ಐಎಂಎ ವಂಚನೆ ಪ್ರಕರಣ: ಉಡುಪಿಯಲ್ಲೂ ಪ್ರಕರಣ ದಾಖಲು

ಉಡುಪಿ: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲೂ ಮೊದಲ‌ ಪ್ರಕರಣ ದಾಖಲಾಗಿದೆ. ಕೆಮ್ಮಣ್ಣು ತೋನ್ಸೆಯ ಇಸ್ಮಾಯೀಲ್ ಎಂಬವರ ಪತ್ನಿ ಎಸ್.ಕೆ.ನಾಹಿದಾ (30) ಎಂಬವರು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಐಎಂಎ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಸಲು ಮೊತ್ತದ ಜತೆ ತಿಂಗಳಿಗೆ 3.1% ಬಡ್ಡಿ/ಲಾಭಾಂಶ ನೀಡುವುದಾಗಿ ಸಂಬಂಧಿಕರಿಂದ ತಿಳಿದು  2018ರ ಡಿ.21ರಂದು ಪಾಲು ಬಂಡವಾಳದ(ಶೇರ್) ಮೊತ್ತ 1,000 ರೂ. ಹಾಗೂ ಡೆಪೋಸಿಟ್ ಆಗಿ 30,000 ರೂ. ಮತ್ತು […]

ಮಣಿಪಾಲ: ಮಂಚಿಕೆರೆ‌ಯಲ್ಲಿ‌ ಮತ್ತೊಮ್ಮೆ ಭೂಮಿ ಬಿರುಕು; ಆತಂಕ

ಉಡುಪಿ: ಮಣಿಪಾಲದ ಮಂಚಿಕೆರೆ ಎಂಬಲ್ಲಿ 5 ವರ್ಷಗಳ ಹಿಂದೆ ಬಿರುಕುಗೊಂಡಿದ್ದ ಭೂಮಿ, ಸದ್ಯ ಮತ್ತೊಮ್ಮೆ ಬಿರುಕು ಕಾಣುತ್ತಿದ್ದು ಆ ಭಾಗದಲ್ಲಿ ಆತಂಕ ಮನೆ ಮಾಡಿದೆ. ಐದು ವರ್ಷಗಳ ಬಿರುಕುಗೊಂಡ ಬಳಿಕ ಆ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಅಂದು‌ ಭೂಮಿಯ ಭೂಕಂಪನ ವೇಳೆ ಸಂಭವಿಸುವ ಬಿರುಕಿನಂತಿತ್ತು. 2014 ರಲ್ಲಿ ಬಿರುಕುಗೊಂಡ ವೇಳೆ ಆ ಭಾಗಕ್ಕೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ‌ ವರದಿ ತಯಾರಿಸಿ ಜಿ.ಪಂ.ಗೆ ನೀಡಿದ್ದು, ಮಲ್ಪೆಯಿಂದ ಉಪ್ಪೂರು, ಮಣಿಪಾಲ, ಪರ್ಕಳ ಪ್ರದೇಶಗಳಲ್ಲಿ […]

ಹಡೀಲು ಭೂಮಿಯಲ್ಲಿ‌ ಭತ್ತದ ಬೆಳೆ, ಅಂತರ್ಜಲ ಹೆಚ್ಚಳಕ್ಕೆ ಪೂರಕ: ನವೀನ್ ಚಂದ್ರ ಜೈನ್

ಕಾರ್ಕಳ: ಯೋಜನಾಬದ್ದ ಭತ್ತದ ಕೃಷಿಯಿಂದ ಲಾಭ ಪಡೆಯಲು ಸಾಧ್ಯ. ಹಡೀಲು ಬಿದ್ದ ಗದ್ದೆಯನ್ನು ಭತ್ತ ಬೆಳೆದರೆ ಅಂತರ್ಜಲ ಗಣನೀಯವಾಗಿ ಹೆಚ್ಚಿಸಬಹುದು. ಹಡೀಲು ಬಿದ್ದ ಗದ್ದೆಗಳನ್ನು ಉಳುಮೆ ಮಾಡಲು ಭಾಕಿಸಂ ನಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭಾಕಿಸಂ ಜಿಲ್ಲಾಧ್ಯಕ್ಷ ನವೀನ್ ಚಂದ್ರ ಜೈನ್ ಹೇಳಿದರು. ಅವರು ಬೆಳ್ಮಣ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಳ – ನಮ್ಮ ಛಲ ಎಂಬ ಗುರಿಯೊಂದಿಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು  ಇನ್ನಾ ಹಾಲು ಉತ್ಪಾದಕರ ಸಂಘದಲ್ಲಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ […]

ಉಡುಪಿ‌ಗೆ ಕಂದಾಯ ಸಚಿವ ಆರ್ ವಿ ದೇಶ್ ಪಾಂಡೆ ಭೇಟಿ, ವಿವಿಧ ಕಾಮಗಾರಿ ವೀಕ್ಷಣೆ

ಉಡುಪಿ: ಕರ್ನಾಟಕ ಸರಕಾರದ ಕಂದಾಯ ಸಚಿವ ಆರ್.ವಿ. ದೇಶ್ ಪಾಂಡೆ ಅವರು  ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಜಿಲ್ಲೆಯ ಹೆಜಮಾಡಿ, ಕಾಪು ಮೊದಲಾದ ಪ್ರದೇಶಗಳಿಗೆ ಭೇಟಿ‌ ನೀಡಿ‌ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಅಲ್ಲದೇ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮೊದಲ ಭಾರಿಗೆ ಭೇಟಿ ಅವರನ್ನು ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಸ್ವಾಗತಿಸಿದರು.

ಉಡುಪಿ ಪ್ರೈಮ್ ಸಂಸ್ಥೆಯಿಂದ ಬ್ಯಾಂಕಿಂಗ್‌ ನೇಮಕಾತಿ ಹುದ್ದೆಗೆ ದೈನಂದಿನ ತರಬೇತಿ

ಉಡುಪಿ: ಉಡುಪಿಯ ಪ್ರೈಮ್‌ ಸಂಸ್ಥೆಯು ಮುಂದೆ ಪ್ರಕಟಗೊಳ್ಳಲಿರುವ ಐಬಿಪಿಎಸ್‌, ಕರ್ಣಾಟಕ ಬ್ಯಾಂಕ್‌ ಕ್ಲರಿಕಲ್/ ಆಫೀಸರ್ ನೇಮಕಾತಿ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರ ನೇತೃತ್ವದಲ್ಲಿ ಜೂ. 29ರಿಂದ ನೂತನ ದೈನಂದಿನ ತರಬೇತಿ ತರಗತಿಗಳನ್ನು ಬ್ರಹ್ಮಗಿರಿ ಬಳಿಯ ಪ್ರೈಮ್‌ ಕೇಂದ್ರದಲ್ಲಿ ಆರಂಭಿಸಲಿದೆ. ಪ್ರತೀ ಸೋಮವಾರದಿಂದ ಶನಿವಾರ ಸಂಜೆ 5ರಿಂದ 6.30ರ ವರೆಗೆ, ಪ್ರತೀ ಭಾನುವಾರ ಮಧ್ಯಾಹ್ನ 3.30ರಿಂದ 6.30ರ ವರೆಗೆ ನಡೆಯಲಿರುವ 200 ಗಂಟೆಗಳ ಈ ತರಬೇತಿ ಬ್ಯಾಂಕಿಂಗ್‌ ಪರೀಕ್ಷೆಯ ಪಠ್ಯಕ್ರಮಗಳಿಗೆ ಅನುಗುಣವಾಗಿ ಪ್ರಿಲಿಮಿನರಿ ಪರೀಕ್ಷೆಯ ರೀಸನಿಂಗ್‌, ಮ್ಯಾಥ್ಸ್, ಇಂಗ್ಲಿಷ್‌, ಮೈನ್ಸ್ […]