ನಮ ಬಿರುವೆರ್ ಹಿರಿಯಡ್ಕದಿಂದ ಸಹಾಯಧನ ವಿತರಣೆ
ಉಡುಪಿ: ಕಳೆದ ಕೆಲವು ದಿನಗಳ ಹಿಂದೆ ಬಸ್ಸ್ ಅಪಘಾತದಲ್ಲಿ ತನ್ನ ಬಲ ಕೈ ಕಳೆದುಕೊಂಡ ಉಡುಪಿ ತಾಲೂಕಿನ ಹಿರಿಯಡಕ ಅಂಜಾರು ಗ್ರಾಮದ ಬಾಕ್ಯಾರ್ ಕಟ್ಟ ನಿವಾಸಿ ಭಾಸ್ಕರ ಶೆಟ್ಟಿ ಹಾಗೂ ಗುಲಾಬಿ ದಂಪತಿಯ ಪುತ್ರ ಅಜಿತ್ ಶೆಟ್ಟಿ ಅವರಿಗೆ ನಮ ಬಿರುವೆರ್ ಹಿರಿಯಡ್ಕ ಸಂಘಟನೆಯ ವತಿಯಿಂದ ಸಹಾಯಧನವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಸುಂದರ ಪೂಜಾರಿ ಗಂಪ, ಅಧ್ಯಕ್ಷ ಶೇಖರ ಪೂಜಾರಿ, ಪ್ರ. ಕಾರ್ಯದರ್ಶಿ ರವಿ ಎಸ್. ಪೂಜಾರಿ, ಕೋಶಾಧಿಕಾರಗಳಾದ ಪ್ರದೀಪ್ ಪೂಜಾರಿ, ವಿನುತ್ ಪೂಜಾರಿ, […]
ಡ್ರೀಮ್ ಕ್ಯಾಚುರ್ಸ್ ಇವೆಂಟ್ಸ್ ಪ್ರಸ್ತುತ ಪಡಿಸುವ ಆರ್ಟಿಸ್ತ್ರೀ 2019
ಮಹಿಳೆಯರು ಮನಸ್ಸು ಮಾಡಿದರೆ ಜಗವನ್ನೇ ಗೆಲ್ಲಲು ಸಾಧ್ಯ. ಮಹಿಳೆಗೆ ಹಲವಾರು ಕೆಲಸಗಳನ್ನು ಒಂದೇ ಸಲ ಮಾಡುವ ಸಾಮರ್ಥ್ಯ ಇದೆ. ಕುಟುಂಬದ ಯೋಗಕ್ಷೇಮ ಹಾಗೂ ಕೆಲಸವನ್ನು ಏಕಕಾಲಕ್ಕೆ ಮಾಡಲು ಮಹಿಳೆಗೆ ಸಾಧ್ಯ, ಈ ನಡುವೆಯೂ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎನ್ನುವವರಿಗೆ ಸೂಕ್ತ ವೇದಿಕೆ ಹಾಗು ಅಂತಹ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೀಗ ಕರಾವಳಿಯಲ್ಲೇ ಪ್ರಪ್ರಥಮ ಭಾರಿಗೆ ಮ್ಯೂಸಿಷಿಯನ್, ಡ್ಯಾನ್ಸರ್ಸ್, ಸಿಂಗರ್ಸ್, ರಾಪ್ಪೆರ್ಸ್, ಆಕ್ಟರ್ಸ್, ಆರ್ಟಿಸ್ಟ್, ಕಾಮೆಡಿಯನ್ಸ್, ಮ್ಯಾಜಿಷಿಯನ್ಸ್, ಇತ್ಯಾದಿ ವಿಶೇಷ ಪ್ರತಿಭೆಯ ಯುವತಿಯರಿಗೆ ಆರ್ಟಿಸ್ತ್ರೀ; 2019 […]
ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ: ಖಾದರ್
ಮಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಪ್ರತ್ಯೇಕವಾದ ಕೈಗಾರಿಕಾ ಟೌನ್‌ಶಿಪ್ ಪ್ರಾಧಿಕಾರ ರಚಿಸಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಂಗಳವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಈ ಪ್ರಾಧಿಕಾರವನ್ನು ರಚಿಸಲಾಗುವುದು. ರಾಜ್ಯದ ಮುನಿಸಿಪಲ್ ಕಾಯಿದೆಗೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ತಂದು ಈ ಪ್ರಾಧಿಕಾರ ರಚಿಸಲಾಗುವುದು ಎಂದರು. ದಕ್ಷಿಣ ಕನ್ನಡ ಜಿಲೆಯಲ್ಲಿ ಅಕ್ರಮ ಮರಳು ಸಾಗಾಟದ ವಿರುದ್ಧ […]
ಕುಂದಾಪುರ:ದಲಿತ ಮುಖಂಡನ ನಿಂದನೆ ಖಂಡಿಸಿ ದ.ಸಂ.ಸ ವತಿಯಿಂದ ಪ್ರತಿಭಟನೆ
ಕುಂದಾಪುರ: ಮೂಲ ನಿವಾಸಿಗಳ ಹೆಸರಲ್ಲಿ ಪತ್ರಿಕಾ ಪ್ರಚಾರ ಪಡೆದು ಬಿಳಿ ಅಂಗಿ ಧರಿಸಿ ಶೋಕಿ ಮಾಡುತ್ತಾರೆ ಎಂದು ದಲಿತ ಮುಖಂಡ ವಾಸುದೇವ ಮುದೂರು ಅವರನ್ನು ಜಡ್ಕಲ್ ಗ್ರಾಪಂ ಅಧ್ಯಕ್ಷರು ನಿಂದಿಸಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಡ್ಕಲ್ ಗ್ರಾಮಪಂಚಾಯತಿ ಎದುರು ಸೋಮವಾರ ಬೆಳಿಗ್ಗೆ ಜಮಾಯಿಸಿ ಆಕ್ರೋಷ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರತಿಭಟನೆ ನಡೆಸಲು ಮುಂದಾದ ದಲಿತ ನಾಯಕರನ್ನು ಮನವೊಲಿಸಿಸಲು ಖುದ್ದು ಕುಂದಾಪುರ ಡಿವೈಎಸ್ಪಿ ಬಿ.ಪಿ, ದಿನೇಶ್ ಕುಮಾರ್ ಗ್ರಾ.ಪಂ.ಗೆ […]
ಸಂಸದೆ ಶೋಭಾ ಕರಂದ್ಲಾಜೆ ಅವರ ನೂತನ ಕಚೇರಿ ಉದ್ಘಾಟನೆ
ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರ ನೂತನ ಕಚೇರಿ ಮಣಿಪಾಲ ರಜತಾದ್ರಿಯ ಜಿಲ್ಲಾಡಳಿತ ಸಂಕೀರ್ಣದಲ್ಲಿ ಸೋಮವಾರ ಆರಂಭಗೊಂಡಿತು. ಪಕ್ಷದ ಹಿರಿಯ ಮುಖಂಡ ಸೋಮಶೇಖರ್ ಭಟ್ ಕಚೇರಿಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ಅವರು. ಕ್ಷೇತ್ರಕ್ಕೆಮಂಜೂರಾದ ಸಂಸ್ಥೆಗಳಿಗೆ ಪೂರ್ಣಪ್ರಮಾಣದ ಕಟ್ಟಡ ನಿರ್ಮಿಸಲಾಗುವುದು. ಕೊಂಕಣ ರೈಲ್ವೆಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮವಹಿಸಲಾಗುವುದು. ಕೋಡಿಕನ್ಯಾಣ, ಹೆಜಮಾಡಿಯಲ್ಲಿ ಪೂರ್ಣ ಪ್ರಮಾಣದ ಬಂದರನ್ನುನಿರ್ಮಿಸಲಾಗುವುದು ಎಂದರು.ಮುಂದಿನ ಐದು ವರ್ಷಗಳ ಕಾಲ ಪ್ರತಿ ಸೋಮವಾರ ಉಡುಪಿ ಹಾಗೂ […]