ಮಂಗಳೂರು: ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಾಟ ಪತ್ತೆ
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಜುಲೈ 24ರಂದು ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ. ಗುದನಾಳದಲ್ಲಿ ಅಡಗಿಸಿಟ್ಟು ಚಿನ್ನಸಾಗಾಟ ಮಾಡಲಾಗಿದ್ದು, ಚಿನ್ನ ಮತ್ತು ಪ್ರಯಾಣಿಕನನ್ನು ಮಂಗಳೂರು ಕಸ್ಟಂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 34.18 ಲಕ್ಷ ರೂ. ಮೌಲ್ಯದ 963 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಪೇಸ್ಟ್ ರೂಪದಲ್ಲಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಮಂಗಳೂರು: ಅಪಹರಣಕ್ಕೀಡಾದ ವಿದ್ಯಾರ್ಥಿ ಪತ್ತೆ
ಮಂಗಳೂರು: ಅಪಹರಣಕ್ಕೀಡಾಗಿದ್ದ ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ ಹಾರಿಸ್ ಗುರುವಾರ ಪತ್ತೆಯಾಗಿದ್ದಾನೆ. ಈತ ಜು. 22ರಂದು ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿಯ ಕಳಿಯೂರಿನಿಂದ ಅಪಹರಣಕ್ಕೀಡಾಗಿದ್ದ. ಅಪಹರಣಕಾರರು ಹಾರಿಸ್ ನನ್ನು ಮಂಗಳೂರಿನ ಬಸ್ ನಿಲ್ದಾಣದಲ್ಲಿ ತೊರೆದು ಹೋಗಿದ್ದರು. ವಿಷ್ಯ ತಿಳಿದ ಮಂಜೇಶ್ವರ ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ಆನಂತರ ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಆತನನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. […]
ಮಂಗಳೂರು: ವಿಮಾನ ನಿಲ್ದಾಣದಲ್ಲಿ ಚಿನ್ನ ಸಾಗಾಟ ಪತ್ತೆ
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಜುಲೈ 24ರಂದು ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ.ಗುದನಾಳದಲ್ಲಿ ಅಡಗಿಸಿಟ್ಟು ಚಿನ್ನಸಾಗಾಟ ಮಾಡಲಾಗಿದ್ದು, ಚಿನ್ನ ಮತ್ತು ಪ್ರಯಾಣಿಕನನ್ನು ಮಂಗಳೂರು ಕಸ್ಟಂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.34.18 ಲಕ್ಷ ರೂ. ಮೌಲ್ಯದ 963 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದ್ದು, ಪೇಸ್ಟ್ ರೂಪದಲ್ಲಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ರೈಲಿಗೆ ಹೆದರಿ ಓಡಿದ ಕಾಡುಕೋಣ, ಮರದ ನಡುವೆ ಸಿಲುಕಿ ಸಾವು
ಬಂಟ್ವಾಳ: ಕಾಡು ಕೋಣವೊಂದು ರೈಲು ಬರುವ ವೇಳೆ ಓಡಿ ಹೋಗಿ ಮರದ ನಡುವೆ ಸಿಲುಕಿ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸಾಗು ಗಂಗೆಪಾಲು ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಸುಮಾರು 4 ವರ್ಷ ಪ್ರಾಯದ ಗಂಡು ಕಾಡುಕೋಣ ರೈಲು ಹಳಿಯನ್ನು ದಾಟುವ ವೇಳೆ ರೈಲಿನ ಶಬ್ದಕ್ಕೆ ಓಡಿ ಹೋಗಿ ಮರಕ್ಕೆ ಬಡಿದಿದೆ. ಈ ವೇಳೆ ಕತ್ತು ಹಾಗೂ ಕೊಂಬು ತುಂಡಾಗಿ ಸತ್ತಿದೆ ಎಂದು ಅರಣ್ಯ ಇಲಾಖೆಯವರು ಮಾಹಿತಿ ನೀಡಿದ್ದಾರೆ. ಸಂಜೆಯ ವೇಳೆ ಸ್ಥಳೀಯರು ಗುಡ್ಡೆಗೆ […]
ಸಾಲಿಗ್ರಾಮ- ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಗಾರ
ಉಡುಪಿ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವತಿಯಿಂದ ಮಳೆ ನೀರು ಕೊಯ್ಲು ಮಾಹಿತಿ ಕಾರ್ಯಗಾರವು ಗುರುವಾರ ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಸಭಾಂಗಣದಲ್ಲಿ ನಡೆಯಿತು. ಭಾರತ್ ವಿಕಾಸ್ ಟ್ರಸ್ಟ್ನ ಸೀತಾರಾಮ ಶೆಟ್ಟಿ ಮತ್ತು ಜ್ಯೋತಿ ಸಾಲಿಗ್ರಾಮ ಇವರು ಮಳೆ ನೀರು ಕೊಯ್ಲು ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿಗಳು, ಸದಸ್ಯರು, ಬಿಲ್ಡಿಂಗ್ ಡಿಸೈನರ್, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾರದಾ ಹಿರೇಮನಿ ಸ್ವಾಗತಿಸಿದರು. ಅರುಣ್ ಬಿ ವಂದಿಸಿದರು.