ಉಡುಪಿ: ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆ: ಸಮಸ್ಯೆಗಳನ್ನು ನಿವಾರಿಸುವೆ, ಶಾಸಕರ ಭರವಸೆ
ಉಡುಪಿ: ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆಯು ಜೂ. 14 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ವಹಿಸಿದ್ದರು.ನರೇಗಾ ಯೋಜನೆಯಡಿ ಬಾವಿ ನಿರ್ಮಾಣಕ್ಕೆ ಐವತ್ತು ಸೆಂಟ್ಸ್ ಗಿಂತ ಹೆಚ್ಚು ವಿಸ್ತೀರ್ಣದಜಾಗ ಅವಶ್ಯಕ ವಿದ್ದು 50 ಸೆಂಟ್ಸ್ ಕಡಿಮೆ ಜಾಗ ಇರುವವರಿಗೂ ಕೂಡ ನರೇಗಾ ಯೋಜನೆಯಡಿ ಬಾವಿ ನಿರ್ಮಿಸುವ ಬಗ್ಗೆ ಸಾರ್ವಜನಿಕರಿಂದ ಮನವಿಗಳು ಬರುತ್ತಿದ್ದು ಈ ಬಗ್ಗೆ ಜಿಲ್ಲಾ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಪ್ರಸ್ಥಾಪಿಸುವುದಾಗಿ ಶಾಸಕರು ತಿಳಿಸಿದರು. […]
ಉಡುಪಿ ಎಸ್ಪಿ ಫೋನ್ ಇನ್ ಕಾರ್ಯಕ್ರಮ:ದೂರು ನೀಡಿ ಗಮನ ಸೆಳೆದ ಜಿಲ್ಲೆಯ ಸಾರ್ವಜನಿಕರು
ಉಡುಪಿ: ಜಿಲ್ಲಾಡಳಿತದ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಆರ್‌ಟಿಓ,ಲೋಕೋಪಯೋಗಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದರು.ಅವರು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್ ಇನ್‌ಕಾರ್ಯಕ್ರಮದಲ್ಲಿ ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಮಾತನಾಡಿದರು. ಅಪಘಾತಗಳ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ತೆಗೆದುಕೊಳ್ಳಬಹುದಾದಕ್ರಮಗಳ ಬಗ್ಗೆ ಪಟ್ಟಿ ಮಾಡಲಾಗಿದೆ. ಈ ವರದಿಯನ್ನು ಪ್ರಾಧಿಕಾರ ಹಾಗೂ ಆರ್‌ಟಿಓಗೆಸಲ್ಲಿಸಲಾಗಿದೆ. […]