ವಿಶೇಷ ಉಪನ್ಯಾಸ ಮಾಲೆ ಕಾರ್ಯಾಗಾರ:ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶ
ಉಡುಪಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು 2007 ರಿಂದ ವಿವಿಧ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಪ್ರಸಕ್ತ ವರ್ಷ ಅಗಸ್ಟ್ 27 ರಿಂದ 29 ರವರೆಗೆ 3 ದಿನಗಳ ವಿಶೇಷ ಉಪನ್ಯಾಸ ಮಾಲೆ ಕಾರ್ಯಾಗಾರವನ್ನು ಇಸ್ರೋ ಸಂಸ್ಥೆಯ ಪ್ರಾದೇಶಿಕ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಲಾಗುತ್ತದೆ. ಈ ಕಾರ್ಯಾಗಾರದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು,ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸಗಳನ್ನು ನುರಿತ ತಜ್ಞರಿಂದ ಏರ್ಪಡಿಸಲಾಗಿದೆ. […]
ತೆಂಕನಿಡಿಯೂರು : ಮಾದಕ ದ್ರವ್ಯದ ದುಷ್ಪರಿಣಾಮಗಳು – ಉಪನ್ಯಾಸ

ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಆಪ್ತ ಸಮಾಲೋಚನೆ ಹಾಗೂ ಐಕ್ಯೂಎಸಿ ಘಟಕದ ವತಿಯಿಂದ ಇತ್ತೀಚೆಗೆ ಮಾದಕ ದ್ರವ್ಯದ ದುಷ್ಪರಿಣಾಮಗಳು ಎನ್ನುವ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ನೈಜ ಘಟನೆಗಳ ನಿದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮಗಳ ಸಂಪೂರ್ಣ ಮಾಹಿತಿಯನ್ನು ನೀಡಿದರು. ಕಾಲೇಜಿನ […]
ಪ್ರತಿಭಾ ಕಾರಂಜಿ: ಎಲ್ ಸಿ ಆರ್ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ

ಬಂಟ್ವಾಳ:ದ.ಕ.ಜಿ.ಪ.ಮಾ.ಹಿ.ಪ್ರಾ ಶಾಲೆ ಉಳಿ ಕಕ್ಯಪದವು ಇಲ್ಲಿ ಇತ್ತೀಚೆಗೆ ನಡೆದ ಮಧ್ವ ಮತ್ತು ಉಳಿ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಎಲ್ ಸಿ ಆರ್ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಎಲ್ ಸಿ ಆರ್ ಇಂಡಿಯನ್ ಸ್ಕೂಲ್ ಕಕ್ಯಪದವು ಇಲ್ಲಿಯ ಒಟ್ಟು ೭೦ ವಿದ್ಯಾರ್ಥಿಗಳು ಭಾಗವಹಿಸಿ, ಹಿರಿಯ ವೈಯುಕ್ತಿಕ ವಿಭಾಗದಲ್ಲಿ 8 ಪ್ರಥಮ , 4 ದ್ವಿತೀಯ,2 ತೃತೀಯಸ್ಥಾನವನ್ನು, ಕಿರಿಯ ವೈಯುಕ್ತಿಕ ವಿಭಾಗದಲ್ಲಿ 7 ಪ್ರಥಮ , 6 ದ್ವಿತೀಯ, 1ತೃತೀಯಸ್ಥಾನವನ್ನು ಹಾಗೂ ಹಿರಿಯ ಸಾಮೂಹಿಕ ವಿಭಾಗದಲ್ಲಿ 3ಪ್ರಥಮ, 1 ದ್ವಿತೀಯ, […]
ಅಮೋನಿಯ ಸೋರಿಕೆ: ಅಸ್ವಸ್ಥಗೊಂಡ ಕಾರ್ಮಿಕರು ಚೇತರಿಕೆ: ಫಿಶ್ ಸ್ಟೊರೇಜ್ ಸ್ಥಗಿತ

ಕುಂದಾಪುರ: ಅಮೋನಿಯಾ ರಾಸಾಯನಿಕ ಸೋರಿಕೆಯಾಗಿ ತೀವ್ರ ಅಸ್ವಸ್ಥಗೊಂಡು ಸೋಮವಾರ ಮುಂಜಾನೆ ಆಸ್ಪತ್ರೆಗೆ ದಾಖಲಾದ ಕಾರ್ಮಿಕರು ಚೇತರಿಸಿಕೊಂಡಿದ್ದು, ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಲ್ಲಿನ ಕಟ್‌ಬೇಲ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ದೇವಲ್ಕುಂದದ ಮಲ್ಪೆ ಫ್ರೆಶ್ ಮರೈನ್ ಮೀನು ಶಿಥಲೀಕರಣ ಘಟಕದಲ್ಲಿ ಸೋಮವಾರ ನಸುಕಿನ ಜಾವದಲ್ಲಿ ಐಸ್ ಫ್ರೀಝ್ ಮಾಡಲು ಕಾರ್ಯಾಚರಿಸುತ್ತಿರುವ ಯಂತ್ರದ ಪೈಪ್‌ನಲ್ಲಿ ಅಮೋನಿಯಾ ರಾಸಾಯನಿಕ ಸೋರಿಕೆಯಾದ ಪರಿಣಾಮ ಮಹಿಳೆಯರ ಹಾಸ್ಟೇಲ್‌ನಲ್ಲಿ ಮಲಗಿದ್ದ ೭೦ಕ್ಕೂ ಅಧಿಕ ಮಂದಿ ಮಹಿಳಾ ಕಾರ್ಮಿಕರು ಅಸ್ವಸ್ಥರಾಗಿದ್ದರು. ಅಸ್ವಸ್ಥಗೊಂಡ ಎಲ್ಲಾ ಕಾರ್ಮಿಕರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ […]
ಧಾರ್ಮಿಕ ನಂಬಿಕೆಯಲ್ಲಿ ಬಂಟ ಸಮುದಾಯ ಬಲವಾಗಿತ್ತು: ಶ್ರೀಕಾಂತ್ ಶೆಟ್ಟಿ

ಬೆಳ್ಮಣ್: ಬಂಟ ಸಮುದಾಯ ಧಾರ್ಮಿಕ ನಂಬಿಕೆಯಲ್ಲಿ ಬಲವಾಗಿದ್ದ ಸಮುದಾಯ. ಶಿಕ್ಷಣ ಕ್ಷೇತ್ರಕ್ಕೆ ಬಂಟ ಸಮುದಾಯದ ಕೊಡುಗೆ ಅಪಾರವಾದದ್ದು. ಮಕ್ಕಳಿಗೆ ವಿದ್ಯೆಯನ್ನು ನೀಡುವುದರ ಜೊತೆಯಲ್ಲಿ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿಕೊಡುವ ಕೆಲಸಗಳು ನಮ್ಮ ಹಿರಿಯರಿಂದ ನಡೆಯಬೇಕಾಗಿದೆ ಜತೆಗೆ ಧಾರ್ಮಿಕ ನಂಬಿಕೆಗಳಿಗೆ ಪುನಶ್ಚೇತನ ದೊರಕಬೇಕಾಗಿದೆ ಎಂದು ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿ ಹೇಳಿದರು. ಬೆಳ್ಮಣ್ ಶ್ರೀ ಕೃಷ್ಣಾ ಸಭಾಂಗಣದಲ್ಲಿ ಸೋಮವಾರ ಜರುಗಿದ ಬೆಳ್ಮಣ್ ವಲಯ ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ , ವಿಧ್ಯಾರ್ಥಿ ವೇತನ […]