ಮುಂಬೈ ನ್ಯಾಯವಾದಿ ಬಂಧನ:ಹಿಂದು ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ : ಮುಂಬೈನ ನ್ಯಾಯವಾದಿ ಸಂಜೀವ ಪುನಾಳೆಕರ ಬಂಧನ ಖಂಡಿಸಿ, ಅವರನ್ನು ಕೂಡಲೇ ಬಿಡುಗಡೆ ಗೊಳಿಸಬೇಕೆಂದು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಸೋಮವಾರ ಉಡುಪಿಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ  ಜನಾಜಾಗೃತಿ ಸಮಿತಿಯ  ವಿಶ್ವನಾಥ್ ನಾಯಕ್ ,  ವಿಧಿಜ್ಞ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಸಂಜೀವ ಪುನಾಳೆಕರ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ವಿಕ್ರಮ ಭಾವೆ ಅವರನ್ನು ಕೇಂದ್ರೀಯ ತನಿಖಾ ತಂಡ (ಸಿಬಿಐ) ದಾಭೊಲಕರ ಹತ್ಯೆ ಪ್ರಕರಣದಲ್ಲಿ ಶಂಕಿತ ಆರೋಪಿಯೊಬ್ಬ ನೀಡಿರುವ ಹೇಳಿಕೆ ಮೇರೆಗೆ ಬಂಧಿಸಿರುವುದು ಖಂಡನೀಯ ಎಂದರು. ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಸರ್ಕಾರ
ಅಧಿಕಾರದಲ್ಲಿರುವಾಗಲೇ ಇದು ನಡೆಯುತ್ತಿರುವುದು ಹಿಂದುಗಳಿಗೆ ಆಘಾತಕಾರಿಯಾಗಿದೆ.
ಪುನಾಳೆಕರ ಅವರನ್ನು ಷಡ್ಯಂತ್ರದಿಂದ ಬಂಧಿಸಿ, ಉದ್ದೇಶಪೂರ್ವಕವಾಗಿ ಹಿಂದುಗಳನ್ನು
ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ಆದ್ದರಿಂದ ಸಿಬಿಐ ಮಾಡಿದ ಈ ಕೃತ್ಯ
ಸಂವಿಧಾನದ ಹಕ್ಕು ಹಿಸುಕುವಂತಾಗಿದೆ ಎಂದು ಹೇಳಿದರು.
  ಈ ಸಂದರ್ಭದಲ್ಲಿ ಸಮಿತಿಯ  ನವೀನ್ ಕುಮಾರ್, ಲಕ್ಷ್ಮೀನಾರಾಯಣ ನಾಯಕ್,  ಗೋಪಾಲಕೃಷ್ಣ ಮಲ್ಯ ,  ಸತೀಶ್ ಕಿಣಿ ಹಾಗೂ ಇತರರು ಉಪಸ್ಥಿತರಿದ್ದರು.