ಮುಂಬೈ ನ್ಯಾಯವಾದಿ ಬಂಧನ:ಹಿಂದು ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ
ಉಡುಪಿ : ಮುಂಬೈನ ನ್ಯಾಯವಾದಿ ಸಂಜೀವ ಪುನಾಳೆಕರ ಬಂಧನ ಖಂಡಿಸಿ, ಅವರನ್ನು ಕೂಡಲೇ ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಸೋಮವಾರ ಉಡುಪಿಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಜನಾಜಾಗೃತಿ ಸಮಿತಿಯ ವಿಶ್ವನಾಥ್ ನಾಯಕ್ , ವಿಧಿಜ್ಞ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಸಂಜೀವ ಪುನಾಳೆಕರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ ಭಾವೆ ಅವರನ್ನು ಕೇಂದ್ರೀಯ ತನಿಖಾ ತಂಡ (ಸಿಬಿಐ) ದಾಭೊಲಕರ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಯೊಬ್ಬ ನೀಡಿರುವ ಹೇಳಿಕೆ ಮೇರೆಗೆ ಬಂಧಿಸಿರುವುದು […]
ರಾಜೇಂದ್ರ ಕುಮಾರ್ ಸಹಕಾರಿ ಬಳಗಕ್ಕೆ ದ.ಕ. ಜಿಲ್ಲಾ ಸಹಕಾರಿ ಯೂನಿಯನ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಸಂಸ್ಥೆಗೆ ಮುಂದಿನ 5 ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ 13 ಸ್ಥಾನಗಳ ಚುನಾವಣೆಯಲ್ಲಿ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಸಹಕಾರಿ ಬಳಗದ 6 ಮಂದಿ ಅವಿರೋಧವಾಗಿ ಸೇರಿ 8 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ. ಮಂಗಳೂರು ತಾಲೂಕಿನ ಪ್ರಾ.ಕೃ. ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನೀಲಯ ಎಂ. ಅಗರಿ, ಜಿಲ್ಲೆಯ ಮಾರಾಟ ಸಹಕಾರಿ ಸಂಘಗಳ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಹಕಾರಿ […]
ನ್ಯಾಯವಾದಿ ಗಿರೀಶ್ ಐತಾಳ್ ಅವರಿಗೆ ‘ಭಾರತ ಜ್ಯೋತಿ ರಾಷ್ಟ್ರಪ್ರಶಸ್ತಿ’
ಉಡುಪಿ :ನ್ಯಾಯವಾದಿ ಬಿ ಗಿರೀಶ್ ಐತಾಳ್ ಅವರು ಸಮಾಜ ಸೇವೆಗಾಗಿ ‘ಭಾರತ ಜ್ಯೋತಿ ರಾಷ್ಟ್ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅವರು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜೂ. 30ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕಳೆದೆರಡು ವರ್ಷದಲ್ಲಿ ಐತಾಳರು ಜಾತಿಭೇದವಿಲ್ಲದೆ ಸುಮಾರು 127 ಜೋಡಿಗಳಿಗೆ ವಿವಾಹ ಮಾಡಿಸಿದ್ದಾರೆ. ಸುಮಾರು 180 ಬಡಕುಟುಂಬಗಳಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದನ್ನು ಗುರುತಿಸಿ ಪ್ರಶಸ್ತಿ ಲಬಿಸಿದೆ.
ಚಿತ್ರಕಲೆ, ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ ಪ್ರವೇಶ ಪ್ರಾರಂಭ
ಉಡುಪಿ, ಮೇ 27: ಕನ್ನಡ ವಿಶ್ವವಿದ್ಯಾಲಯ ಹಂಪಿ ಬಾದಾಮಿ ಕೇಂದ್ರಗಳಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಹಾಗೂ ಶಿಲ್ಪಕಲೆ ಪದವಿ ಕೋರ್ಸ್‍ಗಳ ವ್ಯಾಸಂಗಕ್ಕೆ 2019-20 ನೇ ಸಾಲಿಗೆ ಪ್ರವೇಶಗಳು ಪ್ರಾರಂಭವಾಗಿದ್ದು, ಪಿ.ಯಿ.ಸಿ /ಐ.ಟಿ.ಐ/ ಜೆ.ಓ.ಡಿ.ಸಿ ಹಾಗೂ ತತ್ಸಮಾನ(10+2) ಪರೀಕ್ಷೆಯಲ್ಲಿ ಪಾಸಾದ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ವಿಶ್ವ ವಿದ್ಯಾನಿಲಯ ಹಂಪಿಯ ವಿಸ್ತರಣಾ ಕೇಂದ್ರವಾದ ಬಾದಾಮಿ ಬನಶಂಕರಿಯಲ್ಲಿ ನಡೆಸಲಾಗುತ್ತಿರುವ ಚಿತ್ರಕಲೆ ಮತ್ತು ಶಿಲ್ಪಕಲೆಯ ನಾಲ್ಕು ವರ್ಷದ ಪದವಿ ತರಗತಿಗಳು ಇನ್ನಿತರ ಸಾಮಾನ್ಯ ಪದವಿಗಳಾದ ಬಿಎ/ಬಿ.ಕಾಂ/ಬಿ.ಎಸ್.ಸಿ/ಬಿ.ಎಸ್.ಡಬ್ಲ್ಯೂ ಇನ್ನಿತರ ತತ್ಸಮಾನ ಪದವಿಗಳಂತೆ ಪದವಿ ಹಂತದ […]
ರಂಗ ಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ
ಉಡುಪಿ, ಮೇ 27: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗ ಶಿಕ್ಷಣ ಡಿಪ್ಲೋಮಾ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಶಿಕ್ಷಣದ ಅವಧಿ ಒಂದು ವರ್ಷ. ಕನಿಷ್ಟ ವಿದ್ಯಾರ್ಹತೆ ಎಸ್‍ಎಸ್‍ಎಲ್‍ಸಿ ಆಗಿದ್ದು ಪದವಿಧರರಿಗೆ ಆಧ್ಯತೆ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ನೀಡಲಾಗುತ್ತದೆ. ಕರ್ನಾಟಕ ಹಾಗೂ ಭಾರತದ ರಂಗತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತದೆ. ಒಂದು ವರ್ಷದಲ್ಲಿ ಭಾರತೀಯ ರಂಗಭೂಮಿ, ಕನ್ನಡ ರಂಗಭೂಮಿ ಮತ್ತು ಸಾಹಿತ್ಯ ಪರಂಪರೆ, ಪಾಶ್ಚಾತ್ಯ ರಂಗಭೂಮಿ, ಅಭಿನಯ, ಆಹಾರ್ಯ, ಶಿಕ್ಷಣದಲ್ಲಿ […]