮಾನಸ್ಪದ ಇತರ ಬೋಟ್ ಗಳು ಕಂಡುಬಂದರೆ ತಕ್ಷಣ ಪೋಲೀಸ್ ಕಂಟ್ರೋಲ್ ರೂಂ ಗೆ ಮಾಹಿತಿ ಒದಗಿಸಲು ಸೂಚನೆ ನೀಡಿದ್ದಾರೆ. ಅಲ್ಲದೇ ಮೀನುಗಾರಿಕೆ ಸಂದರ್ಭ ಬೋಟ್ ಗಳಲ್ಲಿ ಸಂಬಂಧಿಸಿದ ದಾಖಲೆ, ಆಧಾರ್ ಕಾರ್ಡ್ ಪ್ರತಿ ಇಟ್ಟುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ಮಂಗಳೂರು: ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕಾರ್ಯಾಚರಣೆ; 8 ಮಂದಿ ಬಂಧನ

ಮಂಗಳೂರು: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ವಿಶೇಷ ಕಾರ್ಯಚರಣೆ ನಡೆಸುತ್ತಿದ್ದ ವೇಳೆ ನಗರದ ಪಂಪ್‌ವೆಲ್ ಬಳಿ ಅನುಮಾನಾಸ್ಪ ವ್ಯಕ್ತಿಗಳು ಕಂಡು ಬಂದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸ್ಯಾಮ್ ಪೀಟರ್, ಟಿ.ಕೆ ಬೋಪಣ್ಣ, ಮದನ್, ಚಿನ್ನಪ್ಪ, ಸುನೀಲ್ ರಾಜು, ಕೋದಂಡರಾಮ,  ಜಿ.ಮೊಯದ್ದೀನ್, ಎಸ್ ಎ. ಕೆ ಲತೀಫ್ ಬಂಧಿತ ಆರೋಪಿಗಳು. ಈ ಸಂಬಂಧ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ. ಪಿ.ಎಸ್. ಹರ್ಷ ಸುದ್ದಿಗೋಷ್ಢಿ ನಡೆಸಿ ಮಾಹಿತಿ ನೀಡಿದ್ದು, ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಾವು […]