8ನೇ ಪರಿಚ್ಛೇದಕ್ಕೆ ಸೇರಿದ ಭಾಷೆಗೆ ಸಿಗಬಹುದಾದ ಪ್ರಯೋಜನಗಳನ್ನು ಸರಕಾರ ಕಡಿತಗೊಳಿಸುತ್ತಿದೆ: ಬಿಳಿಮಲೆ
ಉಡುಪಿ: ಸಂವಿಧಾನದ 8ನೇ ಪರಿಚ್ಛೇದಕ್ಕೆ ಒಂದು ಭಾಷೆ ಸೇರಿದರೆ, ಅದರಿಂದ ಸಿಗಬಹುದಾದ ಪ್ರಯೋಜಗಳನ್ನು ಸರ್ಕಾರ ಒಂದೊಂದಾಗಿ ಕಡಿತಗೊಳಿಸುತ್ತಿದೆ. ಒಂದು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿ ಗಟ್ಟಿಗೊಳಿಸುವ ಬದಲು ಅದನ್ನು ನಿರ್ಜಿವಗೊಳಿಸುವ ಪ್ರಯತ್ನ ಆಗುತ್ತಿದೆ. ವಾಜಪೇಯಿ ಪ್ರದಾನಿಯಾಗಿದ್ದಾಗ ತುಳು ಹೊರತುಪಡಿಸಿ ಉಳಿದ ನಾಲ್ಕು ಭಾಷೆಗಳನ್ನು ಮಾತ್ರ ಸೇರಿಸಲಾಯಿತು ಎಂದು ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ, ಜಾನಪದ ತಜ್ಞ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು. ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮತ್ತು […]
ಎಸ್.ಕೆ.ಪಿ.ಎ ಕುಂದಾಪುರ ವಲಯ ಕ್ರೀಡಾಕೂಟ
ಕುಂದಾಪುರ: ಸೌತ್‌ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್ (ರಿ.) ದ.ಕ., ಉಡುಪಿ ಜಿಲ್ಲೆ ಇದರ ಕುಂದಾಪುರ ವಯಲದ ಕ್ರೀಡಾಕೂಟ ಕಾರ್ಯಕ್ರಮ ಭಾನುವಾರ ಕುಂದಾಪುರ ಗಾಂಧಿ ಮೈಧಾನದಲ್ಲಿ ನಡೆಯಿತು. ಹಿರಿಯ ಕ್ರಿಕೆಟ್ ಆಟಗಾರ ಮನೋಜ್ ನಾಯರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಇಂದು ಸಂಘಟನೆಯ ಮೂಲಕ ಕ್ರೀಡಾಕೂಟವನ್ನು ಆಯೋಜನೆ ಮಾಡುವ ಮೂಲಕ ಸದಸ್ಯರುಗಳಲ್ಲಿ ಸ್ನೇಹ, ಭಾಂದವ್ಯವನ್ನು ಗಟ್ಟಿಗೊಳಿಸುವ ಕೆಲಸ ಆಗಿದೆ ಎಂದರು. ಎಸ್,ಕೆ,ಪಿಎ, ಕುಂದಾಪುರ ವಲಯದ ಅಧ್ಯಕ್ಷ ಕೆ. ಪ್ರಮೋದ್ ಚಂದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ […]
ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮಗಳೇ ಕಾರಣ ಬಿ.ಎಲ್.ಶಂಕರ್
ಬ್ರಹ್ಮಾವರ : ಸಂವಿಧಾನದ ನಾಲ್ಕನೇ ಅಂಗವಾದ ಇಂದಿನ ಪತ್ರಿಕೋದ್ಯಮದಲ್ಲಿ ಬದಲಾವಣೆ ಆಗಿದೆ. ಪ್ರಜಾಪ್ರಭುತ್ವ ಉಳಿಯಲು ಮಾಧ್ಯಮಗಳೇ ಕಾರಣ ಎಂದು ಹಿರಿಯ ರಾಜಕಾರಣಿ ಬಿ.ಎಲ್.ಶಂಕರ್ ಹೇಳಿದರು. ಬ್ರಹ್ಮಾವರದ ಬಂಟರ ಭವನದಲ್ಲಿ ಭಾನುವಾರ ಬ್ರಹ್ಮಾವರ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪ್ರಸಕ್ತ ಕಾಲಘಟದಲ್ಲಿ ಪತ್ರಿಕೋದ್ಯಮ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉತ್ತಮ ಸಂಸ್ಕೃತಿಯ ಪ್ರಜಾಪ್ರಭುತ್ವ ನಮ್ಮ ದೇಶದಲ್ಲಿ ಬಲವಾಗಿದೆ. ಬೇರೆ ಯಾವ ದೇಶದಲ್ಲೂ ನಾವು ಇದನ್ನು ಕಾಣಲಾರೆವು. ಸ್ವಾತಂತ್ರ್ಯ ಪೂರ್ವದಲ್ಲಿ೩,೩೦೦ ಪತ್ರಿಕೆಗಳಿದ್ದು, ಇದೀಗ ೧೦೦ಭಾಷೆಗಳಲ್ಲಿ ೬೦ಸಾವಿರ ಪತ್ರಿಕೆಗಳು […]
ಧರ್ಮರಕ್ಷಣೆಯ ಹೆಸರಲ್ಲಿ ಹಿಂದೂಗಳನ್ನೇ ಕೊಲೆಗೈಯ್ಯಲಾಗುತ್ತಿದೆ: ಸಂತೋಷ್ ಕುಮಾರ್ ಬಜಾಲ್
ಕುಂದಾಪುರ: ಪ್ರತೀ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಠಿಸುತ್ತೇವೆಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಉದ್ಯೋಗಗಳನ್ನು ಸೃಷ್ಠಿಸದೆ ಯುವಕರನ್ನು ತಪ್ಪು ದಾರಿಗೆಳೆಯುತ್ತಿದೆ. ಹಿಂದೂ ಧರ್ಮರಕ್ಷಣೆಯ ಹೆಸರಿನಲ್ಲಿ ಇಂದು ಹಿಂದೂಗಳನ್ನೇ ಕೊಲೆಗೈಯ್ಯುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಡಿವೈಎಫ್ಐನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಂತೋಷ್ ಕುಮಾರ್ ಬಜಾಲ್ ಕಳವಳ ವ್ಯಕ್ತಪಡಿಸಿದರು. ಅವರು ಭಾನುವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ನಿರುದ್ಯೋಗದ ವಿರುದ್ದ, ಸ್ಥಳೀಯ ಉದ್ಯೋಗದ ಸೃಷ್ಠಿಗಾಗಿ, ಸೌಹಾರ್ದ ಸುಂದರ ಸಮಾಜದ ನಿರ್ಮಾಣಕ್ಕಾಗಿ ಭಾರತ […]
ಪ್ರಿಯ ಸ್ನೇಹಿತರೇ, ಫ್ರೆಂಡ್ ಶಿಪ್ ಡೇ ಇವತ್ತಷ್ಟೇ ಅಲ್ಲ ಪ್ರತಿದಿನವೂ : ಹುಡುಗಿಯೊಬ್ಬಳ ಆಪ್ತ ಬರಹ
ಏಳು ಬೀಳುಗಳ ಸರಮಾಲೆಯಲ್ಲಿ ನಮ್ಮ ಈ ಗೆಳೆತನ ಬಂಧವು ಶಾಶ್ವತವಾದದ್ದು. ಗೆಳೆತನ ಎಂದೆಂದಿಗೂ ಶಾಶ್ವತವಾಗಿ ಜೀವಂತ ಇರಲಿ, ಆ ಕ್ಷಣಗಳನ್ನು ನಾವು ಎಂದಿಗೂ ಮರೆಯಬಾರದು. ಫ್ರೆಂಡ್‌ಶಿಪ್ ಕೂಡ ಬೇರೆಯವರನ್ನು ನಮ್ಮವರನ್ನಾಗಿ ಮಾಡುತ್ತೆ, ಸ್ನೇಹಕ್ಕೆ ಬಡವ-ಶ್ರೀಮಂತ, ಮೇಲು ಜಾತಿ-ಕೀಳುಜಾತಿ, ಬುದ್ಧಿವಂತ-ದಡ್ಡ, ದೊಡ್ಡವರು-ಚಿಕ್ಕವರು, ಅನ್ನೋ ಬಾರ್ಡರ್ ಇರುವುದಿಲ್ಲ. ಇಷ್ಟೇ ಅಲ್ಲದೇ ಮಳೆಗಾಲದಲ್ಲಿ ಒಂದೇ ಕೊಡೆಯಲಿ ಜೊತೆಯಾಗಿ ನಡೆದವರು, ತರಗತಿಯಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದು ಜೊತೆಯಲ್ಲಿ ನಿಂತವರು. ಲೈನ್ ಹೊಡೆಯುವಾಗ ಸಾಥ್‌ಕೊಟ್ಟವರು, ಮಾಸ್ ಬಂಕ್ ಮಾಡಲು ಪ್ಲಾನ್ ಮಾಡಿ ಕೊನೆಗೆ ಸಿಕ್ಕಿಹಾಕಿಕೊಂಡವರು, […]