ಪಂಚಭಾಷೆಗಳಲ್ಲಿ ಭಾಗವತ ಮೊಬೈಲ್ ಆ್ಯಪ್ ಉದ್ಘಾಟನೆ
ಉಡುಪಿ: ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರವು ಐದು ಭಾಷೆಗಳಲ್ಲಿ ಭಾಗವತದ ಅಪ್ಲಿಕೇಶನನ್ನು ಸಿದ್ಧಪಡಿಸಿದ್ದು ಇದರ ಉದ್ಘಾಟನಾ ಸಮಾರಂಭವು ಕೃಷ್ಣಮಠದಲ್ಲಿ ಜರಗಿತು. ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು.ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ.ಕಡಂದಲೆ ಗಣಪತಿ ಭಟ್ ಆ್ಯಪ್ ನ ಬಗ್ಗೆ ತಿಳಿಸಿದರು.
ಶ್ರೀ ಕೃಷ್ಣ ಮಠ: ‘ನರಸಿಂಹ ವೈಭವ’ ಹರಿಕಥೆ
ಕಾರ್ಕಳ: ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹರಿಕಥಾ ಪರಿಷತ್ತು ಮಂಗಳೂರು,ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ತು ಬೆಂಗಳೂರು ಮತ್ತು ಶ್ರೀಹಂಡೆದಾಸ ಪ್ರತಿಷ್ಟಾನ ಕಾರ್ಕಳ ಇವರ ಸಂಯುಕ್ತ ಸಹಯೋಗದೊಂದಿಗೆ ಬೆಂಗಳೂರಿನ ಕು.ಶಾರ್ವರೀ ಸೋಮಯಾಜಿ ಇವರಿಂದ ‘ನರಸಿಂಹ ವೈಭವ’ ಕಥಾಭಾಗದ ಹರಿಕಥೆ ನಡೆಯಿತು.
ಆ.13: ಶಿರಿಯಾರದಲ್ಲಿ ಪ0ಜಿನ ಮೆರವಣೆಗೆ
ಉಡುಪಿ : ಬ್ರಹ್ಮಾವರ ತಾಲೂಕು ಶಿರಿಯಾರ ವಲಯದ ಹಿ0ದು ಜಾಗರಣ ವೇದಿಕೆ ವತಿಯಿ0ದ ಜನಜಾಗ್ರತಿಗಾಗಿ ಆಖ0ಡ ಭಾರತ ಸ0ಕಲ್ಪ ದಿನದ ಪ್ರಯುಕ್ತ ಆ. 13 ರ ಸ0ಜೆ 6.30 ಕ್ಕೆ ಶಿರಿಯಾರ ಗ್ರಾಮದ ತಾ0ಗಾಡಿ ಇ0ದ ಹಳ್ಳಾಡಿ ತನಕ ಪ0ಜಿನ ಮೆರವಣಿಗೆ ನಡೆಯಲಿದೆ ಎ0ದು ಹಿ0ದು ಜಾಗರಣ ವೇದಿಕೆಯ ಸ0ಘಟಕರು ತಿಳಿಸಿದ್ದಾರೆ.
ಹೆಮ್ಮಾಡಿ : ಫಿಶ್ ಸ್ಟೋರೇಜ್ ನಲ್ಲಿ ಅಮೋನಿಯಾ ಸೋರಿಕೆ ಪ್ರಕರಣ:ಕಂಪೆನಿಯ ವಿರುದ್ದ ಸ್ಥಳೀಯರ ಆಕ್ರೋಶ
ಕುಂದಾಪುರ: ಇಲ್ಲಿನ ಫಿಶ್ ಸ್ಟೋರೇಜ್ ಅಮೋನಿಯಾ ಸೋಮವಾರ ಲಿಕ್ವಿಡ್ ಸ್ಪೋಟವಾಗಿ ಕಾರ್ಮಿಕರು ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಘಟನೆಗೆ ಕಾರಣವಾದ ಫಿಶ್ ಸ್ಟೋರೇಜ್ ಕಂಪೆನಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಸಂಸ್ಕರಣ ಘಟಕ ನಡೆಸುತ್ತಿರುವ ಕಂಪೆನಿಯ ವಿರುದ್ದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಡಿಸಿ, ಎಸ್ಪಿ ಭೇಟಿ ವೇಳೆ ಜಮಾಯಿಸಿ ಮೀನು ಸಂಸ್ಕರಣ ಘಟಕದ ವಿರುದ್ದ ಆಕ್ರೋಶ ಹೊರಹಾಕಿದರು. ಅಮೋನಿಯಾ ವಾಸನೆಯಿಂದಾಗಿ ನಾವೆಲ್ಲರೂ ಬೆಳಿಗ್ಗೆ ಮನೆಯಿಂದ ಹೊರನಡೆದಿದ್ದೇವೆ. ಮಕ್ಕಳನ್ನೆಲ್ಲಾ ಎತ್ತಿಕೊಂಡು ಬಹುದೂರ ಓಡಿದ್ದೇವೆ. ಅಮೋನಿಯಾ ಸೋರಿಕೆಯಾದ […]
ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಬಕ್ರೀದ್ ಹಬ್ಬ ಆಚರಣೆ
ಉಡುಪಿ: ಜಿಲ್ಲೆಯಾದ್ಯಂತ ಸೋಮವಾರ ಮುಸ್ಲಿಮ್ ಬಾಂಧವರು ಈದುಲ್ ಅಝ್ಹ(ಬಕ್ರೀದ್) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಉಡುಪಿ ಜಾಮೀಯ ಮಸೀದಿಯ ವೌಲಾನ ಅಬ್ದುರ್ರಶೀದ್ ನದ್ವಿ ಮತ್ತು ಉಡುಪಿ ಅಂಜುಮಾನ್ ಮಸೀದಿಯ ವೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ಈದ್ ನಮಾಝ್ ನಡೆಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳು ಈದ್ ಸಂದೇಶ ನೀಡಿದರು. ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಬಿ.ಕೆ.ಅಬ್ದುರ್ರಹ್ಮಾನ್ ಮದನಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ […]