ಮೇ.31-ಜೂ.10: ಉಡುಪಿ ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೋತ್ಸವ, ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಪಲಿಮಾರು ಶ್ರೀಗಳ ಹೇಳಿಕೆ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣೋತ್ಸವ ಶಿಖರ ಪ್ರತಿಷ್ಠಾ, ಬ್ರಹ್ಮಕಲಶಾಭಿಷೇಕ ಮಹೋತ್ಸವದ ಕಾರ್ಯಕ್ರಮಗಳು ಮೇ.31ರಿಂದ ಮೊದಲ್ಗೊಂಡು ಜೂನ್.10ರ ವರೆಗೆ ನಡೆಯಲಿದೆ ಎಂದು ಪಲಿಮಾರು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೂನ್.1ರಂದು ಸಂಜೆ 4 ಗಂಟೆಗೆ ಜೋಡುಕಟ್ಟೆಯಿಂದ ಉಡುಪಿ ಶ್ರೀಕೃಷ್ಣಮಠದ ವರೆಗೆ ಬೃಹತ್ ಶೋಭಯಾತ್ರೆ ನಡೆಯಲಿದೆ. ಒಟ್ಟು 100ಕೆ.ಜಿಗಿಂತಲೂ ಅಧಿಕ ಸುವರ್ಣ, 800 ಕೆಜಿ ಬೆಳ್ಳಿ, 300 ಕೆಜಿ ತಾಮ್ರದ ಫಲಕಗಳಿಂದ ಕೂಡಿದ ಗೋಪುರವನ್ನು ಮಧ್ವ ಪೀಠಾಧಿಪತಿಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಸಮರ್ಪಿಸಲಾಗುತ್ತದೆ […]
ಸ್ವಾರ್ಥಕ್ಕಾಗಿ ಸಮಾಜಸೇವೆ ಮಾಡುತ್ತಿಲ್ಲ: ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಜಿ. ಶಂಕರ್ ಗುಡುಗು
ಕುಂದಾಪುರ: ಕಳೆದ ಇಪ್ಪತ್ತು ವರ್ಷಗಳಿಂದಲೂ ಸಮಾಜಸೇವೆ ಮಾಡುತ್ತಾ ಬಂದಿದ್ದೇನೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಬದುಕುತ್ತಿದ್ದು, ಸಂಕಷ್ಟದಲ್ಲಿರುವ ಎಲ್ಲಾ ಸಮಾಜದವರಿಗೂ ಸ್ಪಂದಿಸಿದ್ದೇನೆ. ಸ್ವಾರ್ಥಕ್ಕಾಗಿ ನಾನು ಸಮಾಜ ಸೇವೆ ಮಾಡುತ್ತಿಲ್ಲ. ಈ ಬಗ್ಗೆ ಯಾವುದೇ ವೇದಿಕೆಯಲ್ಲೂ ಸಷ್ಟಪಡಿಸಲು ನಾನು ತಯಾರಾಗಿದ್ದೇನೆ ಎಂದು ನಾಡೋಜ ಡಾ. ಜಿ.ಶಂಕರ್ ಸಂಸದೆ ಶೋಭಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಹಾಗೂ ಜಿಲ್ಲಾ ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಕುಂದಾಪುರ ರೋಟರಿ ಕಲಾ ಮಂದಿರದಲ್ಲಿ ಮಂಗಳವಾರ […]
“ನಾನೂ ಪೋಲಿಸ್ ಅಧಿಕಾರಿ ಆಗೇ ಆಗ್ತೇನೆ”ಎಂದು ಹೊರಟ ಆ ಹಳ್ಳಿ ಹುಡುಗ ಈಗ ಪೊಲೀಸ್ ಹುದ್ದೆಗೆ ರಾಜೀನಾಮೆ ಕೊಟ್ಟೂ ಆಯಿತು..
