ಪೊಲೀಸ್ ಇಲಾಖೆಯಲ್ಲಿ ಕರಾವಳಿ ಯುವ ಜನತೆಯ ಸೇರ್ಪಡೆ ಅಗತ್ಯವಿದೆ: ಭಾಸ್ಕರ್ ರಾವ್
ಉಡುಪಿ: ಕರಾವಳಿಯ ಜನತೆ ಹೆಚ್ಚು ಧೈರ್ಯಶಾಲಿಗಳು, ಬುದ್ದಿವಂತರು ಮತ್ತು ಇತರರಿಗೆ ಸ್ಪೂರ್ತಿ ತುಂಬುವಂತಹವರು ಇಂತಹ ಪ್ರದೇಶದ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದರೆ, ಇಲಾಖೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಕೆ.ಎಸ್.ಆರ್.ಪಿ ಯ ಎಡಿಜಿಪಿ ಭಾಸ್ಕರ್ ರಾವ್ ಹೇಳಿದ್ದಾರೆ. ಅವರು ಗುರುವಾರ ಮಲ್ಪೆಯ ಏಳೂರು ಮೊಗವೀರ ಸಭಾಂಗಣದಲ್ಲಿ, ಕೆ.ಎಸ್.ಆರ್.ಪಿ., ಕರಾವಳಿ ಕಾವಲು ಪಡೆ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ, ಕರಾವಳಿ ತೀರದ ಯುವಕ ಯುವತಿಯರಿಗೆ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ […]
ಪರಿಸರ ಉಳಿಸುವ ಕೆಲಸವಾಗಲಿ: ದಿನಕರ ಬಾಬು
ಉಡುಪಿ, ಜೂನ್ 27: ನಾಡಪ್ರಭು ಕೆಂಪೇಗೌಡರು ಕಟ್ಟಿಸಿರುವ ಕೆರೆ ಕಟ್ಟೆಗಳು, ಮರಗಳನ್ನು ಬೆಳೆಸಿದ್ದರೀತಿ ಇಂದಿಗೂ ಮಾದರಿಯಾಗಿದೆ. ಅವರು ನಗರ ನಿರ್ಮಿಸಲು ಹಾಕಿಕೊಂಡಿದ್ದ ಯೋಜನೆಗಳನ್ನು ಅಳವಡಿಸಿ ಇಂದಿನ ದಿನಗಳಲ್ಲಿ ಅನುಪ್ಠಾನಗೊಳಿಸುವ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು. ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಉಡುಪಿ ಜಿಲ್ಲೆ ಮತ್ತು ಉಡುಪಿ ಜಿಲ್ಲಾ ಒಕ್ಕಲಿಗ(ಗೌಡ)ರ ಸೇವಾ ಸಂಘ(ರಿ), ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವಕಾಲೇಜು ಸಭಾಂಗಣದಲ್ಲಿ ನಡೆದ […]
ತಮಿಳ್ರಾಕರ್ಸ್ ಎಂಬ ಸಿನಿಮ ಕಳ್ಳರು ಡಾರ್ಕ್ವೆಬ್ ದಂದೆಯ ಕರಾಳಮುಖ; ಕೋಟಿ ಕೋಟಿ ರೂ. ಹಣ ಸಂಪಾದನೆ
‘ತಮಿಳ್ರಾಕರ್ಸ್’ ಈ ಶಬ್ಧ ಕೇಳಿದೊಡನೇ ಭಾರತೀಯ ಚಿತ್ರರಂಗ ತಲ್ಲಣಗೊಳ್ಳುತ್ತದೆ. ಅಷ್ಟರ ಮಟ್ಟಿಗೆ ಚಿತ್ರದೋದ್ಯಮಕ್ಕೆ ನಡುಕ ಹುಟ್ಟಿಸಿದೆ. ತಮಿಳ್ರಾಕರ್ಸ್ ವೆಬ್ಸೈಟ್ ಜಗತ್ತಿನ ಯಾವುದೇ ಮೂಲೆಯಲ್ಲಿ, ಯಾವುದೆ ಹೊಸ ಚಿತ್ರ ಬಿಡುಗಡೆಗೊಂಡರು ತನ್ನ ಅಂತರ್ಜಾಲದಲ್ಲಿ ಅಪ್ಲೋಡ್ ಮಾಡಿಬಿಡುತ್ತದೆ. ಚಿತ್ರದ ಎಚ್ಡಿ ಪ್ರಿಂಟ್, ಥಿಯೇಟರ್ ಪ್ರಿಂಟ್ಗಳನ್ನು ಈ ವೆಬ್ಸೈಟ್ ಪೈರಸಿ ಮಾಡುತ್ತದೆ. ತಮಿಳ್ರಾಕರ್ಸ್ ಒಂದೆಡೇ ಖ್ಯಾತಿ ಮತ್ತು ಕುಖ್ಯಾತಿ ಎರಡನ್ನುಗಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ತಮಿಳ್ರಾಕರ್ಸ್ಗೆ ದೊಡ್ಡ ಅಭಿಮಾನಿ ಪಡೆ ಹುಟ್ಟಿಕೊಂಡಿರುವುದು ಆತಂಕಕಾರಿ ಬೆಳವಣಿಗೆ. ಹಾಲಿವುಡ್, ತೆಲುಗು, ತಮಿಳು, ಮಲೆಯಾಳಂ, ಕನ್ನಡ, ಹಿಂದಿ […]
ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್: ಹಿಮರ್ಷ ಗೆ ಚಿನ್ನ, ಬೆಳ್ಳಿ, ಕಂಚು
ಉಡುಪಿ, ಜೂನ್ 27: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಷಿಯೇಷನ್ ಮೈಸೂರಿನಲ್ಲಿ ಜೂನ್ 21 ರಿಂದ 23 ರ ವರೆಗೆ ಆಯೋಜಿಸಿದ ರಾಜ್ಯಮಟ್ಟದ ಓಪನ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ಶಿಪ್ 2019 ರಲ್ಲಿ, 7 ರಿಂದ 9 ವರ್ಷದೊಳಗಿನವರ ಬಾಲಕಿಯರ ವಿಬಾಗದಲ್ಲಿ ಉಡುಪಿಯ ಹಿಮರ್ಷ, ಒಂದು ಸ್ವರ್ಣ, ಒಂದು ಬೆಳ್ಳಿ, ಒಂದು ಕಂಚು ಪದಕ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಸ್ಪರ್ದೆಯಲ್ಲಿ, 500 ಮೀಟರ್ ರೋಡ್ ರೇಸ್ ನಲ್ಲಿ ಚಿನ್ನ, 500 ಮೀ ರಿಂಕ್ ರೇಸ್ ನಲ್ಲಿ ಕಂಚು, […]
ಮಲೇರಿಯಾ ನಿಯಂತ್ರಣಕ್ಕೆ ಜನರ ಸಹಭಾಗಿತ್ವ ಅಗತ್ಯ: ಸಿಂಧೂ ರೂಪೇಶ್
ಉಡುಪಿ, ಜೂನ್ 27: ಉಡುಪಿ ಜಿಲ್ಲೆಯಲ್ಲಿ ಇದೀಗ ಮಲೇರಿಯಾವು ನಿಯಂತ್ರಣದಲ್ಲಿದ್ದು, ಮಲೇರಿಯಾ ನಿರ್ಮೂಲನೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಜನರ ಸಹಕಾರ ಅಗತ್ಯ ಎಂದು ಜಿಲ್ಲಾ ಪಂಚಾಯತ್ನ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸಿಂಧೂ ರೂಪೇಶ್ ಹೇಳಿದ್ದಾರೆ. ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಹಾಗೂ ಉಡುಪಿ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ , ಬೋರ್ಡ್ ಹೈಸ್ಕೂಲ್ ಆರವಣದಲ್ಲಿ ಏರ್ಪಡಿಸಿದ್ದ […]