ಉಡುಪಿ: ರೈಲಿಗೆ ತಲೆ ಕೊಟ್ಟು ಕಾರು ಚಾಲಕ ಆತ್ಮಹತ್ಯೆ

ಉಡುಪಿ: ಕಾರು ಚಾಲಕರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಇದ್ರಾಳಿಯ ರೈಲ್ವೇ ನಿಲ್ದಾಣದ ಸಮೀಪ ಬುಧವಾರ ಸಂಭವಿಸಿದೆ. ಉಡ್ಕಾ ಕಾಲನಿ ನಿವಾಸಿ ದಿನೇಶ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡವರು. ಇವರು ಮಣಿಪಾಲ ಮತ್ತು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕಾರಿನ ಚಾಲಕರಾಗಿ‌ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಆಟೋ ರಿಕ್ಷಾ-ಖಾಸಗಿ ಬಸ್ ಢಿಕ್ಕಿ‌; ತಂದೆ ಮಗನಿಗೆ ಗಾಯ

ಉಡುಪಿ: ಆಟೋ ರಿಕ್ಷಾ ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾಗಿ ತಂದೆ ಮತ್ತು ಮಗ ಗಂಭೀರ ಗಾಯಗೊಂಡ ಘಟನೆ ಉಡುಪಿ ಸಮೀಪದ ಕೊರಂಗ್ರಪಾಡಿ ಎಂಬಲ್ಲಿ ಬುಧವಾರ ಸಂಭವಿಸಿದೆ. ಉಡುಪಿಯಿಂದ ಕಾರ್ಕಳ ಕಡೆ ತೆರಳುತ್ತಿದ್ದ ಖಾಸಗಿ ಬಸ್ಸ್ ಹಾಗೂ ಬುಡ್ನಾರು ನಿವಾಸಿ ರಿಯಾಸ್ ತನ್ನ ಮಗನನ್ನು ವಿಶೇಷ ತರಗತಿಗೆ ಎಮ್‍ಇಟಿ ಉದ್ಯಾವರ ಶಾಲೆಗೆ ತನ್ನದೇ ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ  ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ […]

ತುಳು ಸಾಹಿತ್ಯ ಅಕಾಡೆಮಿ‌ ಪ್ರಶಸ್ತಿ ಪುರಸ್ಕೃತ ಸಾಹಿತಿ, ಹಿರಿಯ ರಂಗಕರ್ಮಿ ಡಿಕೆ ಚೌಟ ನಿಧನ

ಬೆಂಗಳೂರು: ಹಿರಿಯ ರಂಗಕರ್ಮಿ, ರಂಗ ನಿರಂತರದ ಕಾರ್ಯಾಧ್ಯಕ್ಷ ಡಿ.ಕೆ.ಚೌಟ (82)ಅವರು ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ‌ಹೊಂದಿದರು.ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚೌಟ ಅವರನ್ನು ಚಿಕಿತ್ಸೆಗಾಗಿ ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.ಕೆ. ಚೌಟ ಅವರು ಮೂಲತಃ ಮಂಜೇಶ್ವರದ ಮೀಯಪ್ಪಾದು ಎಂಬಲ್ಲಿಯಲ್ಲಿವರು. ಇವರ ಪೂರ್ಣ ಹೆಸರು ದರ್ಬೆ ಕೃಷ್ಣಾನಂದ ಚೌಟ.ಮುಂಬಯಿ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಆನಂತರ ಗಾನಾ, ನೈಜೀರಿಯಾ ಮತ್ತು ಲಂಡನ್​ ಮೊದಲಾದ ದೇಶದಲ್ಲಿ ನೆಲೆಸಿದ್ದರು. ಆ ಬಳಿಕ ತಮ್ಮಬೆಂಗಳೂರಿಗೆ […]

ಹುಲ್ಲಿಗೆ ಹನಿಮುತ್ತು : ಶಾಶ್ವತಿ ಕ್ಲಿಕ್ಕಿಸಿದ ಚಿತ್ರ

  ಶಾಶ್ವತಿ ಎಚ್ ಎಸ್  ಮಲೆನಾಡಿನ ಶೃಂಗೇರಿಯವರು. ಸಸ್ಯಶಾಸ್ತ್ರದಲ್ಲಿ ಎಂಎಸ್ಸಿ ಓದಿರುವ  ಇವರಿಗೆ ಫೋಟೋಗ್ರಫಿ ಇಷ್ಟದ ಹವ್ಯಾಸ. ಮುಂಜಾನೆ ಹುಲ್ಲಿನ ಮೇಲೆ ಬಿದ್ದ  ಇಬ್ಬನಿ, ಹೂವಿಗೆ ಮುತ್ತಿದ ದುಂಬಿ, ಅಲ್ಲೆಲ್ಲೋ ಬಲೆ ಹೆಣೆಯುತ್ತಿರುವ ಜೇಡ, ಹಾಡುವ ಹಕ್ಕಿ ಇವೆಲ್ಲ ಚಿತ್ರಗಳು ಇವರ ಕೆಮರಾದಲ್ಲಿ ಸೆರೆಯಾಗಿವೆ.

ಇಷ್ಟು ಮಾಡಿದ್ರೆ  ಮಳೆಗಾಲದಲ್ಲಿ ಆರೋಗ್ಯದ ಸಮಸ್ಯೆ ಹತ್ತಿರ ಸುಳಿಯಲ್ಲ: ಇಲ್ಲಿದೆ ನೋಡಿ ಡಾಕ್ಟರ್ ಹೇಳಿದ ಸಿಂಪಲ್ ಟಿಪ್ಸ್

ಮಳೆಗಾಲ ಬಂತೆಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಕಂಗೊಳಿಸುವ ಹಸಿರು, ಶೀತ ಹವಾಮಾನವಿರುವ ಖುಷಿ. ಆದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಕುರಿತು ಕೆಲವೊಂದು ಕಾಳಜಿ ವಹಿಸದಿದ್ದರೆ ಆ ಖುಷಿಯೇ ಮಾಯವಾಗಬಹುದು. ಅಂದ ಹಾಗೆ ಆಯುರ್ವೇದದಲ್ಲಿ  ವರ್ಷ ಋತುವಿನಲ್ಲಿ ಪಾಲಿಸಬೇಕಾದ ಹಲವು ನಿಯಮಗಳ ಉಲ್ಲೇಖವಿದೆ. ನೀವಿದ್ದನ್ನು ಪಾಲಿಸಿದರೆ ಈ ಮಳೆಗಾಲವನ್ನು ಖುಷಿಯಿಂದ ಎಂಜಾಯ್ ಮಾಡಬಹುದು. ಮಳೆಗಾಲದಲ್ಲಿ ಏನ್ ಸಮಸ್ಯೆ ಕಾಡುತ್ತೆ? ಈ ಋತುವಿನಲ್ಲಿ ವಾತಾ ಪ್ರಕೋಪ ದೇಹ ಬಲ ಹಾಗೂ ಜೀರ್ಣಶಕ್ತಿ  ಕ್ಷೀಣಿಸುತ್ತದೆ. ಕೆಮ್ಮು, ಶೀತ, ಜ್ವರ, ಮಲೇರಿಯಾ, ಆರ್ಥ್ರೈಟಿಸ್, […]