ಮಾರುಕಟ್ಟೆಗೆ ಇನ್ನೇನು ಬಂತು ಹ್ಯುಂಡೈನ ಕೋನಾ ಎಲೆಕ್ಟ್ರಿಕ್ ಕಾರು:ಮಾರುಕಟ್ಟೆಯಲ್ಲಿ ಮಾಡಲಿದೆಯಾ ಕಾರುಬಾರು?
ದೇಶ: ಹ್ಯುಂಡೈ ಕಂಪನಿಯ ಬಹುನಿರೀಕ್ಷಿತ ಕೋನಾ ಎಲೆಕ್ಟ್ರಿಕ್ ಕಾರು ನಾಳೆ (ಜುಲೈ 9) ಬಿಡುಗಡೆಯಾಗುತ್ತಿದೆ. ಜುಲೈ 9 ರಿಂದಲೇ ಈ ಕೋನಾ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ಕೋನಾ ಕಾರಿನ ಸ್ಪೆಷಾಲಿಟಿ ಅಂದ್ರೆ ಒಂದು ಬಾರಿ ಚಾರ್ಜ್ ಮಾಡಿದರೆ 452 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ನಾಳೆ ಬಿಡುಗಡೆಯಾಗಲಿರುವ ಹಾಗೂ ಲಭ್ಯವಿರುವ ಎಲೆಕ್ಟ್ರಿಕ್ ಕಾರುಗಳ ಪೈಕಿ ಗರಿಷ್ಠ ಮೈಲೇಜ್ ಅನ್ನೋ ಹೆಗ್ಗಳಿಕೆ ಕೋನಾದ್ದು. ಫೀಚರ್ ಏನ್ ಗೊತ್ತಾ: ಹ್ಯುಂಡೈ ಕೋನಾದಲ್ಲಿ 2 ವೇರಿಯೆಂಟ್ ಲಭ್ಯವಿದೆ. 39.2 kWh […]
ನೋಡ ನೋಡುತ್ತಿದ್ದಂತೆಯೇ ದೈತ್ಯ ಅಲೆಗಳಿಗೆ ಸಿಕ್ಕು ಮರವಂತೆಯಲ್ಲಿ ಸಮುದ್ರ ಪಾಲಾದ ವ್ಯಕ್ತಿ
ಕುಂದಾಪುರ: ದೈತ್ಯ ಅಲೆಗಳ ರಭಸಕ್ಕೆ ಸಿಕ್ಕು ಸಮುದ್ರ ಪಾಲಾದ ವ್ಯಕ್ತಿಯೋರ್ವರ ಮೃತ ದೇಹವನ್ನು ಸತತ ಕಾರ್ಯಾಚರಣೆ ಬಳಿಕ ಮೇಲಕ್ಕೆತ್ತಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀಮಹಾರಾಜಾ ವರಾಹ ಸ್ವಾಮಿ ದೇವಸ್ಥಾನ ಬಳಿ ಸಮುದ್ರದಲ್ಲಿ ನಡೆದಿದೆ. ಮೂಲತಃ ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (೪೫) ಮೃತ ವ್ಯಕ್ತಿ. ಘಟನೆ ವಿವರ: ವಿದೇಶದಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದ ಚೇತನ್ ಶೆಟ್ಟಿ ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಭಾನುವಾರದಂದು ಸಮುದ್ರ ವಿಹಾರಕ್ಕೆಂದು […]
ದೋಸ್ತಿ ಸರ್ಕಾರದ ಎಲ್ಲಾ ಸಚಿವರ ರಾಜೀನಾಮೆ…!
ಬೆಂಗಳೂರು: ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ದಿನೇಶ್ ಗುಂಡೂರಾವ್, ಡಿಕೆಶಿ ಮೊದಲಾದ ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನಡೆದ ಸಭೆ ನಡೆದಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಎಲ್ಲಾ ಸಚಿವರು ರಾಜೀನಾಮೆಗೆ ಮುಂದಾಗಿದ್ದಾರೆ. ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಪಕ್ಷದ 22 ಸಚಿವರು ಹಾಗೂ ಜೆಡಿಎಸ್ ಪಕ್ಷದ 9 ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈ ಮೂಲಕ ದೋಸ್ತಿಗಳು ಸರ್ಕಾರ ಉಳಿಸಿಕೊಳ್ಳಲು ಕೊನೆಯ ಅಸ್ತ್ರ ಪ್ರಯೋಗಿಸಲಾಗಿದೆ. ಸಿಎಂ ಕುಮಾರಸ್ವಾಮಿ ಕೈಗೆ ಸಚಿವರು ರಾಜೀನಾಮೆ ಪತ್ರ ನೀಡಲಿದ್ದು, ಬಳಿಕ […]
ಕಾಂಗ್ರೆಸ್ ರಾಜೀನಾಮೆಗೆ ಮುಂದಾದ ಮತ್ತೋರ್ವ ಶಾಸಕಿ..?
ಖಾನಾಪುರ ಜು.08: ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದ ಶಾಸಕಿ ಡಾ.ಅಂಜಲಿ ನಿಂಬಾಳಕರ ಅವರೂ ಸೋಮವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ತಾಲೂಕಿನ ಶಾಸಕರ ಆಪ್ತ ವಲಯದಲ್ಲಿ ಹರಡಿದೆ. ಭಾನುವಾರ ಖಾನಾಪುರ ತಾಲೂಕಿನ ಕೆಲ ಕಾಂಗ್ರೆಸ್ ಮುಖಂಡರು ಪಟ್ಟಣದಲ್ಲಿ ಸಭೆಯನ್ನು ನಡೆಸಿ ಶಾಸಕರ ನಡೆಯ ಬಗ್ಗೆ ಚರ್ಚಿಸಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಮುಂಜಾನೆ ಕರೆದಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ಶಾಸಕರು ಮುಂದೂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯುವ […]
ಕಾರ್ಕಳ:ಆನೆಕೆರೆಯಲ್ಲಿ ಧರೆಗುರುಳಿದ ಬೃಹತ್ ಆಲದ ಮರ:
ಕಾರ್ಕಳ: ಇಲ್ಲಿನ ಆನೆಕೆರೆ ಸರ್ಕಲ್ (ಕನಕಾಬಾರ್)ಎದುರಿಗಿರುವ ಆಲದ ಮರವೊಂದು ಸೋಮವಾರ ಮುಂಜಾನೆ ಸುಮಾರು 6.30 ವೇಳೆಗೆ ಬೀಸಿದ ಮಳೆ-ಗಾಳಿಗೆ ಧರೆಗುರುಳಿದೆ. ಮುಂಜಾನೆ ಈ ರಸ್ತೆಯಲ್ಲಿ ಜನಸಂಚಾರ ವಿರಳವಿದ್ದುದರಿಂದ ಯಾವುದೇ ಅಪಾಯಗಳಾಗಿಲ್ಲ.ರಸ್ತೆಯ ನಡುವೆಯೇ ಮರ ಬಿದ್ದಿರುವುದರಿಂದ ಅಕ್ಕ ಪಕ್ಕದಲ್ಲಿರುವ ಅಂಗಡಿಗಳ ಮೇಲೆ ಮರ ಬಿದ್ದು ಅಪಾಯವಾಗುವುದು ತಪ್ಪಿದೆ. ಸ್ಥಳಕ್ಕೆ ಪುರಸಭಾ ಅಧಿಕಾರಿಗಳು ಭೇಟಿ ನೀಡಿ ಮರದ ತೆರವು ಕಾರ್ಯಕ್ಕೆ ಮುಂದಾದರು.