ಉಡುಪಿ: ಗೋಕಳ್ಳತನ, ಅಕ್ರಮ ಗೋಸಾಗಟ ತಡೆಗೆ ಆಗ್ರಹಿಸಿ ವಿ.ಹಿಂ.ಪ-ಬಜರಂಗದಳ ಮನವಿ
ಉಡುಪಿ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋಕಳ್ಳತನ, ಅಕ್ರಮ ಗೋಸಾಗಾಟದ ವಿರುದ್ಧ ಹಾಗೂ ಅದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ವಿಶ್ವ ಹಿಂದು ಪರಿಷತ್-ಬಜರಂಗದಳದ ವತಿಯದ ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ಮನವಿ ಮಾಡಲಾಯಿತು. ಮನವಿಯಲ್ಲಿ ಜಿಲ್ಲಾಡಳಿತ ತಕ್ಷಣ ತೆಗೆದುಕೊಳ್ಳಬೇಕಾದ ಇಪ್ಪತ್ತು ಬೇಡಿಕೆಗಳನ್ನು ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು […]
ಹೆಣ್ಣೆಂದರೆ ಬರೀ ಹೆಣ್ಣಲ್ಲ ಬಾಳ ಬೆಳಗೋ ಕಣ್ಣು: ಜಹಫರ್ ಸಾಧಿಕ್ ಬರೆದ ಓದಲೇಬೇಕಾದ ಬರಹ
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸ್ತೀ ಗೆ ಅವಳದೇ ಆದ ಗೌರವ ಸ್ಥಾನಮಾನಗಳಿವೆ. ಹೆಣ್ಣು ವಿಶಿಷ್ಟ ಶಕ್ತಿಗಳ ಸಂಗಮ. ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ ಮತ್ತು ತಾಳ್ಮೆಯುಳ್ಳ ಸ್ತ್ರೀ ಒಂದು ಪ್ರಬಲ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೆಣ್ಣು ಒಂದು ಗಂಡಿನ ಜೀವನದಲ್ಲಿ ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ, ಮಗಳಾಗಿ ತನ್ನ ಮಹತ್ವಪೂರ್ಣ ಕಾರ್ಯವನ್ನು ನಿರ್ವಹಿಸುತ್ತಾಳೆ. ಮಹಿಳೆ ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೆ ಪ್ರತಿನಿತ್ಯ ಮನೆಯ ಎಲ್ಲಾ ದೈನಂದಿನ ಕೆಲಸ ಕಾರ್ಯಗಳನ್ನು ಮಾಡಿ ಸಮಾಜದಲ್ಲಿ “ಹೌಸ್ ವೈಫ್” ಎಂಬ ಹೆಸರಿನಿಂದ ಗುರುತಿಸಿಕೊಳ್ಳುತ್ತಾಳೆ. […]
ಹಿರಿಯಡಕ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನ’
ಉಡುಪಿ : ಯುವ ಜನತೆಯು ದೇಶದ ಸಂಪತ್ತು, ಮಾದಕ ದ್ರವ್ಯಕ್ಕೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳದೇ ಮಾದಕ ವಸ್ತುಗಳಿಂದ ದೂರ ಉಳಿದು ಸಧೃಡ ಮತ್ತು ಆರೋಗ್ಯವಂತ ಸಮಾಜದ ಭಾಗವಾಗಬೇಕು ಎಂದು ಹಿರಿಯಡಕ ಆರಕ್ಷಕ ಠಾಣೆ ಉಪನಿರೀಕ್ಷಕ ಸತೀಶ್ ಬಲ್ಲಾಳ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅವರು ಇತ್ತೀಚೆಗೆ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ, ಎನ್.ಎಸ್.ಎಸ್. ಘಟಕಗಳು ಮತ್ತು ಆರಕ್ಷಕ ಠಾಣೆ, ಹಿರಿಯಡಕ ಇವರ ಸಹಭಾಗಿತ್ವದಲ್ಲಿ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಅಂತರಾಷ್ಟ್ರೀಯ ಮಾದಕ ವ್ಯಸನ […]
ಜು.3: ಗೋಹತ್ಯೆ ನೀಷೇಧಕ್ಕೆ ಆಗ್ರಹಿಸಿ ವಿಎಚ್ಪಿ, ಬಜರಂಗದಳದಿಂದ ಪ್ರತಿಭಟನೆ: ಸುನಿಲ್ ಕೆ.ಆರ್.
ಉಡುಪಿ, ಜೂ. 28: ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋ ಹತ್ಯೆಗೆ ಕಡಿವಾಣ ಹಾಕಬೇಕು. ಹಾಗೂ ಗೋ ಹತ್ಯೆ ನಿಷೇಧ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ವತಿಯಿಂದ ಜುಲೈ 3ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿವುದು ಎಂದು ಬಜರಂಗ ದಳದ ಪ್ರಾಂತ ಸಂಚಾಲಕ ಸುನಿಲ್ ಕೆ.ಆರ್. ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಡುಪಿ ಸೇರಿದಂತೆ ಕರಾವಳಿಯಾದ್ಯಂತ ಗೋ ಕಳ್ಳರು ಪೊಲೀಸರ ಕಣ್ಣು ತಪ್ಪಿಸಿ ಹಿಂಸಾತ್ಮಕವಾಗಿ ಗೋಕಳ್ಳ […]
ವೃತ್ತಿರಂಗಭೂಮಿ ಶಿಷ್ಯ ವೇತನ- ಮೌಖಿಕ ಸಂದರ್ಶನ
ಉಡುಪಿ : ವೃತ್ತಿ ರಂಗಭೂಮಿಯಲ್ಲಿ ತರಬೇತಿ ಪಡೆದು, ಅದೇ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಲು ಅಸಕ್ತರಾಗಿರುವ ಯುವಕ/ಯುವತಿಯರಿಂದ ಶಿಷ್ಯವೇತನಕ್ಕಾಗಿ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಶಿಷ್ಯವೇತನವನ್ನು 6 ತಿಂಗಳಿಗೆ ನೀಡಲಾಗುತ್ತದೆ. ಜುಲೈ 11 ರಂದು ಬೆಳಗ್ಗೆ 10.30 ರಿಂದ ಧಾರವಾಡದ ರಂಗಾಯಣದ ಆವರಣದಲ್ಲಿ ಮೌಖಿಕ ಸಂದರ್ಶನ ಏರ್ಪಡಿಸಲಾಗಿದೆ. ಇನ್ನೂ ಅರ್ಜಿ ಸಲ್ಲಿಸದ ಆಸಕ್ತ ಯುವಕ ಯುವತಿಯರು ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. ಹೀಗೆ ನೇರವಾಗಿ ಬಂದ ಅಭ್ಯರ್ಥಿಗಳನ್ನು ಸಹ ಅಯ್ಕೆಗೆ ಪರಿಗಣಿಸಲಾಗುವುದು. ಒಟ್ಟು 15 ಜನ ಯುವಕ ಯುವತಿಯರಿಗೆ ಮಾಹೆಯಾನ 10,000 […]