ಕುಂದಾಪುರ ಮಿನಿ ವಿಧಾನಸೌಧದ ಸ್ಥಿತಿ ಡೇಂಜರಪ್ಪೋ ಡೇಂಜರು: ಕಾಪಾಡೋರಾರು?

-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ ಇಲ್ಲಿ ನಿತ್ಯವೂ ಕುಗ್ರಾಮಗಳಿಂದ ಅರ್ಜಿ ಹಿಡಿದು ನೂರಾರು ಮಂದಿ ಬರುತ್ತಾರೆ. ಗರ್ಭಿಣಿಯರು, ಅಂಗವಿಕಲರು, ವಯೋವೃದ್ದರು ಸೇರಿದಂತೆ ಸ್ವಂತ ಸೂರಿನ ಕನಸು ಹೊತ್ತುಕೊಂಡವರು ದಾಖಲೆಗಳ ಫೈಲು ಹಿಡಿದುಕೊಂಡು ಈ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ಬಂದು ನಿಲ್ಲುತ್ತಾರೆ. ವಿಪರ್ಯಾಸವೆಂದರೆ ಸ್ವಂತ ಸೂರನ್ನು ಕಲ್ಪಿಸಿಕೊಡುವ ಕಚೇರಿಯಲ್ಲೇ ಅಭದ್ರತೆಯಿಂದಾಗಿ ಇಲ್ಲಿನ ಸಿಬ್ಬಂದಿಗಳು ಜೀವ ಕೈಯ್ಯಲ್ಲಿ ಹಿಡಿದೇ ದಿನ ದೂಡುತ್ತಿದ್ದಾರೆಂದರೆ ಆಶ್ಚರ್ಯವಾದೀತು! ಇದು ಯಾವುದೋ ಒಂದು ಗ್ರಾಮದ ಸರ್ಕಾರಿ ಕಟ್ಟಡದ ಅಲ್ಲ. ಕಳಪೆ ಕಾಮಗಾರಿಯಿಂದಾಗಿ ಆಗಾಗೆ ಸುದ್ದಿಯಲ್ಲಿರುವ ಕುಂದಾಪುರದ ಮಿನಿ […]

ಆ. 23: ಹುಲಿವೇಷದಾರಿ ಅಶೋಕ್ ರಾಜ್ ಬಳಗದಿಂದ ಹುಲಿವೇಷ ಸ್ಪರ್ಧೆ

ಉಡುಪಿ: ಉಡುಪಿಯ ಪ್ರಸಿದ್ದ ಜಾನಪದ ಹುಲಿವೇಷದಾರಿ ತಂಡ ಅಶೋಕ್‌ರಾಜ್‌ ಮತ್ತು ಬಳಗ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ. 23ರಂದು ಹುಲಿವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಶನಿವಾರ ಬಳಗದ ಅಧ್ಯಕ್ಷ ಅಶೋಕ್‌ರಾಜ್‌ ಕಾಡಬೆಟ್ಟು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಬ್ರಹ್ಮಗಿರಿ ಜಂಕ್ಷನ್‌ನಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಒಟ್ಟು 15 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಸಾವಿರಾರು ಮಂದಿಗೆ ಸ್ಪರ್ಧೆ ವೀಕ್ಷಣೆ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಬೃಹತ್‌ ಎಲ್‌ಇಡಿ […]

ಮುಂಬೈ ಉದ್ಯಮಿಯಿಂದ ಪ್ಲಾಶ್ಟಿಕ್ ಬಳಕೆ ಅಪಾಯದ ಕುರಿತು ಜಾಗೃತಿ: ಪರ್ಯಾಯ ಬಟ್ಟೆ ಚೀಲ‌ ತಯಾರಿಕಾ ಸಂಸ್ಥೆ ಸ್ಥಾಪನೆ

ಉಡುಪಿ: ಪ್ಲಾಸ್ಟಿಕ್‌ ಬಳಕೆಯ ಅಪಾಯದ ಕುರಿತು ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕುಂದಾಪುರದ ಮೂಲದ ಉದ್ಯಮಿಯೊಬ್ಬರು ಫ್ರೆಂಡ್ಸ್‌ ಸ್ವಾವಲಂಬನಾ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ಹಾನಿ ಹಾಗೂ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಟ್ಟೆಯ ಚೀಲಗಳನ್ನು ಉಪಯೋಗಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪ್ಲಾಸ್ಟಿಕ್‌ ಬಳಕೆಯ ಅಪಾಯವನ್ನು ಮನಗಂಡ ಕುಂದಾಪುರ ಮೂಲದ ವೆಂಕಟೇಶ್‌ ಪೈ ಅವರು, 2013ರಲ್ಲಿ ಮುಂಬೈ ಸಮೀಪದ ಡೊಂಬಿವಲಿಯಲ್ಲಿ ಬಟ್ಟೆ ಚೀಲ ತಯಾರಿಸುವ ಫ್ರೆಂಡ್ಸ್‌ […]

ಬ್ರಹ್ಮಾವರ:ಅರಣ್ಯ ಕೃಷಿ ತರಬೇತಿ ಕಾರ್ಯಕ್ರಮ

ಉಡುಪಿ: ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ಶುಕ್ರವಾರ ದಿ.ಕೆ.ಎಂ. ಉಡುಪ ಸ್ಮರಣಾರ್ಥವಾಗಿ ಅರಣ್ಯ ಕೃಷಿ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೊಡಗು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ರಾಮಕೃಷ್ಣ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಈಗಿನ ಯುವಕರು ಕೃಷಿ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ, ಅರಣ್ಯದಲ್ಲಿ ಕೃಷಿ ಮಾಡಬಹುದಾ ಅಥವಾ ಕೃಷಿ ಭೂಮಿಯಲ್ಲಿ ಅರಣ್ಯ ವೃಕ್ಷಗಳನ್ನು ಬೆಳೆಸಬಹುದಾ ಎನ್ನುವುದರ ಕುರಿತು ಚರ್ಚಿಸಿದರು ಮತ್ತು ಮನುಷ್ಯನ ಬೇಡಿಕೆಗಳು ದಿನೇ ದಿನೇ ಹೆಚ್ಚುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ ಎನ್ನುವುದರ ಕುರಿತು ಮನವಿ […]

ಸ್ವಯಂ ಉದ್ಯೋಗ ಮಾಡಲು ಸುವರ್ಣಾವಕಾಶ: ಪ್ರವಾಸಿ ಟ್ಯಾಕ್ಸಿ ಚಲಾಯಿಸಲು ಅರ್ಜಿ ಆಹ್ವಾನ

ಉಡುಪಿ: ಪ್ರವಾಸೋದ್ಯಮ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಲಘುವಾಹನ ಚಾಲನಾ ಪರವಾನಗಿ ಹಾಗೂ ಚಾಲಕರ ಬ್ಯಾಡ್ಜ್ ಹೊಂದಿರುವ 20 ರಿಂದ 40 ವರ್ಷ ವಯೋಮಿತಿಯೊಳಗಿರುವ ಅಭ್ಯರ್ಥಿಗಳಿಂದ ಎಸ್.ಎಸ್.ಎಲ್.ಸಿ. ಪಾಸ್ ಆಗಿರುವ ನಿರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರವಾಸಿ ವಾಹನಗಳನ್ನು ಖರೀದಿಸುವ ಸಲುವಾಗಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರವಾಸಿ ಟ್ಯಾಕ್ಸಿಗಳಿಗೆ ತಗಲುವ ಒಟ್ಟು ವೆಚ್ಚಕ್ಕೆ ಗರಿಷ್ಠ […]