ಸೂರತ್ ಕಟ್ಟಡದಲ್ಲಿ ಬೆಂಕಿ ಅವಘಡ- 20 ವಿದ್ಯಾರ್ಥಿಗಳು ದಾರುಣ ಸಾವು
ಸೂರತ್, ಮೇ 25: ಗುಜರಾತ್ ನ ಸೂರತ್ ನಲ್ಲಿರುವ ತಕ್ಷಿಲಾ ಆರ್ಕೇಡ್ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿ ಅವಘಡ ಕನಿಷ್ಠ 20 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಂಜೆ 4 ಗಂಟೆ ಸುಮಾರಿಗೆ ಕಟ್ಟಡದ ಎರಡನೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗೆಯೇ ಅದು ಮೇಲ್ಭಾಗಕ್ಕೂ ಆವರಿಸಿತ್ತು. ಈ ಕಟ್ಟಡದಲ್ಲಿ ನಾಲ್ಕು ವಿಭಿನ್ನ ಕೋಚಿಂಗ್ ಕೇಂದ್ರಗಳು ನಡೆಯುತ್ತಿದ್ದವು. ಬೆಂಕಿಯ ಜ್ವಾಲೆ ಮತ್ತು ದಟ್ಟವಾದ ಹೊಗೆ ಆವರಿಸಿದಾಗ ಅದರಿಂದ ತಪ್ಪಿಸಿಕೊಳ್ಳಲು ಅನೇಕ ವಿದ್ಯಾರ್ಥಿಗಳು ಕಟ್ಟಡದಿಂದ ಹೊರಕ್ಕೆ ಜಿಗಿದಿದ್ದರು. […]
ರಿಯಲ್ ಸ್ಟಾರ್ ಉಪೇಂದ್ರ ಅವರ “ಬುದ್ದಿವಂತ-2” ಚಿತ್ರದ ಪೋಸ್ಟರ್ ಬಿಡುಗಡೆ
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ “ಬುದ್ಧಿವಂತ-2” ಹೆಸರಿನಲ್ಲಿ ಮತ್ತೊಂದು ಸಿನಿಮಾ ಬರುತ್ತಿದ್ದು, ವಿಶೇಷವಾಗಿ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಎರಡು ಪೋಸ್ಟರ್ ಗಳ ಮೂಲಕ ಉಪೇಂದ್ರ ದರ್ಶನವನ್ನು ನಿರ್ದೇಶಕರು ಮಾಡಿಸಿದ್ದಾರೆ. ಎರಡೂ ಪೋಸ್ಟರ್ ಗಳು ಒಂದಷ್ಟು ಕುತೂಹಲ ಹುಟ್ಟಿಸಿವೆ. ಮೌರ್ಯ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ನಟಿ ಸೋನಾಲ್ ಹಾಗೂ ಮೇಘನಾ ರಾಜ್ ಚಿತ್ರದ ನಾಯಕಿಯರಾಗಿದ್ದು, ನಟ ಆದಿತ್ಯ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬುದ್ಧಿವಂತ 2 ಎಂಬ ಹೆಸರಿನ ಕಾರಣ ಸಿನಿಮಾದ ಮೇಲೆ ನಿರೀಕ್ಷೆ ದೊಡ್ಡದಾಗಿದೆ. […]
ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ, ಆಳ್ವಾಸ್ ನ ಸುಜ್ಞಾನ್ ಆರ್. ಶೆಟ್ಟಿ ರಾಜ್ಯಕ್ಕೆ ಪ್ರಥಮ
ಮೂಡುಬಿದಿರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪಕರ ಎಡವಟ್ಟಿನಿಂದ ಕಡಿಮೆ ಅಂಕ ಪಡೆದಿದ್ದ ಕರಾವಳಿಯ ಮತ್ತೊಬ್ಬ ಬಾಲಕ ಮರುಮೌಲ್ಯ ಮಾಪನದಲ್ಲಿ ಗರಿಷ್ಠ ಅಂಕ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಸುಜ್ಞಾನ್ ಆರ್. ಶೆಟ್ಟಿ ಮರುಮೌಲ್ಯಮಾಪನದಲ್ಲಿ 625ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನಿಯಾಗಿ ಮೂಡಿಬಂದಿದ್ದಾನೆ. ಮೂಡುಬಿದಿರೆಯ ಅರತಿ ಹಾಗೂ ರಮೇಶ್ ಶೆಟ್ಟಿ ದಂಪತಿಯ ಪುತ್ರನಾಗಿರುವ ಸುಜ್ಞಾನ್ ಆರ್. ಶೆಟ್ಟಿ ಅವರನ್ನು ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಅಭಿನಂದಿಸಿದ್ದಾರೆ.
ಕುವೈತ್ನಲ್ಲಿ ಸಂಕಷ್ಟದಲ್ಲಿರುವ ಮಂಗಳೂರಿನ ಯುವಕರು:ಸಮಸ್ಯೆ ಬಗೆಹರಿಸಲಾಗುವುದು ಎಂದ ಡಿ.ವಿ.ಎಸ್
ಮಂಗಳೂರು: ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್’ಮೆಂಟ್ ಕಂಪೆನಿ ನಗರದ 34 ಮಂದಿ ಯುವಕರನ್ನು ವಿದೇಶಕ್ಕೆ ಕರೆದೊಯ್ದು ಸೂಕ್ತ ಉದ್ಯೋಗ ಕಲ್ಪಿಸದೆ ವಂಚಿಸಿದ ಘಟನೆ ಈಗಾಗಲೇ ಜನಾಕ್ರೋಶಕ್ಕೆ ಕಾರಣವಾಗಿ ಸುದ್ದಿಯಲ್ಲಿರುವ ಬೆನ್ನಲ್ಲೇ ಡಿ.ವಿ.ಸದಾನಂದ ಗೌಡ ಈ ಘಟನೆಗೆ ಪ್ರತಿಕ್ರಿಯಿಸಿದ್ದು ಕುವೈತ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ಬಗ್ಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಲಾಗಿದೆ. ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಲಾಗುತ್ತದೆ. ಈ ಬಗ್ಗೆ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರಿಗೂ ತಿಳಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಮಾಣಿಕ್ಯ ಅಸೋಸಿಯೇಟ್ಸ್ ಪ್ಲೇಸ್’ಮೆಂಟ್ ಎಂಬ ಕಂಪೆನಿಯಿಂದ ವಂಚನೆಗೊಳಗಾದ 34 […]
ಕ್ರೀಡಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ
ಉಡುಪಿ :2018-19 ನೇ ಸಾಲಿನಲ್ಲಿ ಮಾಧ್ಯಮಿಕ ಅಥವಾ ಪ್ರೌಢಶಾಲೆಯಲ್ಲಿ ( 6 ರಿಂದ 10 ನೇ ತರಗತಿ) ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಜನವರಿ 1, 2018 ರಿಂದ ಮಾರ್ಚ್ 31, 2019 ರವರೆಗೆ ಕ್ರೀಡಾ ಸಾಧನೆ ಪರಿಗಣಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ವಾಷಿಕ 10000 ರೂ. ಪ್ರೋತ್ಸಾಹಿತ ಕ್ರೀಡಾ ವೇತನ ನೀಡಲಾಗುತ್ತಿದೆ. ರಾಜ್ಯ ಕ್ರೀಡಾ ಪ್ರಾಧಿಕಾರದಲ್ಲಿ ನೊಂದಾಯಿತ ಕ್ರೀಡಾ ಸಂಸ್ಥೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು, ರಾಷ್ಟ್ರ ಮಟ್ಟದ […]