ಸುವರ್ಣಗೋಪುರ ಶಿಖರಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವ:ಸ್ವರ್ಣಮಂತ್ರಹೋಮ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ತರ ಯೋಜನೆಯಾದ ಸುವರ್ಣಗೋಪುರ ಶಿಖರಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಧ್ವಸರೋವರದ ಭಾಗೀರಥೀ ಗುಡಿಯ ಮುಂಭಾಗದಲ್ಲಿ ಸ್ವರ್ಣಮಂತ್ರಹೋಮ ನಡೆಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
ಮುಂಬೈ: ಹಲವು ವರ್ಷಗಳ ಕಾಲ ಟೀಂ ಇಂಡಿಯಾದಲ್ಲಿ ಆಡಿದ, ಟಿ-20 ಕ್ರಿಕೆಟ್‍ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ 37ರ ಹರೆಯದ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ. ಯುವರಾಜ್ ಸೋಮವಾರ ಮುಂಬಯಿ ನ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. 2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಸದ್ಯ ವಿಶ್ವಕಪ್ ನಡೆಯುತ್ತಿರುವ ಸಂದರ್ಭ ದಲ್ಲೇ ನಿವೃತ್ತಿ ಘೋಷಿಸಿದ್ದಾರೆ. 2019 ರ ಐಸಿಸಿ […]
ಶ್ರೀ ಕೃಷ್ಣ ಮಠದಲ್ಲಿ ಚೂರ್ಣೋತ್ಸವ ಹಾಗೂ ಅವಭ್ರತ ಉತ್ಸವ
ಉಡುಪಿ: ಶ್ರೀ ಕೃಷ್ಣ ಮಠದಲ್ಲಿ,ಪರ್ಯಾಯ ಶ್ರೀ ಪಲಿಮಾರು ಮಠದ ಮಹತ್ತರ ಯೋಜನೆಯಾದ ಸುವರ್ಣಗೋಪುರ, ಶಿಖರಪ್ರತಿಷ್ಠಾ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿ ನಡೆದ ಸಪ್ತೋತ್ಸವದ ಕೊನೆಯ ದಿನದಂದು ಚೂರ್ಣೋತ್ಸವ ಹಾಗೂ ಅವಭ್ರತ ನಡೆಯಿತು. ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪಲಿಮಾರು ಕಿರಿಯ ಮಠಾಧೀಶರಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಭಕ್ತರೊಂದಿಗೆ ಬ್ರಹ್ಮರಥವನ್ನು ಎಳೆದು ಭಾಗವಹಿಸಿದರು.
ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ನೂತನ ಸಮಿತಿ ರಚನೆ. ಮಂಜಪ್ಪ ಗೌಡ ಅಧ್ಯಕ್ಷರಾಗಿ ಆಯ್ಕೆ
ಕಾರ್ಕಳ: ಜಿಲ್ಲಾ ಮಲೆಕುಡಿಯ ಸಂಘದ 2019 -20 ಸಾಲಿನ ನೂತನ ಪದಾಧಿಕಾರಿಗಳ ಸಮಿತಿ ರಚನಾ ಸಭೆಯು ಸಂಘದ ಕೇಂದ್ರ ಕಚೇರಿ ಕಾರ್ಕಳದ ಪೇರಡ್ಕದಲ್ಲಿ ಜಿಲ್ಲಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು ಅವರ ಅಧ್ಯಕ್ಷತೆಯಲ್ಲಿ ಜರಗಿತು. ನೂತನ ಅಧ್ಯಕ್ಷರಾಗಿ ಮಂಜಪ್ಪ ಗೌಡ ನೂರಾಳ್ ಬೆಟ್ಟು, ಉಪಾಧ್ಯಕ್ಷರಾಗಿ ಸುಂದರ ಗೌಡ ಮುದ್ರಾಡಿ, ಗೋಪಾಲ ಗೌಡ ಎತ್ತಲ್ ಗುಡ್ಡೆ, ಪ್ರ.ಕಾರ್ಯದರ್ಶಿಯಾಗಿ ಸಾಧು ಗೌಡ ನಾರ್ಜೆ, ಸಹ ಕಾರ್ಯದರ್ಶಿಯಾಗಿ ಕಾವ್ಯ ಶಿರ್ಲಾಲು, ಕೋಶಾಧಿಕಾರಿಯಾಗಿ ವಿಷ್ಣುಮೂರ್ತಿ ಕೆರ್ವಾಶೆ, ಸಂಘಟನಾ ಕಾರ್ಯದರ್ಶಿಗಳಾಗಿ ಭಾಸ್ಕರ ಗೌಡ ಕೆರ್ವಾಶೆ, ವಿಜಯ್ […]
ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶ: ಹಿರಿಯ ನಾಟಕಕಾರ ಇನ್ನು ನೆನಪು ಮಾತ್ರ
ಬೆಂಗಳೂರು: ಹಿರಿಯ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ (81) ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ನಟ ಹಾಗೂ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕನ್ನಡಕ್ಕೆ ೭ ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟಿದ್ದ ಕಾರ್ನಾಡ್ ಅವರು ಹಯವದನ, ಯಯಾತಿ, ತುಘಲಕ್ ಸೇರಿದಂತೆ ಹಲವು ನಾಟಕಗಳನ್ನು ರಚಿಸಿದ್ದರು. ಭಾರತೀಯ ಚಿತ್ರರಂಗದಲ್ಲಿಯೂ ಉತ್ತಮ ನಟರಾಗಿ ಗುರುತಿಸಿಕೊಂಡಿದ್ದರು. ಶಂಕರ್ ನಾಗ್ ನಿರ್ಧೇಶನದ […]