ಶ್ರೀ ಕೃಷ್ಣ ಮಠದಲ್ಲಿ ಹೊಸ್ತಿಲು ಪೂಜೆ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಕರ್ಕಾಟಕ ಹುಣ್ಣಿಮೆ (ಆಟಿ ಹುಣ್ಣಿಮೆ) ಪ್ರಯುಕ್ತ ಮುತೈದೆ ನಾರಿಯರು ಹೊಸ್ತಿಲು ಪೂಜೆ ಮಾಡಿ ನಮಸ್ಕಾರ ಮಾಡಿದರು.
ರಿಕ್ಷಾ ಮಾಲಕರ ಮತ್ತು ಚಾಲಕರ ವತಿಯಿಂದ ಸ್ವಾತಂತ್ರ್ಯೋತ್ಸವ:
ಉಡುಪಿ: ರಥಬೀದಿಯ ರಿಕ್ಷಾ ಮಾಲಕರ ಮತ್ತು ಚಾಲಕರ ವತಿಯಿಂದ ನಡೆದ 73 ನೇ ಸ್ವಾತಂತ್ರ್ಯೋತ್ಸವದಲ್ಲಿ ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ದ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರಿಕ್ಷಾ ಮಾಲಕರ ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಮಣಿಪಾಲ: ಗಾಯಗೊಂಡ ಹೋರಿ ರಸ್ತೆಯಲ್ಲೇ ಒದ್ದಾಡುತ್ತಿದೆ! ನಗರಸಭೆ, ಪಶು ವೈದ್ಯಾಧಿಕಾರಿಗಳು ಇತ್ತ ಗಮನಹರಿಸಲಿ
ಮಣಿಪಾಲ: ಮಣಿಪಾಲದ ದಶರಥ ನಗರ ರಸ್ತೆ ಯ ಬಳಿ ಹೋರಿಯೊಂದು ದಯನೀಯ ಸ್ಥಿತಿಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದು ಸಾರ್ವಜನಿಕರ ನಿದ್ದೆಗೆಡಿಸಿದೆ.ಸರಿಸುಮಾರು ಹತ್ತು ವರ್ಷದ ಹೋರಿಗೆ ತನ್ನ ತಲೆಯ ಮೇಲಿನ ಕೊಂಬಿನ ಭಾಗದಲ್ಲಿ ಗಾಯಗೊಂಡ ಪರಿಣಾಮ ತೀವ್ರವಾಗಿ ರಕ್ತಸ್ರಾವವಾಗುತಿದೆ. ಗಾಯದ ಸಮೀಪ ಹುಳಗಳು ಕಾಣಿಸಿಕೊಂಡು ತೀವ್ರ ಸ್ವರೂಪ ಪಡೆದು ಉಲ್ಬಣಗೊಳ್ಳ ತ್ತಿದೆ. ಹೋರಿಯ ಪಾಡು ನೋಡಲಾಗದೇ ಸ್ಥಳಿಯರು ಚಿಕಿತ್ಸೆಗೆ ಪ್ರಯತ್ನ ಪಟ್ಟರು ಕೈಗೆ ಸಿಗದೆ ಓಡಾಡುತ್ತಿದೆ.ಇದರಿಂದ ಸ್ಥಳೀಯರು ಅಸಹಾಯಕರಾಗಿದ್ದಾರೆ. ಮಳೆಯ ಕಾರಣ ಗಾಯವು ಮತ್ತಷ್ಟು ಉಲ್ಬಣಗೊಳ್ಳಬಹುದೆಂಬ ಆತಂಕ ಸ್ಥಳೀಯರಲ್ಲಿ ಮನೆಮಾಡಿದೆ. […]
ಇವನೆಂದೂ ನಂಗೆ ರಕ್ಷಾಬಂಧನದ ಗಿಫ್ಟ್ ಕೊಟ್ಟಿಲ್ಲ ಯಾಕಂದ್ರೆ? : “ರಕ್ಷಾ” ಬಂಧನದ ದಿನ ರಕ್ಷಾ ಬರೆಯುತ್ತಾರೆ.
ಸಾಮಾನ್ಯವಾಗಿ ಈ ತಮ್ಮಂದಿರು ಅಕ್ಕನ ಮೇಲಿರೋ ಪ್ರೀತಿನ ವ್ಯಕ್ತಪಡಿಸೋದಿಲ್ಲ. ಆದರೆ ಅವರು ಅಕ್ಕಂದಿರ ಮೇಲೆ ಬೆಟ್ಟದಷ್ಟು ಪ್ರೀತಿ, ಕಾಳಜಿ ಇಟ್ಕೊಂಡಿರ್ತಾರೆ ಅನ್ನೋದು ಪ್ರತಿಯೊಬ್ಬ ಅಕ್ಕನಿಗೂ ತಿಳಿದಿರುವ ಸಂಗತಿ. ಅದೇ ರೀತಿ ಸೈಲೆಂಟಾಗೆ ಇದ್ದುಕೊಂಡು, ಸ್ಟ್ರಾಂಗ್ ಸಪೋರ್ಟ್ ನೀಡೋನು ನನ್ನ ತಮ್ಮ ಪಪ್ಪು. ಹೌದು ತಮ್ಮ ಆಗಿದ್ರೂ, ಅಣ್ಣನ ಸ್ಥಾನದಲ್ಲಿ ಇದ್ಕೊಂಡು ನನ್ನೆಲ್ಲಾ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರೋನು ಇವ್ನು. ನಾವಿಬ್ಬರೂ ಹುಟ್ಟಿದ ದಿನ ಒಂದೇ, ಆದರೆ ವರ್ಷ ಬೇರೆ ಬೇರೆ. ಈ ಸನ್ನಿವೇಶವೇ ನಮ್ಮ ನಡುವೆ ವಿಭಿನ್ನ ರೀತಿಯ […]