ವಿದ್ಯಾರ್ಥಿ ಪಾಸುಗಳ ಮಾನ್ಯತಾ ಅವಧಿ ಜೂ. 30 ರವರೆಗೆ ವಿಸ್ತರಣೆ

ಉಡುಪಿ, ಜೂನ್ 11: 2019-20 ನೇ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಪ್ರಾರಂಭವಾಗಿರುವುದರಿಂದ, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ, ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳು, 2018-19 ನೇ ಸಾಲಿನಲ್ಲಿ ವಿತರಣೆಯಾಗಿರುವ ವಿದ್ಯಾರ್ಥಿ ಪಾಸುಗಳನ್ನು ತೋರಿಸಿ, ಜೂನ್ 30 ರವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು 2018-19 ನೇ ಸಾಲಿನ ವಿದ್ಯಾರ್ಥಿ ಪಾಸಿನ ಜೊತೆಗೆ ಪ್ರಸಕ್ತ ಸಾಲಿನ ಭೋಧನಾ ಶುಲ್ಕ ರಸೀದಿ ಅಥವಾ ಶಾಲಾ/ಕಾಲೇಜಿನ ಗುರುತಿನ ಚೀಟಿಯನ್ನು ತೋರಿಸಿ ಪಾಸಿನಲ್ಲಿ ನಮೂದಿಸಿರುವ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿರುತ್ತದೆ. ಶಾಲಾ […]

ಕಡ್ತಲ ಗ್ರಾ.ಪಂ: ಸ್ವಚ್ಛ ಮೇವ ಜಯತೆ ಆಂದೋಲನ

ಉಡುಪಿ, ಜೂನ್ 11: ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛ ಮೇವ ಜಯತೆ ಆಂದೋಲನ ಕಾರ್ಯಕ್ರಮವು ಮಂಗಳವಾರ ಸರಕಾರಿ ಪದವಿ ಪೂರ್ವ ಕಾಲೇಜು ದೊಂಡೇರಂಗಡಿಯಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಚಂದ್ರಿಕಾ ಕಿಣಿ ಉದ್ಘಾಟಿಸಿ, ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಫರ್ಜಾನ ಎಂ., ಸ್ವಚ್ಛ ಮೇವ ಜಯತೆ ಆಂದೋಲನದ ಬಗ್ಗೆ ವಿವರಣೆ ನೀಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ತೆಂಗಿನ ಸಸಿ ನೆಟ್ಟು ಸ್ವಚ್ಛ […]

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: 84 ಮಂದಿ ಗೈರು

ಉಡುಪಿ, ಜೂನ್ 11: ಜಿಲ್ಲೆಯಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಒಟ್ಟು 639 ಮಂದಿ ಪರೀಕ್ಷೆ ಬರೆದಿದ್ದಾರೆ. ಸಮಾಜಶಾಸ್ತ್ರ ಪರೀಕ್ಷೆಗೆ 61 ಮಂದಿ ನೊಂದಾಯಿಸಿದ್ದು, 50 ಮಂದಿ ಪರೀಕ್ಷೆ ಬರೆದಿದ್ದು, 11 ಮಂದಿ ಗೈರಾಗಿದ್ದಾರೆ. ಲೆಕ್ಕಶಾಸ್ತ್ರ (ಎನ್‍ಎಸ್) ಪರೀಕ್ಷೆಗೆ 246 ಮಂದಿ ಹೆಸರು ನೊಂದಾಯಿಸಿದ್ದು, 217 ಮಂದಿ ಪರೀಕ್ಷೆ ಬರೆದಿದ್ದು, 29 ಮಂದಿ ಗೈರಾಗಿದ್ದಾರೆ. ಲೆಕ್ಕಶಾಸ್ತ್ರ (ಓಎಸ್) ಪರೀಕ್ಷೆಗೆ 96 ಮಂದಿ ಹೆಸರು ನೊಂದಾಯಿಸಿದ್ದು, 77 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 19 ಮಂದಿ ಗೈರಾಗಿದ್ದಾರೆ. […]

ನಿಫಾ ವೈರಸ್ ಭಯ ಬೇಡ, ಎಚ್ಚರವಿರಲಿ: ಡಾ.ವಾಸುದೇವ

ಉಡುಪಿ, ಜೂನ್ 11: ನಿಫಾ ವೈರಸ್ ಕುರಿತಂತೆ ಜಿಲ್ಲೆಯ ಜನತೆ ಯಾವುದೇ ರೀತಿ ಆತಂಕ ಪಡುವ ಅಗತ್ಯ ಇಲ್ಲ. ಜ್ವರ ಅಥವಾ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಅವರು ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕಣ್ಗಾವಲು ಸಮಿತಿಯ ಅಂತರ್ ಇಲಾಖಾ ಸಮನ್ವಯ ಸಮಿತಿ […]

ಉಡುಪಿ ಹೆಲ್ಪ್ ಆ್ಯಪ್ ಬಿಡುಗಡೆಗೊಳಿಸಿದ ಸಚಿವೆ ಜಯಮಾಲಾ

ಉಡುಪಿ : ಜಿಲ್ಲಾ ಕೇಂದ್ರ ಉಡುಪಿ ನಗರದಲ್ಲಿ ಮಳೆಗಾಲದಲ್ಲಿ ಎದುರಾಗುವ ವಿವಿಧ ಪ್ರಾಕೃತಿಕ ಸಮಸ್ಯೆಗಳ ಕ್ಷಿಪ್ರ ನಿರ್ವಹಣೆಗೆ ಜಾರಿಗೆ ತಂದಿರುವ ಹೊಸ ಆ್ಯಪ್ “ಉಡುಪಿ ಹೆಲ್ಪ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಅವರು ಮಂಗಳವಾರ ಬಿಡುಗಡೆಗೊಳಿಸಿದರು.   ನಾಗರೀಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಉಡುಪಿ ಜಿಲ್ಲಾಡಳಿತ ಉತ್ತಮ ಕಾರ್ಯ ಕೈಗೊಂಡಿದೆ. ಮಳೆಗಾಲದಲ್ಲಿ ಹಲವಾರು ರೀತಿಯ ಪ್ರಾಕೃತಿಕ ಸಮಸ್ಯೆಗಳು ಎದುರಾಗುತ್ತಿವೆ. ಇವುಗಳಿಗೆ ಸ್ಪಂದನೆ ತುರ್ತು ಅಗತ್ಯವಾಗಿದೆ. ಉಡುಪಿ ಹೆಲ್ಪ್ ಆ್ಯಪ್ ಮೂಲಕ ಜಿಲ್ಲಾಡಳಿತವು ನಾಗರೀಕರಿಗೆ […]