ರಂಗಶಿಕ್ಷಣ ತರಬೇತಿ: ಅರ್ಜಿ ಆಹ್ವಾನ
ಉಡುಪಿ, ಜೂನ್ 1: ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ರಂಗಾಯಣವು ಭಾರತೀಯ ರಂಗಶಿಕ್ಷಣ ಕೇಂದ್ರ -“ರಂಗ ಶಾಲೆ” ಯನ್ನು ಕಳೆದ ಒಂಬತ್ತು ವರ್ಷಗಳಿಂದ ನಡೆಸುತ್ತಿದ್ದು, ಈ ಕೋರ್ಸಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆಯನ್ನು ನೀಡಿದೆ. ಈ ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೋಮಾ’ ಕೋರ್ಸಿನ 2019-20ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಂಗಶಾಲೆಗೆ ಸೇರಬಯಸುವ ವಿದ್ಯಾರ್ಥಿಗಳ ಕನಿಷ್ಠ ವಿದ್ಯಾರ್ಹತೆ ದ್ವಿತೀಯ ಪಿ.ಯು.ಸಿ. ಆಗಿರಬೇಕು. 18 ರಿಂದ 28 ವರ್ಷದೊಳಗಿನವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಉಚಿತ […]
ಮನೆ ನಿರ್ಮಾಣಕ್ಕೆ ಸಹಾಯಧನ
ಉಡುಪಿ, ಜೂನ್ 1: 2018-19 ನೇ ಸಾಲಿನ ವಾಜಪೇಯಿ ನಗರ ವಸತಿ ಯೋಜನೆಯಡಿ 120 ಗುರಿಯನ್ನು ನಿಗಧಿಪಡಿಸಲಾಗಿದ್ದು, ಹೊಸ ಮನೆ ನಿರ್ಮಿಸಲು ಸಹಾಯಧನಕ್ಕಾಗಿ ಉಡುಪಿ ನಗರಸಭಾ ವ್ಯಾಪ್ತಿಯ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತರು ಮನೆ ನಿರ್ಮಿಸಲು ಸಹಾಯಧನ ಪಡೆಯಬಹುದಾಗಿದೆ. ಆಸಕ್ತರು ಸಂಬಂಧಿಸಿದ ಸೂಕ್ತ ದಾಖಲೆಗಳೊಂದಿಗೆ ಜೂನ್ 30 ರ ಒಳಗೆ ನಗರಸಭಾ ಕಚೇರಿಗೆ ಅರ್ಜಿ ಸಲ್ಲಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ನಗರಸಭಾ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಬ್ರಹ್ಮಾವರ: ಕೃಷಿ ಅಭಿಯಾನ ಕಾರ್ಯಕ್ರಮ
ಉಡುಪಿ, ಜೂನ್ 1: ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಬ್ರಹ್ಮಾವರ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮವು ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಘೋಷವಾಕ್ಯದಡಿಯಲ್ಲಿ ಜೂನ್ 12 ರಂದು ಬೆಳಗ್ಗೆ 10.30 ಕ್ಕೆ ಕೊಕ್ಕರ್ಣೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿದ್ದು, ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕೃಷ್ಣಮಠ: ವೈಭವದ ಶೋಭಾಯಾತ್ರೆ
ಉಡುಪಿ:ಕೃಷ್ಣಮಠದ ಗರ್ಭಗುಡಿಗೆ ಸುವರ್ಣಗೋಪುರ ಸಮರ್ಪಿಸುವ ಹಿನ್ನೆಲೆಯಲ್ಲಿ ನಗರದಜೋಡುಕಟ್ಟೆಯಿಂದ ಕೃಷ್ಣಮಠದವರೆಗೆ ಶನಿವಾರ ವೈಭವದ ಶೋಭಾಯಾತ್ರೆ ನಡೆಯಿತು.ಜಿಲ್ಲೆಯ ವಿವಿಧ ಭಜನಾ ಮಂಡಳಿಯ ತಂಡಗಳು, ಜಾನಪದ ತಂಡಗಳು, ಸಾಂಸ್ಕೃತಿಕ ಕಲಾ ತಂಡಗಳು, ಟ್ಯಾಬ್ಲೊ ಮೆರವಣಿಗೆಗೆ ಚಂಡೆ, ಡೋಲು ವಾದನ ಹಾಗೂಸ್ಥಳೀಯ ಸಾಂಸ್ಕೃತಿಕ ತಂಡಗಳ ಜಾನಪದ ನೃತ್ಯ ಗಮನ ಸೆಳೆಯಿತು. ವಿಶ್ವೇಶತೀರ್ಥ ಸ್ವಾಮೀಜಿ ಶುಭ ಹಾರೈಸಿದರು.ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆನಳಿನಿ ಪ್ರದೀಪ್ ರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,ಬಿಜೆಪಿ ಮುಖಂಡರಾದ ಉದಯಕುಮಾರ್ ಶೆಟ್ಟಿ, ಯಶ್‌ಪಾಲ್ […]
ಹೊಲಿಗೆ ತರಬೇತಿ: ಅರ್ಜಿ ಆಹ್ವಾನ
ಉಡುಪಿ, ಜೂನ್ 1: ಉಡುಪಿ ತಾಲೂಕು ಕೇಂದ್ರದ ಬನ್ನಂಜೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ ಹೊಲಿಗೆ ತರಬೇತಿ ಕೇಂದ್ರವನ್ನು ನಡೆಸಲಾಗುತ್ತಿದ್ದು, ಕೇಂದ್ರದಲ್ಲಿ ತರಬೇತಿ ಪಡೆಯಲು ಕನಿಷ್ಟ 7 ನೇ ತರಗತಿ ಉತ್ತೀರ್ಣರಾದ ಪ್ರವರ್ಗ 1, 2ಎ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರವರ್ಗ 1 ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ, ಪ್ರವರ್ಗ 2ಎ, 3ಎ, 3ಬಿ ಗೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ […]