‘ಅಂದಾಜಿ ಆಪುಜಿ’ ನಾಟಕಕ್ಕೆ ಮುಹೂರ್ತ, ಉತ್ತಮ ಸಂದೇಶವುಳ್ಳ ನಾಟಕದಿಂದ ಸಮಾಜದ ಬದಲಾವಣೆ ಸಾಧ್ಯ: ಶಶಿಧರ್ ಶೆಟ್ಟಿ

ಕಾರ್ಕಳ: ನಾಟಕಗಳು ಕಲಾಭಿಮಾನಿಗಳನ್ನು ರಂಜಿಸುವುದರ ಜತೆಗೆ ಸಮಾಜಕ್ಕೊಂದು ಉತ್ತಮ ಸಂದೇಶ ನೀಡಿ ಆ ಮೂಲಕ ಸಮಾಜದ ಬದಲಾವಣೆಯಲ್ಲಿ ಶ್ರಮಿಸಬೇಕಾಗಿದೆ. ಉತ್ತಮ ಸಂದೇಶವುಳ್ಳ ನಾಟಕದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಉದ್ಯಮಿ ಶಶಿಧರ್ ಶೆಟ್ಟಿ ಹೇಳಿದರು. ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರೀ ದೇವಾಸ್ಥಾನದಲ್ಲಿ ಶುಕ್ರವಾರ ನಡೆದ ತುಳುವ ಸಿರಿ ಕಲಾವಿದರು ಬೆಳ್ಮಣ್ ಇವರ ಅಭಿನಯದ ಪತ್ರಕರ್ತ ವಿಲಾಸ್ ಕುಮಾರ್ ನಿಟ್ಟೆ ರಚಿಸಿದ ಈ ವರ್ಷದ ವಿನೂತನ ನಾಟಕ ‘ಅಂದಾಜಿ ಆಪುಜಿ’ ಇದರ ಶುಭ ಮುಹೂರ್ತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. […]
ಮೀನುಗಾರರಿಗೆ ಸರಕು ಸಾಗಾಟದ ವಾಹನದಲ್ಲಿ ಸಂಚರಿಸಲು ಅವಕಾಶ ನೀಡಲು ಒತ್ತಾಯಿಸಿ ಮನವಿ

ಉಡುಪಿ: ಕರಾವಳಿ ಕರ್ನಾಟಕದ ಮೀನುಗಾರರಿಗೆ ಸರಕು ಸಾಗಾಟದ ವಾಹನದಲ್ಲಿ ಸಂಚರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ನೇತೃತ್ವದ ನಿಯೋಗ ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಮಳೆಗಾಲದ ಸಮಯದಲ್ಲಿ ನಾಡದೋಣಿಗಳಲ್ಲಿ ದುಡಿಯುವ ಮೀನುಗಾರರು ತಮ್ಮ ಮೀನುಗಾರಿಕಾ ಬಲೆ ಮತ್ತು ಇನ್ನಿತರ ಪರಿಕರಗಳೊಂದಿಗೆ ಮಲ್ಪೆ ಸಹಿತ ಇತರ ಬಂದರುಗಳಿಗೆ ಟೆಂಪೋ ವಾಹನದಲ್ಲಿ ತೆರಳುತ್ತಾರೆ. ಹಾಗೆಯೇ ತಲೆ ಮೇಲೆ ಬುಟ್ಟಿಯನ್ನು […]
2019 ವಿಶ್ವಕಪ್: ನ್ಯೂಜಿಲೆಂಡ್- ಇಂಗ್ಲೆಂಡ್ ಫೈನಲ್ ಕದನ, ವಿಶ್ವಕಪ್ ನಿಂದ ಹೊರಬಿದ್ದ ಬಲಿಷ್ಠ ತಂಡಗಳು

ಬರ್ಮಿಂಗ್ಹ್ಯಾಂ: 2019ರ ವಿಶ್ವಕಪ್ ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅಚ್ಚರಿಯ ಫಲಿತಾಂಶದಿಂದ ಹೊರಬಿದ್ದ ಬೆನ್ನಲ್ಲೇ ಗುರುವಾರದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡವೂ ಹೊರಬಿದ್ದಿದೆ. ಆ ಮೂಲಕ ಲೀಗ್ ಹಂತದ ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನ ನೀಡಿ ಪಾಯಿಂಟ್ ಟೇಬಲ್ ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದ, 2011ರ ವಿಶ್ವಕಪ್ ಚ್ಯಾಂಪಿಯನ್ ಭಾರತ ಹಾಗೂ 2015 ಚ್ಯಾಂಪಿಯನ್ ಆಸ್ಟ್ರೇಲಿಯಾ ತಂಡಗಳ ವಿಶ್ವಕಪ್ ಆಸೆ ಕಮರಿಹೋಗಿದೆ. ಹೀಗಾಗಿ ಲೀಗ್ ಹಂತದಲ್ಲಿ ಸಾಧಾರಣ ಪ್ರದರ್ಶನ […]
ಕುಬ್ಜಾ ನದಿಯಲ್ಲಿ ಪತ್ತೆಯಾಯ್ತು ಮಗುವಿನ ಶವ: ಕುಂದಾಪುರ ಮಗು ಅಪಹರಣ ಪ್ರಕರಣಕ್ಕೆ ತಿರುವು

ಕುಂದಾಪುರ: ಯಡಮೊಗೆ ಅಪಹರಣಕ್ಕೊಳಗಾಗಿತ್ತೆನ್ನಲಾದ ಮಗು ಕಾರೂರು ಸಮೀಪದ ಕುಬ್ಜಾ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ. ಈ ಮೂಲಕ ಮಗುವಿನ ಅಪಹರಣ ಪ್ರಕರಣ ಕೊಂಚ ತಿರುವು ಪಡೆದಿದ್ದು, ಪ್ರಕರಣದ ಸುತ್ತ ಹಲವು ಅನುಮಾನುಗಳು ಹುಟ್ಟಿಕೊಂಡಿವೆ. ಕುಂದಾಪುರ ತಾಲೂಕಿನ ಯಡಮೊಗೆಯ ಕುಮ್ಟಿಬೇರು ಎಂಬಲ್ಲಿ ಗುರುವಾರ ಮುಂಜಾನೆ ಸಂತೋಷ್ ನಾಯ್ಕ್ ಅವರ ಪತ್ನಿ ರೇಖಾ ತನ್ನಿಬ್ಬರು ಮಕ್ಕಳೊಂದಿಗೆ ಮಲಗಿದ್ದಾಗ ಅಪರಿಚಿತನೋರ್ವ ಬಂದು ಒಂದು ವರ್ಷದ ಮಗು ಸಾನ್ವಿಕಾಳನ್ನು ಅಪಹರಣ ಮಾಡಿ ಬಳಿಕ ಮನೆ ಬಳಿಯ ಕುಬ್ಜಾ ನದಿಯಲ್ಲಿ ಸಾಗಿ ಪರಾರಿಯಾಗಿದ್ದನು ಎನ್ನಲಾಗಿತ್ತು. ತಾಯಿ […]
ಬೈರಂಪಳ್ಳಿ: ಮನೆ ಅಂಗಳದಲ್ಲೇ ಬಸ್ ಕಂಡಕ್ಟರ್ ಬರ್ಬರ ಹತ್ಯೆ

ಉಡುಪಿ: ಖಾಸಗಿ ಬಸ್ ಕಂಡಕ್ಟರ್ ಒಬ್ಬರನ್ನು ತನ್ನ ಮನೆ ಅಂಗಳದಲ್ಲೇ ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿ ಪೆರ್ಡೂರು, ಬೈರಂಪಳ್ಳಿ ಎಂಬಲ್ಲಿ ಸಂಭವಿಸಿದೆ.ಪ್ರಶಾಂತ್ ಪೂಜಾರಿ (38) ಕೊಲೆಯಾದವರು.ಗುರುವಾರ ಮಧ್ಯರಾತ್ರಿ ವೇಳೆಗೆ ಪ್ರಶಾಂತ್ ಅವರ ಮನೆಗೆ ಬಂದ ಇಬ್ಬರು ಪ್ರಶಾಂತ್ ಜತೆ ಜಗಳಕ್ಕಿಳಿದಿದ್ದಾರೆ. ಜಗಳ ತರಾಕಕ್ಕೇರಿ ಅಲ್ಲೇ ಕೊಲೆ ಮಾಡಿದ್ದಾರೆ.ಆರೋಪಿಗಳ ಬಗ್ಗೆ ಇನ್ನಷ್ಟೇ ಸುಳಿವು ಪತ್ತೆಯಾಗಬೇಕಿದೆ. ಹಣಕಾಸು ವಿಚಾರಕ್ಕೆ ಸಂಬಂಧಿಸಿ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದೆ.ಪರಿಚಯಸ್ಥರೇ ಕೃತ್ಯ ಎಸಗಿರಬಹುದು. ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು […]