ಶಿಶುಮರಣ ಹೆಚ್ಚಳ: ಸಮಗ್ರ ವರದಿಗೆ ಡಿಸಿ ಸೂಚನೆ
ಉಡುಪಿ, ಮೇ 29: ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಶಿಶು ಮರಣಕ್ಕೆ ಸಂಬಂಧಿಸಿ ಯಾವ ಪ್ರದೇಶದಲ್ಲಿ ಹಾಗೂ ಯಾವ ಕಾರಣಕ್ಕೆ ಶಿಶುಮರಣ ಹೆಚ್ಚಾಗಿದೆ ಎಂಬುದರ ಬಗ್ಗೆ ಸಮಗ್ರ ವರದಿ ನೀಡಲು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಘಟಕಗಳ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 2019ರ ಏಪ್ರಿಲ್ ತಿಂಗಳೊಂದರಲ್ಲೇ ಒಂದು ತಿಂಗಳ 7 ಶಿಶುಗಳು ವಿವಿಧ ಆರೋಗ್ಯ ಕಾರಣಗಳಿಂದ […]
ಕ್ರಿಕೆಟ್ ತವರಿನಲ್ಲಿ ನಾಳೆಯಿಂದ 12ನೇ ವಿಶ್ವಕಪ್ ಟೂರ್ನಿ ಮೇ.30: ಇಂಗ್ಲೆಂಡ್-ದ.ಆಫ್ರಿಕಾ ಮೊದಲ ಪಂದ್ಯ
ಸ್ಪೋಟ್ಸ್ ಬೀಟ್: ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ)ಯ 2019ರ 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿ ಮೇ. 30ರಿಂದ ಅದ್ದೂರಿಯಾಗಿ ಪ್ರಾರಂಭಗೊಳ್ಳಲಿದೆ. ಈ ಭಾರೀ ಇಂಗ್ಲೆಂಡ್ ನ ಆತಿಥ್ಯ ದಲ್ಲಿ ವಿಶ್ವಕಪ್ ನಡಯಲಿದ್ದು, ಮೊದಲ ಪಂದ್ಯದಲ್ಲಿ ಬಲಿಷ್ಟ ತಂಡಗಳಾದ ಅತಿಥೇಯ ಇಂಗ್ಲೆಂಡ್ ಹಾಗೂ ದ.ಆಫ್ರಿಕಾ ತಂಡಗಳು ಮುಖಾಮುಖಿ ಯಾಗಲಿವೆ. 2019ರ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾಗವಹಿಸುವ 10 ತಂಡಗಳು ಇಂಗ್ಲೆಂಡ್ ನಲ್ಲಿಬೀಡು ಬಿಟ್ಟಿವೆ. ಅಭ್ಯಾಸ ಪಂದ್ಯಗಳು ಈಗಾಗಲೇ ನಡೆದಿವೆ. ಗುರುವಾರದಿಂದ ಲೀಗ್ ಹಂತದ […]