ಪೇಯಿಂಗ್ ಗೆಸ್ಟ್ ಗಳಿಗೆ ಹೊಸ ನೀತಿ‌-ನಿಯಮ- ಯು.ಟಿ. ಖಾದರ್

ಮಂಗಳೂರು: ನಗರಾಭಿವೃದ್ಧಿ ಇಲಾಖೆ ಮೂಲಕ ಪೇಯಿಂಗ್ ಗೆಸ್ಟ್ ಗಳಿಗೆ ಹೊಸ ನೀತಿ ನಿಯಮ ತರಲಾಗುವುದು. ಪಿಜಿಗಳಲ್ಲಿ ಮೂಲಭೂತ ಸೌಕರ್ಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಇದರ ಉದ್ದೇಶ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಬುಧವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ‌ ಮಾತನಾಡಿದ ಅವರು, ಪಿಜಿಗಳು ಯಾವಾಗ, ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ನಿಯಮ ಒಳಗೊಂಡಿದೆ. ಪಿಜಿ ಯಾವ ರೀತಿ ಇರಬೇಕು, ಮಹಿಳೆಯರಿಗೆ ಪಿಜಿಗಳಲ್ಲಿ ನೀಡುವ ಭದ್ರತೆ ಮುಂತಾದವುಗಳನ್ನು ಈ ನಿಯಮದಲ್ಲಿ ತರಲಾಗುವುದು. ಇದರರಿಂದ ಪಿಜಿಯಲ್ಲಿರುವ ಮಹಿಳೆಯರಿಗೂ […]

ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ನಿರತ ಓರ್ವನ‌ ಬಂಧನ

ಮಂಗಳೂರು: ವಿಶ್ವಕಪ್ ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಓರ್ವನನ್ನು ಮಂಗಳೂರು ಅಪರಾಧ ಪತ್ತೆ ದಳ‌ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮಂಗಳೂರು ನಿವಾಸಿ ಕೀರ್ತಿರಾಜ್ ಬಂಧಿತ ಆರೋಪಿಯಾಗಿದ್ದು, ಈತನಿಂದ 7 ಲ.ರೂ.‌ನಗದು, 5 ಮೊಬೈಲ್ ಹಾಗೂ‌ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಬೆಟ್ಟಿಂಗ್ ದಂಧೆಯಲ್ಲಿ‌ ತೊಡಗಿರುವ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ವಿಶ್ವಕಪ್ ಪ್ರಾರಂಭದ ಬಳಿಕ ಬೆಟ್ಟಿಂಗ್ ದಂಧೆಗೆ ಸಂಬಂಧಿಸಿದಂತೆ ದಾಳಿ ನಡೆಸಿರುವ 2ನೇ ಪ್ರಕರಣ ಇದಾಗಿದೆ. ಕಳೆದ ಐಪಿಎಲ್ ಪಂದ್ಯದ […]