ಮಂಗಳೂರು: ಪ್ರೇಮ ಸಲ್ಲಾಪದ ವೀಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್: ಆರೋಪಿ ಬಂಧನ

ಮಂಗಳೂರು: ಜೂ. 26: ಯುವತಯೊಬ್ಬಳ  ಜತೆಗೆ ವ್ಯಕ್ತಿಯೋರ್ವ ಪ್ರೇಮ ಸಲ್ಲಾಪದಲ್ಲಿ ತೊಡಗಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಠಾಣಾ ಪೊಲೀಸರು ಅಬ್ದುಲ್ ರಹಿಮಾನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಈ ವ್ಯಕ್ತಿ ಯುವತಿಯೋರ್ವಳ ಜತೆ ನಗ್ನವಾಗಿ ಪ್ರೇಮ ಸಲ್ಲಾಪವಾಡುವ ವೀಡಿಯೋ ವ್ಯಾಟ್ಸ್ ಅಪ್ ಮೂಲಕ ಹರಿದಾಡುತ್ತಿತ್ತು. ಈ ಬಗ್ಗೆ ಸ್ಥಳೀಯ ಸಂಘಟನೆ ನೀಡಿದ ದೂರಿನಂತೆ ಪೊಲೀಸರು ಕೆಲವೇ ಕ್ಷಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ […]

ಎಸಿಬಿ ಯಿಂದ ಅಹವಾಲು ಸ್ವೀಕಾರ

ಉಡುಪಿ, ಜೂನ್ 27: ಉಡುಪಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು ಜೂನ್ 28 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೈಂದೂರು ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 2.30 ರಿಂದ ಸಾಯಂಕಾಲ 4.30 ರವರೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ ಮತ್ತು ಜೂನ್ 29 ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಹೆಬ್ರಿ ಪ್ರವಾಸಿ ಮಂದಿರದಲ್ಲಿ […]

ಮಂಗಳೂರು: ಸುಲ್ತಾನ್, ಸಿಟಿ ಗೋಲ್ಡ್ ಮಳಿಗೆಗೆ ಐಟಿ ದಾಳಿ

ಮಂಗಳೂರು, ಜೂ.26: ಮಂಗಳೂರು ಹಾಗೂ‌ ಉಡುಪಿಯ ಚಿನ್ನದ ಮಳಿಗೆಗಳ ಮೇಲೆ ಗುರುವಾರ ಐಟಿ ದಾಳಿ ನಡೆದಿದೆ. ಪ್ರತಿಷ್ಠಿತ ಸುಲ್ತಾನ್ ಗೋಲ್ಡ್ ಮತ್ತು ಸಿಟಿ ಗೋಲ್ಡ್ ಮಳಿಗೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಂಗಳೂರಿನ ಕಂಕನಾಡಿಯಲ್ಲಿರುವ ಮಳಿಗೆಗಳಿಗೆ ದಾಳಿ ನಡೆದಿದ್ದು, ಹಲವು ಕಡತಗಳನ್ನ ಪರಿಶೀಲನೆ ನಡೆಸಿದ್ದಾರೆ. ಸುಲ್ತಾನ್ ಗೋಲ್ಡ್ ಕೇರಳದ ರವೂಫ್ ಎಂಬುವವರಿಗೆ ಸೇರಿದ ಚಿನ್ನದ ಮಳಿಗೆ ಎಂದು ತಿಳಿದು ಬಂದಿದೆ.

ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ: ಅರ್ಜಿ ಆಹ್ವಾನ

ಉಡುಪಿ, ಜೂನ್ 27: 2019-20 ನೇ ಸಾಲಿನ ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಸಿ.ಎಂ.ಇ.ಜಿ.ಪಿ)ಯಡಿ ಸ್ವ-ಉದ್ಯೋಗ ಸ್ಥಾಪಿಸಲು ಆಸಕ್ತಿ ಇರುವ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಯು ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ & ಗ್ರಾಮೋದ್ಯೋಗ ಮಂಡಳಿ (ಕೆ.ವಿ.ಐ.ಬಿ) ಗಳ ಮುಖಾಂತರ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಗರಿಷ್ಠ ಯೋಜನಾ ವೆಚ್ಚ […]

ಮಂಗಳೂರು: ಡೆಂಗ್ಯೂ ಜ್ವರದಿಂದ ಕಡಬದ ಮಹಿಳೆ ಸಾವು

ಮಂಗಳೂರು: ಜು. 26: ಡೆಂಗ್ಯು ಜ್ವರದಿಂದ‌ ಬಳಲುತ್ತಿದ್ದ ಕೋಡಿಂಬಾಳ ಗ್ರಾಮದ ಕುಕ್ಕರೆಬೆಟ್ಟು ನಿವಾಸಿ ವೀಣಾ (43) ಗುರುವಾರ ಮೃತಪಟ್ಟಿದ್ದಾರೆ.ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ, ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ದೇಹದಲ್ಲಿ ಬಿಳಿರಕ್ತದ ಕಣ ಕಡಿಮೆಯಾಗಿತ್ತು. ಪ್ರಾರಂಭದಲ್ಲಿ ವೀಣಾ ಅವರಿಗೆ ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾರೆ.ಕಡಬದ ಕೋಡಿಂಬಾಳ ಪರಿಸರದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿರುವ ಶಂಕೆ ವ್ಯಕ್ತವಾಗಿದ್ದು, […]