ಆನ್ಲೈನ್ ಆರ್ಡರ್: ಬ್ರಹ್ಮಾವರ ವ್ಯಕ್ತಿಯಿಂದ 87 ಸಾವಿರ ಮೋಸ
ಉಡುಪಿ: ಬ್ರಹ್ಮಾವರದ ಕುಂಜಾಲು ನಿವಾಸಿ ದಿನೇಶ್ ದೇವಳಿ ಎಂಬವರು ಇ-ಮೇಲ್ ನೆಟ್ನಿಂದ 1799 ರೂ., ಮೌಲ್ಯದ ಬ್ಲೂಟೂಥ್ ಸ್ಪೀಕರ್ ಆರ್ಡರ್ ಮಾಡಿದ್ದು, ಪಾರ್ಸೆಲ್ ತೆರೆದು ನೋಡಿದಾಗ ಇನ್ನೊಂದು ಕಂಪೆನಿಯ ಬ್ಲುಟೂತ್ ಸ್ಪೀಕರ್ ಕಳಿಸಿಕೊಡಲಾಗಿದ್ದು, ಈ ಬಗ್ಗೆ ಕಸ್ಟಮರ್ ಕೇರ್ಗೆ ಕರೆ ಮಾಡಿದಾಗ ತಪ್ಪಾಗಿದೆ ಹಣ ವಾಪಾಸ್ಸು ಮಾಡುವುದಾಗಿ ಆನ್ಲೈನ್ ಸಂಸ್ಥೆ ಹೇಳಿ ದಿನೇಶ ದೇವಳಿ ಇವರ ಮೊಬೈಲಿಗೆ ಒಂದು ಸಂದೇಶ ಕಳುಹಿಸಿದೆ. ಆನ್ಲೈನ್ ಕಂಪೆನಿ ಆ ಸಂದೇಶವನ್ನು ಇನ್ನೊಂದು ಮೊಬೈಲ್ ನಂಬರ್ಗೆ ಫಾರ್ವಡ್ ಮಾಡಲು ತಿಳಿಸಿದ್ದು, ಹಾಗೆ […]
ಸಿಗಡಿ ಕೃಷಿಭೂಮಿಗೆ ಉಪ್ಪುನೀರು:ಸ್ಥಳಕ್ಕೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಿದ ಡಾ. ಮಧುಕೇಶ್ವರ್
ಕುಂದಾಪುರ: ಸಿಗಡಿ ಕೃಷಿಯಿಂದಾಗಿ ಹರೆಗೋಡು ಕೃಷಿಭೂಮಿಗೆ ಉಪ್ಪು ನೀರು ನುಗ್ಗುತ್ತಿರುವ ವಿಷಯದ ತನಿಖಗೆ ಸ್ಥಳಕ್ಕೆ ಕುಂದಾಪುರ ಸಹಾಯಕ ಆಯುಕ್ತ ಡಾ. ಮಧುಕೇಶ್ವರ್ ಭೇಟಿ ನೀಡಿ ರೈತರ ಸಂಕಷ್ಟಗಳನ್ನು ಆಲಿಸಿದರು. ಮಂಗಳವಾರ ಮಧ್ಯಾಹ್ನ ಹರೆಗೋಡುವಿಗೆ ಭೇಟಿ ನೀಡಿದ ಅವರು ಕೃಷಿಗದ್ದೆ ಹಾಗೂ ಸಿಗಡಿ ಕೆರೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆಯಲ್ಲಿ ಕೃಷಿಕರು ಅವೈಜ್ಙಾನಿಕ ಸಿಗಡಿ ಕೃಷಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಪಾಡಿಗೆ ಬದುಕಲು ಬಿಡಿ: ಸಿಗಡಿ ಕೃಷಿ ನಮ್ಮ ಜೀವನದ ದಾರಿಯನ್ನೇ ಕಿತ್ತುಕೊಂಡಿದೆ. ಸಮೃದ್ಧ ಕೃಷಿ […]
ವೈದ್ಯರ ಕೊರತೆಯ ಕಾರಣ ಚಿಕಿತ್ಸೆ ನಿರಾಕರಿಸಬೇಡಿ : ಉಡುಪಿ ಜಿಲ್ಲಾಧಿಕಾರಿ
ಉಡುಪಿ : ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸುವ ಒಳರೋಗಿ/ಹೊರ ರೋಗಿಗಳ ಸಂಖ್ಯೆ ಹೆಚ್ಚಾದಾಗ, ವೈದ್ಯರ ಹಾಗೂ ಸಿಬ್ಬಂದಿಯವರ ಕೊರತೆಯ ಕಾರಣದಿಂದ ಚಿಕಿತ್ಸೆಯನ್ನು ನಿರಾಕರಿಸಿ ವಾಪಸ್ಸು ಕಳುಹಿಸದಂತೆ ಹಾಗ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರ ನೇಮಕಾತಿ ಮಾಡಿಕೊಳ್ಳುವುದರ ಜೊತೆಗೆ, ತಿಂಗಳಿಗೆ ಕನಿಷ್ಟ ೪೦೦ ಹೆರಿಗೆಗಳ ಗುರಿಯನ್ನು ಹೊಂದುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.ಅವರು ಜುಲೈ ೨೦ ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ , ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ […]
ಜು.27: ವಿಶೇಷ ಮಕ್ಕಳ ಶಿಕ್ಷಕರ ಹಾಗೂ ಮುಖ್ಯಸ್ಥರ ಸಭೆ
ಉಡುಪಿ: ಕರ್ನಾಟಕ ರಾಜ್ಯ ವಿಶೇಷ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಂಘದ ವತಿಯಿಂದ ರಾಜ್ಯದ ವಿಶೇಷ ಮಕ್ಕಳ ಶಾಲೆಗಳ ಮುಖ್ಯಸ್ಥರ ಹಾಗೂ ಶಿಕ್ಷಕರ ಸಭೆ ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಇದೇ 27ರಂದು ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ವಸಂತ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಂದು ಬೆಳಿಗ್ಗೆ 10.30ಕ್ಕೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕರ್ ಸಭೆ ಉದ್ಘಾಟಿಸುವರು. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. […]
ಕುಂದಾಪುರ:ಸಮುದ್ರದಲ್ಲಿ ತೇಲಿ ಬಂತು ಕಡವೆಯ ಮೃತ ದೇಹ
ಕುಂದಾಪುರ: ಮೃತ ಕಡವೆಯೊಂದರ ಶವ ಸಮುದ್ರದಲ್ಲಿ ತೇಲಿ ಬಂದ ಘಟನೆ ಮಂಗಳವಾರ ಬೆಳಗ್ಗೆ ಕುಂದಾಪುರ ತಾಲೂಕಿನ ಕುಂಭಾಸಿ ಸಮೀಪದ ಕೊರವಡಿ ಎಂಬಲ್ಲಿ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ವಿಪರೀತ ಮಳೆಯಾಗಿದ್ದು ಅಲ್ಲಲ್ಲಿ ನೆರೆ ಬಂದಿದೆ. ಕಡವೆಯು ಮಳೆಯ ನೀರಿನಲ್ಲಿ ಕೊಚ್ಚಿಹೋಗಿ ಹೊಳೆಯ ಮೂಲಕ ಸಮುದ್ರ ಸೇರಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಮುಂಜಾನೆ ಸಮುದ್ರ ಕಿನಾರೆಯಲ್ಲಿ ಬಿದ್ದಿದ್ದ ಕಡವೆ ಮೃತದೇಹ ಕಂಡ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಕಡವೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು […]