ಮಣಿಪಾಲದಲ್ಲಿ ಬೀದಿನಾಯಿಗಳ ಮಾರಣಹೋಮ: ವಿಷವುಣಿಸಿ 10 ನಾಯಿಗಳ ಹತ್ಯೆ

ಉಡುಪಿ, ಜೂ.25: ಮಣಿಪಾಲ ಮಾಂಡವಿ ಎಮರಾಲ್ಡ್ ಮುಂಭಾಗ 10 ಬೀದಿ ನಾಯಿಗಳನ್ನು ಮೀನಿನ ಮೂಲಕ ವಿಷ ಹಾಕಿ ಹತ್ಯೆಗೈಯ್ಯಲಾಗಿದೆ. ಜೂ. 22ರಂದು ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿ ವಿಷಪೂರಿತ ಮೀನುಗಳನ್ನು ಬೀದಿ ನಾಯಿಗಳಿಗೆ ಹಾಕಿ ತಿನ್ನುವಂತೆ ಮಾಡಿದ್ದು, ಇದರಿಂದ 8 ನಾಯಿಗಳು ಮತ್ತು ಜೂ.24ರಂದು ಎರಡು ನಾಯಿಗಳು ಮೃತಪಟ್ಟಿವೆ ಎಂದು ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ನ ಬಬಿತಾ ರಾಜ್ ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಎಲ್ಲ ನಾಯಿಗಳ ಕಳೇಬರಹವನ್ನು ಉಡುಪಿ ನಗರಸಭೆ ಸಿಬಂದಿ ತೆಗೆದು […]
ಉಡುಪಿ: ಇಂದ್ರಾಳಿ ದ್ವಿಚಕ್ರ ವಾಹನ ಶೋರೂಂಗೆ ಬೆಂಕಿ ಅವಘಡ: 5.75ಕೋ.ರೂ. ನಷ್ಟ

ಉಡುಪಿ: ಇಂದ್ರಾಳಿಯ ದ್ವಿಚಕ್ರ ವಾಹನಶೋರೂಂ ಇರುವ ಕಟ್ಟಡದಲ್ಲಿ ಜೂ.23ರಂದು ರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದ ನಾಲ್ಕು ಅಂಗಡಿಗಳಿಗೆ ಹಾನಿಯಾಗಿದ್ದು, ಒಟ್ಟು 5.75 ಕೋಟಿ ರೂ. ನಷ್ಟು ಉಂಟಾಗಿದೆ ಎನ್ನಲಾಗಿದೆ. ಜಯರಾಮ್ ಸುವರ್ಣ ಎಂಬವರ ಮೂರು ಅಂತಸ್ತಿನ ಎಆರ್‌ಜೆ ಆರ್ಕೆಡ್ ಕಟ್ಟಡದ ಕೆಳ, ಮೊದಲ ಮತ್ತು ಎರಡನೆ ಅಂತಸ್ತಿನಲ್ಲಿರುವ ಅವರದ್ದೆ ಮಾಲಕತ್ವದ ‘ಜೈದೇವ್ ಮೋಟೋ ರೆನ್’ ವೆಸ್ಪ ಮತ್ತು ಅಪ್ರಿಲ್ಲಾ ದ್ವಿಚಕ್ರ ವಾಹನಗಳ ಶೋರೂಂ, ಮೂರನೇ ಮಹಡಿಯಲ್ಲಿರುವ ಉಡುಪಿಯ ಸೌಜನ್ಯ ಶೆಟ್ಟಿ ಮಾಲಕತ್ವದ ವೇರ್‌ಹೌಸ್ ಜಿಮ್ ಸೆಂಟರ್ ಮತ್ತು […]
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘ ಜೂ.26: ನೂತನ ಕಟ್ಟಡ ‘ಕದಿರು’ ಉದ್ಘಾಟನೆ

ಸಿದ್ದಾಪುರ: ಶತಮಾನೋತ್ಸವ ಸಂಭ್ರಮಾಚರಣೆಯ ಸಮೀಪದಲ್ಲಿರುವ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘವು ಸ್ವಂತ ಬಂಡವಾಳದಿಂದ ಸುಮಾರು 2 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡ ಕದಿರು ಜೂ.26ರ ಬುಧವಾರ ಬೆಳಗ್ಗೆ 10.30ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎ. ಜಯರಾಮ ಭಂಡಾರಿ ಅವರು ಹೇಳಿದರು. ಅವರು ಸಿದ್ದಾಪುರದಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ನೂತನ ಕಟ್ಟಡ ಉದ್ಘಾಟನ ಕಾರ್ಯಕ್ರಮದ ಅಂಗವಾಗಿ ಜೂ.23ರಂದು ನಡೆಸಿದಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 26ರಂದು ಬೆಳಿಗ್ಗೆ 10.30 ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. […]
ಕಾರ್ಕಳ: ಪಾರಂಪರಿಕ ಗೋ ಸಂವರ್ಧನೆ ಮತ್ತು ದೇಸೀ ತಳಿಗಳ ಗೋ ಶಾಲೆಗೆ ದೇಣಿಗೆ ಸಂಗ್ರಹಕ್ಕಾಗಿ ಮನವಿ

ಕಾರ್ಕಳ: ದೇಸೀ ತಳಿಗಳ ಗೋ ಸಂವರ್ಧನೆ ಮತ್ತು ಗೋ ಸಾಕಣೆ ಅಪರೂಪವಾಗಿರುವ ನಡುವೆ ಆಶಾಕಿರಣದಂತೆ ಕಾರ್ಕಳ ನಗರ ಮಧ್ಯೆ ಬಂಡೀಮಠ ಬಸ್ ನಿಲ್ದಾಣದ ಸನಿಹ ದೇಸೀ ತಳಿಗಳ ಗೋ ಶಾಲೆಯೊಂದು ಅಸ್ತಿತ್ವದಲ್ಲಿದೆ. ನಗರದಲ್ಲಿ ವಾಸ್ತವ್ಯವಿರುವ ವೈದಿಕ ಗೋಪಿನಾಥ ಪುರಾಣಿಕ ದಂಪತಿ ಬಂಡೀಮಠದ ತಮ್ಮ ನಿವಾಸದಲ್ಲೇ ಕಳೆದ ೬ ವರ್ಷಗಳಿಂದ ಇಂಥದ್ದೊಂದು ಸಾಹಸವನ್ನು ಸದ್ದಿಲ್ಲದೆ ನಡೆಸುತ್ತಿದ್ದಾರೆ.ಗೋವುಗಳು ಇದ್ದವು, ಗೋ ಶಾಲೆ ಕಟ್ಟಡವಿರಲಿಲ್ಲ. ಆದರೂ ತಗಡಿನ ಶೀಟು ಹೊದಿಸಿದ ತನ್ನ ವಾಸದ ಮನೆಯನ್ನೇ ಗೋ ಶಾಲೆಯಾಗಿ ಬಳಸಿ ಗೋವುಗಳ ಜೊತೆಗೇ […]
ಟ್ಯಾಂಕರ್- ಜೀಪು ಅಪಘಾತ, ಜೀಪು ಚಾಲಕನಿಗೆ ಗಂಭೀರ ಗಾಯ

ಮಂಗಳೂರು: ಟ್ಯಾಂಕರ್ ಹಾಗೂ ಜೀಪು ನಡುವೆ ಅಪಘಾತ ಉಂಟಾಗಿ ಜೀಪು ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಬಳಿ ಮಂಗಳವಾರ ಸಂಭವಿಸಿದೆ. ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ಹೋಗುತ್ತಿದ್ದ ಜೀಪು ಹಾಗೂ ಬೆಂಗಳೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಆಯಿಲ್ ಸಾಗಾಟದ ಮಿನಿ ಟ್ಯಾಂಕರ್ ಢಿಕ್ಕಿಯಾಗಿವೆ. ಢಿಕ್ಕಿಯಾದ ರಭಸಕ್ಕೆ ಜೀಪು ಕಿರು ಸೇತುವೆಗೆ ಉರುಳಿದೆ. ಗಂಭೀರವಾಗಿ ಗಾಯಗೊಂಡ ಜೀಪು ಚಾಲಕನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರಿ […]