ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನದಲ್ಲಿ ಕೊಹ್ಲಿ, ರೋಹಿತ್

ವಿಶ್ವಕಪ್ ಟೂರ್ನಿ ಲೀಗ್ ಪಂದ್ಯಗಳು ಮುಕ್ತಾಯಗೊಂಡಿದೆ. ಜುಲೈ 9 ರಿಂದ ಸೆಮಿಫೈನಲ್ ಪಂದ್ಯಗಳು ಆರಂಭಗೊಳ್ಳಲಿದೆ. ಇದರ ಬೆನ್ನಲ್ಲೇ ಐಸಿಸಿ ಏಕದಿನ ಕ್ರಿಕೆಟ್ ಆಟಗಾರರ ರ‍್ಯಾಂಕಿಂಗ್ ಪ್ರಕಟಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರೇ ಅಗ್ರಸ್ಥಾನದಲ್ಲಿ ಅಲಂಕೃತರಾಗಿದ್ದಾರೆ. ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, ಸ್ಫೋಟಕ ಬ್ಯಾಟ್ಸ್‌‌ಮನ್ ರೋಹಿತ್ ಶರ್ಮಾ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಕೊಹ್ಲಿ ಹಾಗೂ ರೋಹಿತ್ ಹೊರತು ಪಡಿಸಿದರೆ ಟಾಪ್ 10 ಪಟ್ಟಿಯಲ್ಲಿ ಟೀಂ ಇಂಡಿಯಾ […]

ಉಡುಪಿ: ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ; ಕುಟುಂಬ ‌ಸಮ್ಮಿಲನ‌

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ಜಂಟಿ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದ ಬಹುಮಾನ ವಿತರಣೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಶನಿವಾರ ನಗರದ ಪುರಭವನದಲ್ಲಿ ನಡೆಯಿತು. ಕಾರ್ಯಕ್ರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿಂಡಿಕೇಟ್ ಬ್ಯಾಂಕ್ ಮಣಿಪಾಲದ ವಲಯ ಕಚೇರಿಯ ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ಹಂದೆ ಮಾತನಾಡಿ, ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸವನ್ನು ಸದಾ ಎಚ್ಚರಿಕೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಮಾದಕ ದ್ರವ್ಯ ಸೇವನೆ ವಿರುದ್ದ ಕೂಡ ದನಿ ಎತ್ತಿ […]

ಅಲೆವೂರಲ್ಲಿ‌ ಗ್ರಾಮೀಣ ಕ್ರೀಡಾಕೂಟ: ಗ್ರಾಮೀಣ ಸಂಪ್ರದಾಯ ತಿಳಿಯಲು ಕೆಸರ್ಡೊಂಜಿ ದಿನ ಸಹಕಾರಿ: ದಿನಕರ ಬಾಬು

ಉಡುಪಿ: ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಪ್ರಸ್ತುತ ಕೃಷಿಗೆ ಸಂಬಂಧಿಸಿದ ಗ್ರಾಮೀಣ ಕ್ರೀಡೆಗಳು ನಿಧಾನವಾಗಿ ಮರೆಯಾಗುತ್ತಿವೆ. ಅವುಗಳನ್ನು ಮತ್ತೆ ಮುನ್ನಾಲೆಗೆ ತರಲು ಇಂತಹ ಗ್ರಾಮೀಣ ಕ್ರೀಡಾಕೂಟಗಳು ಸಹಕಾರಿ. ಯುವ ಜನತೆಯನ್ನು ಕೃಷಿಯ ಕಡೆಗೆ ಸೆಳೆಯುವುದರ ಜತೆಗೆ ಅವರಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿಗಳ ಪರಿಚಯ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅಲೆವೂರು ಗುಡ್ಡೆಅಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಯುವಜನ ಸೇವೆ, ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಉಡುಪಿ ಜಿ.ಪಂ. ಸಂಯುಕ್ತ ಆಶ್ರಯದಲ್ಲಿ […]

ಗಂಗೊಳ್ಳಿಯಲ್ಲಿ ಪತ್ರಿಕಾ ದಿನಾಚರಣೆ

ಗಂಗೊಳ್ಳಿ : ಸಮಾಜದ ಜನರಿಗೆ ವಿಚಾರಗಳು, ಜ್ಞಾನ ಹಾಗೂ ಮನರಂಜನೆ ನೀಡುವುದು ಪತ್ರಿಕೋದ್ಯಮದ ಮೂಲ ಆಶಯ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗ ಸರಿಯಾಗಿ ಕಾರ್ಯನಿರ್ವಹಿಸುವಂತೆ ಪತ್ರಿಕಾ ರಂಗ ಕಣ್ಗಾವಲು ಮಾಡುತ್ತಿದೆ. ಸ್ವಾತಂತ್ರ್ಯಪೂರ್ವದಲ್ಲಿ ಪ್ರಾರಂಭವಾದ ಪತ್ರಿಕೋದ್ಯಮ ಬ್ರಿಟಿಷರ, ದುರಾಡಳಿತ, ಅನ್ಯಾಯವನ್ನು ವಿರೋಧಿಸಿ ಬೆಳೆದು ಬಂದಿತ್ತು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭವಾಗಿರುವ ಪತ್ರಿಕೋದ್ಯಮ ಸಮಾಜದ ಬೆಳವಣಿಗೆಗೆ, ಜನರ ಹಿತಕ್ಷಣೆ ಕಾಪಾಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಕುಂದಪ್ರಭ ಸಂಪಾದಕ ಯು.ಎಸ್.ಶೆಣೈ ಹೇಳಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಮತ್ತು […]

ಪ್ರಾರ್ಥನೆ ನೆಪದಲ್ಲಿ ಮತಾಂತರ ಆರೋಪ- ಸ್ಥಳೀಯರಿಂದ ಹೋರಾಟದ ಎಚ್ಚರಿಕೆ:ಸ್ಥಳಕ್ಕೆ ಪೊಲೀಸರ ಭೇಟಿ

ಕುಂದಾಪುರ: ಪ್ರಾರ್ಥನೆಯ ನೆಪದಲ್ಲಿ ಮನೆಯೊಂದರಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಿದೆಯೆಂದು ಆರೋಪಿಸಿ ಸ್ಥಳಿಯರು ಹಾಗೂ ಹಿಂದೂಪರ ಸಂಘಟನೆಯವರು ಆಕ್ರೋಷ ವ್ಯಕ್ತಪಡಿಸಿದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ ಬೆಲ್ತೂರು ಇಂದಿರಾ ನಗರ ಎಂಬಲ್ಲಿ ನಡೆದಿದೆ.ಇಲ್ಲಿನ ಮನೆಯೊಂದರಲ್ಲಿ ಭಾನುವಾರ ಹಾಗೂ ಇತರೆ ಕೆಲ ದಿನಗಳಲ್ಲಿ ಪ್ರಾರ್ಥನೆ ನೆಪದಲ್ಲಿ ಇತರ ಕಡೆಗಳಿಂದ ಜನರನ್ನು ಕರೆಯಿಸಿ ಅವರಿಗೆ ಧರ್ಮ ಪ್ರಚಾರ ಮಾಡಿ ಮತಾಂತರ ನಡೆಸಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದ್ದು ಇಂತಹ ಕೇಂದ್ರಗಳು ನಿಲ್ಲಬೇಕೆಂದು ಸ್ಥಳೀಯ ನಿವಾಸಿ ಮಹಿಳೆಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ. […]