ತನ್ನ ತಂದೆಯ ಮೇಲೆ ಅದ್ಯಾರೋ ಸುಳ್ಳು ದೂರು ಕೊಟ್ಟು ಆತನಿಗೆ ಪೋಲಿಸರು ಎರ್ರಾಬಿರ್ರಿ ಎಳೆದುಕೊಂಡು ಹೋಗಿ ಅಮಾನವೀಯ ಶಿಕ್ಷೆ ಕೊಟ್ಟು ಯಾವ ದಯೆ ದಾಕ್ಷಿಣ್ಯವೂ ಇಲ್ಲದೇ ಆತನನ್ನು ಮನ ಬಂದಂತೆ ಜಡಿದಾಗ, ಏನೂ ತಪ್ಪನ್ನೇ ಮಾಡದ ತನ್ನ ಅಪ್ಪ ಹೀಗೆಲ್ಲಾ ಜೈಲಿನಲ್ಲಿ ಕೊಳೆಯುತ್ತಿರುವುದನ್ನು ನೋಡಿ ಆ ಹುಡುಗ ಪೂರ್ತಿ ಉರಿದೇ ಹೋದ. ಅವನ ಎಳೆ ಕಣ್ಣುಗಳಲ್ಲಿ ಆ ದಾರುಣ ಚಿತ್ರಗಳು ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿತು. ಪೋಲೀಸ್ ವ್ಯವಸ್ಥೆಯ ಬಗ್ಗೆ ಆಕ್ರೋಶ ಅವನಲ್ಲಿ ಹೆಪ್ಪುಗಟ್ಟುತ್ತಲೇ ಹೋಯಿತು. ಆವತ್ತಿನಿಂದಲೇ ಅವನು […]
ಭ್ರಷ್ಟರನ್ನು ಬೆನ್ನಟ್ಟಲೆಂದೇ ಪೊಲೀಸ್ ಅಧಿಕಾರಿಯಾದ ಹಳ್ಳಿ ಹೈದ ಅಣ್ಣಾಮಲೈ ರಾಜೀನಾಮೆ: ಕೊಲೆ, ದರೋಡೆ ಎಲ್ಲಾ ನೋಡಿ ಸಾಕಾಗಿದೆ ಎಂದ ಪೊಲೀಸ್ ಅಧಿಕಾರಿ
ರಾಜ್ಯ: ಖಡಕ್ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಕೊನೆಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ತಮ್ಮ ಹುದ್ದೆ ರಾಜೀನಾಮೆ ಕೊಟ್ಟು ಅವರು ರಾಜಕೀಯಕ್ಕೆ ಸೇರಲಿದ್ದಾರೆ ಎನ್ನುವ ಗುಸುಗುಸು ಮಾತುಗಳನ್ನು ಕಳೆದೆರಡು ದಿನಗಳಿಂದ ಮತ್ತೆ ಮತ್ತೆ ಕೇಳಿ ಬರುತ್ತಲೇ ಇತ್ತು ಇದೀಗ ಆ ಮಾತಿಗೆ ಪುಷ್ಟಿ ದೊರೆತಿದ್ದು ಅಣ್ಣಾಮಲೈ ಅವರು ಡಿಜಿ ಹಾಗೂ ಐಜಿಪಿ ನೀಲಮಣಿ ರಾಜುಗೆ ಇಂದೇ ರಾಜೀನಾಮೆ ಪತ್ರ ರವಾನಿಸಿದ್ದು, ಆ ಪತ್ರ ರಾಜ್ಯ […]
ಕೋಟೇಶ್ವರ ಗಾಣಿಗ ಯುವ ಸಂಘಟನೆ: ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ, ಕೊಡೆ ವಿತರಣೆ, ಸಾಧಕರಿಗೆ ಸನ್ಮಾನ
ಕುಂದಾಪುರ:ಯುವ ಜನತೆ,ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಎಲ್ಲಾ ಅಡೆತಡೆಗಳನ್ನು ಮೀರಿ ಸಾಗಬೇಕು.ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ.ನಾವು ಸಾಧಿಸುವ ಯೋಜನೆ ಮಾಡುವುದು ಎಲ್ಲಾ ಮುಗಿದ ಮೇಲೆ ಹಾಗಾಗಬಾರದು, ಮೊದಲೇ ಯೋಚಿಸಿ ಯಶಸ್ವಿನ ಕಡೆಗೆ ಸಾಗಬೇಕು ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸಂಘಟನಾ ಕಾರ್ಯದರ್ಶಿ ನರೇಂದ್ರ ಕುಮಾರ ಕೋಟ ಹೇಳಿದರು. ಅವರು ಭಾನುವಾರ ಗಾಣಿಗ ಯುವ ಸಂಘಟನೆ, ಕೋಟೇಶ್ವರ ಘಟಕ, ಗಾಣಿಗ ಮಹಿಳಾ ಸಂಘಟನೆ, ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಗಾಣಿಗ ಸಮಾಜದ ಕೋಟೇಶ್ವರ ಘಟಕ […]