ಕಾರ್ಕಳ: ಜಿಲ್ಲಾ ಮಲೆಕುಡಿಯ ಸಂಘದ 2019 -20 ಸಾಲಿನ ನೂತನ ಪದಾಧಿಕಾರಿಗಳ ಸಮಿತಿ ರಚನಾ ಸಭೆಯು ಸಂಘದ ಕೇಂದ್ರ ಕಚೇರಿ ಕಾರ್ಕಳದ ಪೇರಡ್ಕದಲ್ಲಿ ಜಿಲ್ಲಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು ಅವರ ಅಧ್ಯಕ್ಷತೆಯಲ್ಲಿ ಜರಗಿತು.
ನೂತನ ಅಧ್ಯಕ್ಷರಾಗಿ ಮಂಜಪ್ಪ ಗೌಡ ನೂರಾಳ್ ಬೆಟ್ಟು, ಉಪಾಧ್ಯಕ್ಷರಾಗಿ ಸುಂದರ ಗೌಡ ಮುದ್ರಾಡಿ, ಗೋಪಾಲ ಗೌಡ ಎತ್ತಲ್ ಗುಡ್ಡೆ, ಪ್ರ.ಕಾರ್ಯದರ್ಶಿಯಾಗಿ ಸಾಧು ಗೌಡ ನಾರ್ಜೆ, ಸಹ ಕಾರ್ಯದರ್ಶಿಯಾಗಿ ಕಾವ್ಯ ಶಿರ್ಲಾಲು, ಕೋಶಾಧಿಕಾರಿಯಾಗಿ ವಿಷ್ಣುಮೂರ್ತಿ ಕೆರ್ವಾಶೆ, ಸಂಘಟನಾ ಕಾರ್ಯದರ್ಶಿಗಳಾಗಿ ಭಾಸ್ಕರ ಗೌಡ ಕೆರ್ವಾಶೆ, ವಿಜಯ್ ಗೌಡ ಈದು, ಪ್ರಕಾಶ್ ಗೌಡ ಅಂಡಾರು, ವಕ್ತಾರರಾಗಿ ಸುಂದರ ಗೌಡ ರೆಂಜಾಳ, ಗೌರವ ಸಲಹೆಗಾರರಾಗಿ ಸುಧಾಕರ ಗೌಡ ನಾಡ್ಪಾಲು, ವೀರಪ್ಪ ಗೌಡ ಪೇರಡ್ಕ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೇಖರ ಗೌಡ ಕೂಡ್ಲು, ವಸಂತ ಕಬ್ಬಿನಾಲೆ, ಪ್ರಶಾಂತ್ ಕುಂದಾಪುರ, ವಿನಯ್ ಗೌಡ ಬಲ್ಲಾಡಿ, ರಾಜು ಗೌಡ ನಾರ್ಜೆ, ವೀಣಾ ಶಿರ್ಲಾಲು, ಅಕ್ಷತಾ ಕೆರ್ವಾಶೆ, ನಾರ್ಣ ಮಾಳ, ಪುಪ್ಪ ಪೇರಡ್ಕ, ಪ್ರವೀಣ್ ನಲ್ಲೂರು, ಹರೀಶ್ ಹುಕ್ರಟ್ಟೆ, ನವೀನ್ ತೆಳ್ಳಾರು, ಸಂತೋಷ್ ಈದು, ನವೀನ್ ನೂರಾಳ್ ಬೆಟ್ಟು, ಮೋಹಿನಿ ಕಬ್ಬಿನಾಲೆ, ಅರುಣ್ ರೆಂಜಾಳ, ಪಾರ್ವತಿ ಕಬ್ಬಿನಾಲೆ, ದಿನೇಶ್ ಗೌಡ ಈದು, ಸುಜಾತ ಕಬ್ಬಿನಾಲೆ, ದುಗ್ಗಪ್ಪ ಸೂಡ, ಗೌರೀಶ್ ಕಾರ್ಕಳ ಆಯ್ಕೆಯಾದರು.
ಈ ಸಂದರ್ಭದಲ್ಲಿ ರಾಜ್ಯ ಪ್ರ. ಕಾರ್ಯದರ್ಶಿ ಶ್ರೀಧರ ಗೌಡ ಈದು, ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಗೌಡ ಈದು, ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಉಪಾಧ್ಯಕ್ಷ ರಘುರಾಮ ಗೌಡ ಕಬ್ಬಿನಾಲೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ ನೂರಾಳ್ ಬೆಟ್ಟು, ಕೋಶಾಧಿಕಾರಿ ರಂಜಿತ್ ಶಿರ್ಲಾಲು, ಕಾರ್ಕಳ ತಾಲೂಕು ಸಮಿತಿ ಅಧ್ಯಕ್ಷ ಶೇಖರ್ ಗೌಡ ಮಾಳ, ಹೆಬ್ರಿ ತಾಲೂಕು ಸಮಿತಿ ಅಧ್ಯಕ್ಷ ಉದಯ್ ಗೌಡ ಮುದ್ರಾಡಿ, ಕಾರ್ಕಳ ತಾಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶೋಕ ಗೌಡ ಕೆರ್ವಾಶೆ ಹಾಗೂ ತಾಲೂಕು ಸಮಿತಿ, ಗ್ರಾಮ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.