ಸದನ ಸೋಮವಾರಕ್ಕೆ ಮುಂದೂಡಿಕೆ: ಇನ್ನೂ ಗೊಂದಲದಲ್ಲೇ ಇದೆ ರಾಜ್ಯ ರಾಜಕೀಯ

ರಾಜ್ಯ:ಶುಕ್ರವಾರ ಇಷ್ಟರವರೆಗೆ ರಾಜ್ಯದಲ್ಲಿದ್ದ ರಾಜಕೀಯ ಗೊಂದಲಗಳೆಲ್ಲಾ ನಿವಾರಣೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದವರಿಗೆಲ್ಲಾ ಭ್ರಮನಿರಸನವಾಗಿದೆ. ಯಾಕೆಂದರೆ  ರಾಜ್ಯ ರಾಜಕೀಯದ ಗೊಂದಲ ನಿವಾರಣೆಗೆ  ಇನ್ನು ಮೂರು ದಿನ ಕಾಯಬೇಕಾಗಿದೆ. ಶುಕ್ರವಾರದ ಕಲಾಪವೂ ಗೊಂದಲಗಳ ನಡುವೆಯೇ ಅಂತ್ಯವಾಗಿದ್ದು ಇನ್ನು ಸೋಮವಾರ ಸ್ಪಷ್ಟ ಚಿತ್ರಣ ಸಿಗಲಿದೆ. ಬೆಳಗ್ಗೆಯಿಂದಲೂ ಆರಂಭವಾದ ಚರ್ಚೆ ರಾತ್ರಿ 8.30ರವರೆಗೆ ನಡೆಯಿತು. ಚರ್ಚೆಯಲ್ಲಿ ಮತ್ತೇನು ಹೊಸ ತಿರುವುಗಳು ಆಗಲಿಲ್ಲ. ಸದನವನ್ನು ಸೋಮವಾರಕ್ಕೆ ಮುಂದೂಡಲಾಗಿದ್ದು ಅಲ್ಲಿಯವರೆಗೂ ನಿರೀಕ್ಷೆ ಮಾಡುವುದು ಅನಿವಾರ್ಯವಾಗಿದೆ.

ಶಿರೂರು ಶ್ರೀಗಳ ಸಾವಿನ ಪ್ರಕರಣ ಜೀವಂತವಾಗಿದೆ: ರವಿಕಿರಣ್ ಮುರ್ಡೇಶ್ವರ

ಉಡುಪಿ: ಶಿರೂರು ಶ್ರೀಗಳ ಸಾವಿನ ಪ್ರಕರಣ ಹಳ್ಳಹಿಡಿದಿಲ್ಲ. ಇನ್ನೂ ಜೀವಂತವಾಗಿದೆ. ಆದರೆ ಪ್ರಕರಣವನ್ನು ಮುಂದುವರಿಸುವವರು ಯಾರು ಎಂಬುವುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ ಎಂದು ಹಿರಿಯ ವಕೀಲ ರವಿಕಿರಣ್‌ ಮುರ್ಡೇಶ್ವರ ಹೇಳಿದರು. ಶಿರೂರು ಶ್ರೀಗಳ ವರ್ಷದ ಸಂಸ್ಮರಣ ಕಾರ್ಯಕ್ರಮದ ‌ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಶ್ರೀಗಳ ಪೂರ್ವಾಶ್ರಮದ ರಕ್ತ ಸಂಬಂಧಿಗಳು ದೂರು ನೀಡಿದರೆ ಮಾತ್ರ ಪ್ರಕರಣವನ್ನು ಮುಂದುವರಿಸಬಹುದು. ಆದರೆ ಅಭಿಮಾನಿ ಬಳಗದವರು ನ್ಯಾಯಾಲಯದಲ್ಲಿ ದಾವೆ ಹೂಡಲು ಸಾಧ್ಯವಿಲ್ಲ. ಕೊಲೆ ಪ್ರಕರಣ, ಸಂಶಯದ ಸಾವಿಗೆ ಕಾಲಮಿತಿ ಇಲ್ಲ. ಹಾಗಾಗಿ […]

ಮಂಗಳೂರು: ವಿದ್ಯುತ್ ದರ ಏರಿಕೆ ಖಂಡಿಸಿ ಸಿಪಿಎಂ ಪ್ರತಿಭಟನೆ

ಮಂಗಳೂರು: ವಿದ್ಯುತ್ ದರ ಏರಿಕೆಯನ್ನು ಖಂಡಿಸಿ ಮಂಗಳೂರಿನ ಮೆಸ್ಕಾಂ ಕಚೇರಿ ಮುಂದೆ ಶುಕ್ರವಾರ ಸಿಪಿಎಂ ವತಿಯಿಂದ ಪ್ರತಿಭಟನೆ ನಡೆಯಿತು. ಮಂಗಳೂರಿನ ಬಿಜೈಯಲ್ಲಿರುವ ಮೆಸ್ಕಾಂ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ವಿಪರೀತ ವಿದ್ಯುತ್ ದರ ಏರಿಕೆ, ಹೆಚ್ಚುವರಿ ಡಿಪಾಸಿಟ್, ತಪ್ಪುಲೆಕ್ಕಾಚಾರ ಮುಂತಾದ ಮೆಸ್ಕಾಂನ ಅವ್ಯವಸ್ಥೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಸಿಪಿಎಂ ಕಾರ್ಯಕರ್ತರು, ಸಾರ್ವಜನಿಕರು, ವಿದ್ಯುತ್ ದರ ಏರಿಕೆಯನ್ನು ಹಿಂಪಡೆಯಿರಿ, ಹೆಚ್ಚುವರಿ ಡಿಪಾಸಿಟ್ ಬೇಡವೇ ಬೇಡ ಆಗ್ರಹಿಸಿ, ತಪ್ಪುಲೆಕ್ಕಾಚಾರಗಳನ್ನು ಸರಿಪಡಿಸಿರಿ ಇತ್ಯಾದಿ […]

ಶಿರೂರು ಶ್ರೀಗಳ‌ ಅವಹೇಳನದ ವಿರುದ್ಥ ನಿರಂತರ ಹೋರಾಡುವೆ: ಕೇಮಾರು

ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಗೆ ಆಗಿರುವ ಅನ್ಯಾಯದ ಬಗ್ಗೆ ಆಕ್ರೋಶವಿದೆ. ಆದರೆ ಪೂರ್ವಾಗ್ರಹ ಪೀಡಿತಕ್ಕೊಳಗಾಗಿ ಹೋರಾಟ ನಡೆಸುತ್ತಿಲ್ಲ. ಶ್ರೀಗಳ ವಿರುದ್ಧ ನಿಂತರು ನಾನು ಹೋರಾಟ ಬಿಡುವುದಿಲ್ಲ. ನನ್ನ ಉಸಿರಿರುವ ವರೆಗೆ ಶ್ರೀಗಳಿಗೆ ಅವಹೇಳನ ಮಾಡುವವರ ವಿರುದ್ಧ ಹೋರಾಡುತ್ತೇನೆ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಶಿರೂರು ಲಕ್ಷ್ಮೀವರತೀರ್ಥ ಶ್ರೀಪಾದರು ವೃಂದಾವನಸ್ಥರಾಗಿ ಒಂದು ವರ್ಷ ಕಳೆದ ಹಿನ್ನಲೆಯಲ್ಲಿ ಶಿರೂರು ಶ್ರೀಗಳ ಅಭಿಮಾನಿಗಳು ಉಪ್ಪೂರಿನ ಸ್ಪಂದನ ವಿಶೇಷ ಮಕ್ಕಳ ಆಶ್ರಮದಲ್ಲಿ ಶುಕ್ರವಾರ […]

ಹಿರಿಯಡಕ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಉಡುಪಿ, ಜುಲೈ 19: ವಿದ್ಯಾರ್ಥಿಗಳು ತಮ್ಮ ಅಮೂಲ್ಯ ವಿದ್ಯಾರ್ಥಿ ಜೀವನವನ್ನು ಅಧ್ಯಯನ ಶೀಲತೆಯ ಮೂಲಕ ಸದುಪಯೋಗ ಪಡಿಸಿಕೊಳ್ಳುವಂತೆ ಸಾಫಲ್ಯ ಟ್ರಸ್ಟ್ ನ  ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯ ನೂತನ ಸಮಾಜ ಸೇವಾ ಸಂಸ್ಥೆ “ಸಾಫಲ್ಯ ಟ್ರಸ್ಟ್” ವತಿಯಿಂದ ಕೊಡುಗೆಯಾಗಿ ನೀಡಿರುವ ಆಧುನಿಕ “ಶುದ್ಧ ಕುಡಿಯುವ ನೀರಿನ ಘಟಕ”ವನ್ನು ಉದ್ಘಾಟಿಸಿ, ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಫಲ್ಯ ಟ್ರಸ್ಟ್‍ನ ಕಾರ್ಯದರ್ಶಿ […]